ಬೆಂಗಳೂರು : ರಾಜ್ಯದಲ್ಲಿ 6 ರಿಂದ 12ನೇ ತರಗತಿಗಳ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಇದೇ ಸಂದರ್ಭದಲ್ಲಿ ಶಾಲಾ ಶುಲ್ಕ ಹೆಚ್ಚಳ ಕೂಡ ಆಗಲಿದೆ ಎನ್ನುವ ಶಾಕ್ ನಲ್ಲಿ ಪೋಷಕರಿದ್ದರು. ಇಂತಹ ಪೋಷಕರಿಗೆ ಗುಡ್ ನ್ಯೂಸ್ ಸದ್ಯದಲ್ಲೇ ದೊರೆಯಲಿದೆ. ಯಾಕೆಂದ್ರೇ ಹೈಕೋರ್ಟ್ ಗೆ ಶೇ.30ರಷ್ಟು ಶಾಲಾ ಶುಲ್ಕ ವಿನಾಯ್ತಿಗೆ ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸೋದಕ್ಕೆ ಚಿಂತನೆ ನಡೆಸಿದೆ.
ಈ ಕುರಿತಂತೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಹಿತಿ ನೀಡಿದ್ದು, ಶಾಲಾ ಶುಲ್ಕವನ್ನು ಶೇ.15ರಷ್ಟು ವಿನಾಯ್ತಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಆದ್ರೇ ಸರ್ಕಾರ ಶೇ.30ರಷ್ಟು ವಿನಾಯ್ತಿಗಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸೋದಕ್ಕೆ ಚಿಂತನೆ ನಡೆಸಿದೆ ಎಂದರು.
ಇದನ್ನೂ ಓದಿ: Free Sand : ಉಚಿತ ಮರಳು ನೀಡೋದಾಗಿ ಆಶ್ವಾಸನೆ ಕೊಟ್ಟು, ಕೈಕೊಟ್ಟ ಸಚಿವರು
ಈಗಾಗಲೇ ಕೊರೋನಾ ನಂತ್ರ ಶಾಲಾ ಪೋಷಕರ ಮಕ್ಕಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಸಂಕಷ್ಟದಲ್ಲಿರುವಂತ ಶಾಲಾ ಮಕ್ಕಳ ಪೋಷಕರಿಗೆ ಶೇ.15ರಷ್ಟು ಶುಲ್ಕ ವಿನಾಯ್ತಿ ಹೊರೆಯಾಗಲಿದೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಹೈಕೋರ್ಟ್ ಗೆ ಶೇ.30ರಷ್ಟು ಶಾಲಾ ಶುಲ್ಕ ವಿನಾಯ್ತಿಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ: Mantri Mall Lock : 27 ಕೋಟಿ ತೆರಿಗೆ ಬಾಕಿ : ಮಂತ್ರಿಮಾಲ್‌ಗೆ ಬೀಗ ಜಡಿದ ಬಿಬಿಎಂಪಿ
(Govt to provide good news for parents: 30% school fee exemption!)