ಭಾನುವಾರ, ಏಪ್ರಿಲ್ 27, 2025
Homeeducationಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

ಬೇಸಿಗೆ ರಜೆ ವಿಸ್ತರಣೆ ? ಜೂನ್ ಎರಡನೇ ವಾರದಲ್ಲಿ ಬಾಗಿಲು ತೆರೆಯಲಿವೆ ಶಾಲೆಗಳು !

- Advertisement -

Summer vacation extension : ರಾಜ್ಯದಲ್ಲಿ ಸದ್ಯ 5, 8 ಮತ್ತು 9 ನೇ ತರಗತಿಯ ಪರೀಕ್ಷೆ ವಿಳಂಬದ ಸಂಗತಿ ಸದ್ದು ಮಾಡುತ್ತಿದೆ. ಸದ್ಯ ಮುಂದಿನ. ಸೋಮವಾರದಿಂದ ಪರೀಕ್ಷೆ ಆರಂಭವಾಗೋ ಮುನ್ಸೂಚನೆ ಸಿಕ್ಕಿದ್ದರೂ ಸರ್ಕಾರದ ಆದೇಶಕ್ಕೆ ತಡೆ ಸಿಗೋ ಸಾಧ್ಯತೆಗಳು ದಟ್ಟವಾಗಿದೆ. ಪರೀಕ್ಷೆ ವಿಳಂಬ, ಚುನಾವಣೆ, ಬಿಸಿಲು ಹಾಗೂ ಫಲಿತಾಂಶ ಘೋಷಣೆಯು ಸೇರಿದಂತೆ ಹಲವು ಕಾರಣಕ್ಕೆ ಈ ಭಾರಿ ಬೇಸಿಗೆ ರಜೆ (Summer Holiday) ವಿಸ್ತರಣೆ ಆಗಲಿದ್ದು,  ಶಾಲಾರಂಭ (School Start) ವಿಳಂಬವಾಗೋ ಸಾಧ್ಯತೆ ಇದೆ.

Summer vacation School Holiday extension Schools will open in the second week of June
Image Credit to Original Source

ಬಿರು ಬೇಸಿಗೆ ಕಾಲಿಟ್ಟಿದೆ. ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೀರಿನ ಕೊರತೆಯೂ ಕಾಡುತ್ತಿದೆ‌. ಇದರ ಮಧ್ಯೆ ಪರೀಕ್ಷಾ ಜ್ವರವೂ ಜೋರಾಗಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ದಿನ ಗಣನೆ ನಡೆದಿದೆ. ಈ ಮಧ್ಯೆ ಐದು, ಎಂಟು ಹಾಗೂ ಒಂಬತ್ತನೇ ತರಗತಿಯ ಪರೀಕ್ಷೆ ವಿಚಾರ ಈ ಕೋರ್ಟ್ ಅಂಗಳ ತಲುಪಿದೆ.

ಸದ್ಯ ಹೈಕೋರ್ಟ್ ಪರೀಕ್ಷೆಗೆ ಅನುಮತಿ ನೀಡಿದೆ. ಸರ್ಕಾರವೂ ಬೋರ್ಡ್ ಎಕ್ಸಾಂ ಗೆ ದಿನಾಂಕ ನಿಗದಿಗೊಳಿಸಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತೊಂದರೆಯಾಗದಂತೆ ಒಂಬತ್ತು ಹಾಗೂ ಇತರ ತರಗತಿಗಳ ಪರೀಕ್ಷಾ ದಿನಾಂಕ ನಿಗದಿಪಡಿಸಲಾಗಿದೆ. ಆದರೆ ಇದೆಲ್ಲದರ ಪರಿಣಾಮ ಈ ಭಾರಿ ಬೇಸಿಗೆ ರಜೆಯ ಮೇಲಾಗಲಿದ್ದು, ಕಲಿಕೆಯ ಕಾರಣಕ್ಕೆ ಬೇಸಿಗೆ ರಜೆಯನ್ನು ಮೊಟಕುಗೊಳ್ಳುತ್ತಿತ್ತು. ಆದರೆ ಈ ಭಾರಿ ಬೇಸಿಗೆ ರಜೆ ಮುಂದುವರೆಯಲಿದ್ದು ಜೂನ್ 10 ವೇಳೆಗೆ ಶಾಲೆ ಆರಂಭವಾಗಬಹುದೆಂದು ನೀರಿಕ್ಷಿಸಲಾಗುತ್ತಿದೆ.

Summer vacation School Holiday extension Schools will open in the second week of June
Image Credit to Original Source

ಪ್ರತಿಭಾರಿಯೂ ಮೇ 24 ರ ವೇಳೆಗೆ ಶಾಲಾರಂಭ ಮಾಡಲಾಗುತ್ತಿತ್ತು. ರಿವಿಸನ್ ಹಾಗೂ ಶಾಲಾ ತರಗತಿಗಳಿಗೆ ಮಕ್ಕಳನ್ನು ಅಣಿಗೊಳಿಸುವ ಕಾರಣಕ್ಕೆ ಶಾಲಾ ಆರಂಭೋತ್ಸವ, ಶಾಲೆಗೆ ದಾಖಲೀಕರಣದಂತಹ ಹಲವು ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿತ್ತು. ಆದರೆ ಈ ಭಾರಿ ಶಾಲಾರಂಭ ಜೂನ್ ಎರಡನೇ ವಾರಕ್ಕೆ ಮುಂದೂಡಿಕೆಯಾಗುವ ಸಾಧ್ಯತೆ‌ಇದೆ. ಪ್ರತಿಭಾರಿಯೂ ಚುನಾವಣೆ ಪ್ರಕ್ರಿಯೆ ಎರಡು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಆದರೆ ಈ ಭಾರಿ ದೇಶದಾದ್ಯಂತ ಏಳು ಹಂತದಲ್ಲಿ ಚುನಾವಣೆ ನಡೆಯುತ್ತಿದೆ.

ಇದನ್ನೂ ಓದಿ : ಶಾಲೆಗಳಿಗೆ ಬೇಸಿಗೆ ರಜೆ 2024 : ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್‌ನ್ಯೂಸ್‌ ಕೊಟ್ಟ ರಾಜ್ಯ ಸರಕಾರ

ವಿಧಾನಸಭೆ, ಉಪಚುನಾವಣೆ ಹಾಗೂ ಲೋಕಸಭಾ ಚುನಾವಣೆ ಎಲ್ಲವೂ ಸೇರಿ ಹಲವು ಹಂತದಲ್ಲಿ ದೇಶದ 500 ಕ್ಕೂ ಹೆಚ್ಚು ಸ್ಥಾನಗಳಿಗೆ ಎಲೆಕ್ಷನ್ ನಡೆಯುತ್ತಿದೆ. ಹೀಗಾಗಿ ಮತದಾನದ ಬಳಿಕ ಮತ ಎಣಿಕೆಗೆ ಬರೋಬ್ಬರಿ 1 ತಿಂಗಳವರೆಗಿನ ಕಾಲಾವಲಾಶವಿದೆ. ಜೂನ್ 4. ಕ್ಕೆ ಮತ ಎಣಿಕೆ ನಡೆಯೋದರಿಂದ ಶಾಲೆಗಳು ಚುನಾವಣಾ ಆಯೋಗದ ಹಿಡಿತದಲ್ಲೇ ಇರುತ್ತವೆ. ಬಹುತೇಕ ಶಾಲೆಗಳಲ್ಲೇ ಚುನಾವಣಾ ಪ್ರಕ್ರಿಯೆ ನಡೆಯೋದು. ಚುನಾವಣೆ ಬಳಿಕ ಶಾಲೆಗಳನ್ನು ಸ್ಟ್ರಾಂಗ್ ರೂಂ ಆಗಿ ಪರಿವರ್ತಿಸೋದರಿಂದ ಶಾಲೆಗಳನ್ನು ಆರಂಭಿಸುವುದು ಕಷ್ಟ.

Summer vacation School Holiday extension Schools will open in the second week of June
Image Credit to Original Source

ಇದನ್ನೂ ಓದಿ : 5,8,9ನೇ ತರಗತಿ ಬೋರ್ಡ್‌ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ : ಸೋಮವಾರದಿಂದಲೇ ಪರೀಕ್ಷೆ ಆರಂಭ

ಹೀಗಾಗಿ ಸರ್ಕಾರ ಸಾಮೂಹಿಕ ಶಾಲಾರಂಭ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಅಡ್ಡಿಯಾಗುತ್ತದೆ. ಇದೇ ಕಾರಣಕ್ಕೆ ಈ ಭಾರಿ ಶಾಲೆಗಳು ಜೂನ್ 10 ರ ವೇಳೆಗೆ ಆರಂಭವಾಗೋ ಸಾಧ್ಯತೆ ಇದೆ. ಇನ್ನೊಂದೆಡೆ ದೇಶವೂ ಸೇರಿದಂತೆರಾಜ್ಯದ ಎಲ್ಲೆಡೆ ಬಿಸಿಲಿನ ತಾಪ ಎಲ್ಲೇ ಮೀರಿದೆ. ಹೀಗಾಗಿ ಮಕ್ಕಳು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.‌ ನೀರಿನ ಕೊರತೆಯೂ ಶಾಲೆಗಳನ್ನು ಬಾಧಿಸುತ್ತಿದೆ. ಈ ಭಾರಿ ಮಳೆಯೂ ಕೂಡ ವಿಳಂಬವಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡುತ್ತಿದ್ದಾರೆ.

ಇದನ್ನೂ ಓದಿ : ದ್ವಿತೀಯ ಪಿಯುಸಿ ಫಲಿತಾಂಶ ಯಾವಾಗ ? ಇಲ್ಲಿದೆ ಸಂಪೂರ್ಣ ಮಾಹಿತಿ, ಫಲಿತಾಂಶ ವೀಕ್ಷಿಸಲು ಕ್ಲಿಕ್‌ ಮಾಡಿ

ಈ ಎಲ್ಲ ಕಾರಣಕ್ಕೆ ಬೇಸಿಗೆ ರಜೆಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಆದರೆ ಇದರಿಂದ ಮಕ್ಕಳು ತುಂಬ ಅವಧಿಯವರೆಗೆ ಶೈಕ್ಷಣಿಕ ಚಟುವಟಿಕೆಯಿಂದ ಹೊರಗುಳಿದಂತಾಗಲಿದ್ದು ಇದು ಮಕ್ಕಳ ಕಲಿಕೆ ಹಾಗೂ ಶಾಲಾ ದಾಖಲಾತಿಯ ಮೇಲೆ ಪರಿಣಾಮ ಬೀರುತ್ತದೆ ಎಂದು ಶೈಕ್ಷಣಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಚುನಾವಣೆ,ಬಿಸಿಲು ಹಾಗೂ ಪರೀಕ್ಷಾ ವಿಳಂಬ ಶಾಲಾರಂಭದ ಅವಧಿ ವಿಸ್ತರಣೆಗೆ ಕಾರಣವಾಗ್ತಿದೆ.

Summer vacation School Holiday extension Schools will open in the second week of June

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular