ಬೆಂಗಳೂರು : ಪದವಿ ಪೂರ್ವ ಶಿಕ್ಷಣ ಇಲಾಖೆ ಸಪ್ಟೆಂಬರ್ 7 ರಿಂದ 18ರ ವರೆಗೆ ನಿಗದಿಯಾಗಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದೆ. ತಾಂತ್ರಿ ಕಾರಣದಿಂದಾಗಿ ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿರುವುದಾಗಿ ಪದವಿ ಪೂರ್ವ ಪರೀಕ್ಷಾ ಮಂಡಳಿಯ ನಿರ್ದೇಶಕಿ ಕನಗವಲ್ಲಿ ಅವರು ತಿಳಿಸಿದ್ದಾರೆ.

ಪದವಿ ಪೂರ್ವ ಶೀಕ್ಷಣ ಇಲಾಖೆ ಪ್ರಕಟಿಸಿದ ವೇಳಾಪಟ್ಟಿಯಂತೆ ಸಪ್ಟೆಂಬರ್ 7 ರಿಂದ 9ರ ವರೆಗೆ ಪರೀಕ್ಷೆಗಳು ನಡೆಯಲಿವೆ. ಸಪ್ಟೆಂಬರ್ 7 ರಂದು ಬೆಳಗ್ಗೆ 10.15 ರಿಂದ 1.30ರ ವರೆಗೆ ಉರ್ದು/ಸಂಸ್ಕೃತ, ಮಧ್ಯಾಹ್ನ 2.15ರಿಂದ 5.30ರ ವರೆಗೆ ಮಾಹಿತಿ ತಂತ್ರಜ್ಞಾನ, ರಿಟೈಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಮತ್ತು ವೆಲ್ ನೆಸ್ ಹಾಗೂ ಗೃಹ ವಿಜ್ಞಾನ ಪರೀಕ್ಷೆಗಳು ನಡೆಯಲಿವೆ.

ಸಪ್ಟೆಂಬರ್ 8 ರಂದು ಇತಿಹಾಸ, ಸಂಖ್ಯಾಶಾಸ್ತ್ರ ಮತ್ತು ಜೀವಶಾಸ್ತ್ರ, ಸಪ್ಟೆಂಬರ್ 9ರಂದು ತಮಿಳು, ತೆಲುಗು, ಮಲಯಾಲಂ, ಮರಾಠಿ, ಅರೇಬಿಕ್ ಹಾಗೂ ಫ್ರೆಂಚ್, ಸಪ್ಟೆಂಬರ್ 10ರಂದು 10.15 ರಿಂದ 1.30ರ ವರೆಗೆ ಇಂಗ್ಲೀಷ್, ಸಪ್ಟೆಂಬರ್ 11ರಂದು ಐಶ್ಚಿಕ ಕನ್ನಡ, ಎಲೆಕ್ಟ್ರಾನಿಕ್ಸ್, ಗಣಕ ವಿಜ್ಞಾನ ಹಾಗೂ 2.15ರಿಂದ 5.30ರ ವರೆಗೆ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹಾಗೂ ಭೂಗರ್ಭ ಶಾಸ್ತ್ರ ಪರೀಕ್ಷೆ ನಡೆಯಲಿದೆ.

ಸಪ್ಟೆಂಬರ್ 12ರಂದು ಅರ್ಥಶಾಸ್ತ್ರ ಹಾಗೂ ಭೌತಶಾಸ್ತ್ರ ಪರೀಕ್ಷೆಗಳು ನಡೆದ್ರೆ, ಅಗಸ್ಟ್ 14ರಂದು ತರ್ಕ ಶಾಸ್ತ್ರ, ವ್ಯವಹಾರ ಅಧ್ಯಯನ, ರಸಾಯನ ಶಾಸ್ತ್ರ ಶಿಕ್ಷಣ ಪರೀಕ್ಷೆ ನಿಗದಿಯಾಗಿದೆ. ಉಳಿದಂತೆ ಸಪ್ಟೆಂಬರ್ 15 ರಂದು ಕನ್ನಡ, ಸಪ್ಟೆಂಬರ್ 16 ರಂದು ರಾಜ್ಯ ಶಾಸ್ತ್ರ ಹಾಗೂ ಬೇಸಿಕ್ ಮ್ಯಾಥ್ಸ್ ಪರೀಕ್ಷೆ ನಡೆಯಲಿದೆ. ಸಪ್ಟೆಂಬರ್ 18ರಂದು ಸಮಾಜಶಾಸ್ತ್ರ, ಲೆಕ್ಕಶಾಸ್ತ್ರ, ಗಣಿತ ಹಾಗೂ ಸಪ್ಟೆಂಬರ್ 19 ರಂದು ಭೂಗೋಳ ಶಾಸ್ತ್ರ ಹಾಗೂ ಮಧ್ಯಾಹ್ನ ಮನಃಶಾಸ್ತ್ರ ಪರೀಕ್ಷೆ ನಡೆಯಲಿದೆ. ನೂತನ ವೇಳಾಪಟ್ಟಿಯಲ್ಲಿ ಎಲ್ಲಾ ಕಾಲೇಜುಗಳಲ್ಲಿಯೂ ಪ್ರಕಟಿಸುವಂತೆ ಶಿಕ್ಷಣ ಇಲಾಖೆ ಸೂಚನೆಯನ್ನು ನೀಡಿದೆ.



