ದಾವಣಗೆರೆ : ಆಕೆ ಪ್ರತಿಭಾನ್ವಿತ ವಿದ್ಯಾರ್ಥಿನಿ. ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಬರುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಳು. ಆದರೆ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದು. ಹೀಗಾಗಿ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದಾಗ ವಿದ್ಯಾರ್ಥಿನಿಗೆ ಬಿಗ್ ಶಾಕ್ ಎದುರಾಗಿದೆ.

ದಾವಣಗೆರೆ ಜಿಲ್ಲೆಯ ತ್ಯಾವಣಿಗೆ ಸಮೀಪದ ಬೆಳಲಗೆರೆ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಕೆ.ಎಚ್. ಅವರ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಸಮಾಜ ವಿಜ್ಞಾನ ವಿಷಯದಲ್ಲಿ ಕೇವಲ 14 ಅಂಕ ಬಂದಿತ್ತು. ಹೆಚ್ಚು ಅಂಕ ಬರುತ್ತೆ ಅಂತಾ ನಿರೀಕ್ಷೆಯಲ್ಲಿದ್ದ ಅಕ್ಷತಾ ಪೋಷಕರಿಗೆ ಶಾಕ್ ಆಗಿತ್ತು. ಅನುಮಾನಗೊಂಡು ಮರು ಮೌಲ್ಯ ಮಾಪನಕ್ಕೆ ಅರ್ಜಿ ಹಾಕಿದಾಗ ಉತ್ತರ ಪತ್ರಿಕೆಯನ್ನು ಬದಲಾವಣೆ ಮಾಡಿರುವುದರ ಜೊತೆಗೆ ಆಕೆಯ ನೋಂದಣಿ ಸಂಖ್ಯೆಯನ್ನು ಕೂಡ ತಿದ್ದುಪಡಿ ಮಾಡಿರುವುದು ಬೆಳಕಿಗೆ ಬಂದಿದೆ.

ಉಳಿದ ವಿಷಯಗಳಲ್ಲಿ ಅತೀ ಹೆಚ್ಚು ಅಂಕ ಬಂದಿದ್ರೂ ಕೂಡ ಸಮಾಜ ವಿಜ್ಞಾನದಲ್ಲಿ ಮಾತ್ರವೇ ಕಡಿಮೆ ಅಂಕ ಬಂದಿತ್ತು. ಮೌಲ್ಯ ಮಾಪಕರು ಮಾಡಿದ ಎಡವಟ್ಟು ಇದೀಗ ಪ್ರತಿಭಾನ್ವಿತ ವಿದ್ಯಾರ್ಥಿನಿಯ ಭವಿಷ್ಯಕ್ಕೆ ಕೊಳ್ಳಿಯಿಟ್ಟಿದೆ. ಶಿಕ್ಷಣ ಸಚಿವರು ಈ ಬಗ್ಗೆ ಎಚ್ಚೆತ್ತು ವಿದ್ಯಾರ್ಥಿನಿಗೆ ನ್ಯಾಯಕೊಡಿಸುವ ಕಾರ್ಯವನ್ನು ಮಾಡಬೇಕಾಗಿದೆ.