ಬೆಂಗಳೂರು : ಕೊರೋನಾ ನಾಲ್ಕನೇ ಅಲೆಯ ಭೀತಿಯ ನಡುವೆಯೂ ರಾಜ್ಯದಲ್ಲಿ ಶೈಕ್ಷಣಿಕ ಚಟುವಟಿಕೆ ಚುರುಕುಗೊಂಡಿದೆ. ಈಗಾಗಲೇ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟ ಗೊಂಡಿದ್ದು, ಅನುತ್ತೀರ್ಣಗೊಂಡವರಿಗಾಗಿ ರಾಜ್ಯ ಶಿಕ್ಷಣ ಇಲಾಖೆ ಪೂರಕ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯದಲ್ಲಿ SSLC ಪೂರಕ ಪರೀಕ್ಷೆಯ (SSLC Supplementary Examination) ವೇಳಾಪಟ್ಟಿ ಪ್ರಕಟಗೊಂಡಿದ್ದು, ಜೂನ್ 27ರಿಂದ ಜುಲೈ 4ರವರೆಗೆ SSLC ಪೂರಕ ಪರೀಕ್ಷೆ ನಡೆಯಲಿದೆ.
ಶಿಕ್ಷಣ ಇಲಾಖೆ ಪ್ರಕಟಿಸಿದ SSLC ಪೂರಕ ಪರೀಕ್ಷೆ ವೇಳಾಪಟ್ಟಿ ಇಂತಿದೆ.
ಜೂನ್ 27 ರಂದು ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ ಪರೀಕ್ಷೆ ನಡೆಯಲಿದೆ. ಜೂನ್ 28 ರಂದು ಪ್ರಥಮ ಭಾಷೆ ಕನ್ನಡ, ತೆಲುಗು, ಇಂಗ್ಲಿಷ್, ಮರಾಠಿ, ಉರ್ದು, ಸಂಸ್ಕೃತ ಪರೀಕ್ಷೆ ಇದೆ. ಇನ್ನು ಜೂನ್ 29 ದ್ವೀತಿಯ ಭಾಷೆ (ಇಂಗ್ಲಿಷ್- ಕನ್ನಡ) ಪರೀಕ್ಷೆ ಜರುಗಲಿದ್ದು, ಜೂನ್ 30 : ಸಮಾಜಶಾಸ್ತ್ರ ಪರೀಕ್ಷೆ ಇದೆ. ಜುಲೈ 1 : ತೃತೀಯ ಭಾಷೆ (ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು) ಹಾಗೂ ಜುಲೈ 2 : ಎಲಿಮೆಂಟ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಲ್ ಇಂಜಿನಿಯರಿಂಗ್- 2, ಇಂಜಿನಿಯರಿಂಗ್ ಗ್ರಾಫಿಕ್ಸ್ 2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ ಜುಲೈ 4 : ಗಣಿತ, ಸಮಾಜಶಾಸ್ತ್ರ ಪರೀಕ್ಷೆ ನಡೆಯಲಿದೆ.
ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಗೆ ಇದ್ದಂತ ನಿಯಮಗಳೇ ಪೂರಕ ಪರೀಕ್ಷೆಗೂ ಅನ್ವಯವಾಗಲಿದೆ. ಮೇ 19 ರಂದು ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತ್ತು. ರಾಜ್ಯದಲ್ಲಿ ಶೇಕಡಾ 85.63 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, 90.29 ರಷ್ಟು ಹೆಣ್ಣುಮಕ್ಕಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ರಾಜ್ಯದ 3,920 ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಸಾಧಿಸಿದ್ದರೇ, ರಾಜ್ಯದ 20 ಶಾಲೆಗಳು ಶೂನ್ಯ ಫಲಿತಾಂಶ ದಾಖಲಿಸಿದ್ದವು. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ಕೊರೋನಾದಿಂದ ಶೈಕ್ಷಣಿಕ ಚಟುಚಟಿಕೆಗಳು ಸ್ಥಗಿತಗೊಂಡಿದ್ದು, 2021 ರಲ್ಲಿ ಅತ್ಯಂತ ಸರಳವಾಗಿ ಪರೀಕ್ಷೆ ನಡೆಸಿದ್ದ ಸರ್ಕಾರ ಅತ್ಯಂತ ಲಿಬರಲ್ ಆಗಿ ಮೌಲ್ಯಮಾಪನ ಮಾಡೋದಾಗಿ ಮೊದಲೇ ಘೋಷಿಸಿ ಪರೀಕ್ಷೆ ನಡೆಸಿತ್ತು.
ಇದನ್ನೂ ಓದಿ : Karnataka 2nd PUC Result : ದ್ವಿತೀಯ ಪಿಯುಸಿ ಟಾಪರ್ಗಳು ಹಾಗೂ ಜಿಲ್ಲಾವಾರು ಟಾಪ್ ಲಿಸ್ಟ್ ಇಲ್ಲಿದೆ ನೋಡಿ
ಇದನ್ನೂ ಓದಿ : Laughter Therapy:ಎಲ್ಲೆಡೆ ಜನಪ್ರಿಯತೆ ಪಡೆಯುತ್ತಿದೆ ‘ಲಾಫ್ಟರ್ ಥೆರಪಿ’; ಸ್ಟ್ರೆಸ್ ನಿವಾರಣೆಗೆ ಇದುವೇ ಬೆಸ್ಟ್
SSLC Supplementary Examination in the Karnataka from June 27th