ಮಂಗಳೂರು : ಮಕ್ಕಳ ದಿನಾಚರಣೆಯನ್ನು(Children’s Day) ಎಲ್ಲೆಡೆ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಶಿಕ್ಷಕರು ಮಕ್ಕಳಿಗಾಗಿ ಸಾಂಸ್ಕೃತಿಕ ಸ್ಪರ್ಧೆ, ಕಾರ್ಯಗಳನ್ನು ಆಯೋಜಿಸುವುದು ಮಾಮೂಲು. ಆದ್ರೆ ಈ ಶಾಲೆಯ ಶಿಕ್ಷಕರು ಮಕ್ಕಳಿಗಾಗಿ ನರ್ತಿಸಿದ್ದಾರೆ. ಶಿಕ್ಷಕರು -ಶಿಕ್ಷಕಿಯರ ನೃತ್ಯವನ್ನು ಕಂಡು ಮಕ್ಕಳು ಸಂಭ್ರಮಿಸಿದ್ದಾರೆ.

ಮಂಗಳೂರು ನಗರದ ಕುಲಶೇಖರದಲ್ಲಿರುವ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಜವಹಾರ್ ಲಾಲ್ ನೆಹರೂ ಅವರ ಭಾವಚಿತ್ರಕ್ಕೆ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾದ ಬರ್ನಾಡ್ ಡಿಸೋಜಾ ಹಾಗೂ ಶಾಲೆಯ ಶಿಕ್ಷಕ, ಶಿಕ್ಷಕಿಯರು ಪುಷ್ಪಾರ್ಚನೆಯನ್ನು ಮಾಡಿದ್ರು. ನಂತರ ಮಕ್ಕಳಿಗಾಗಿ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಶಾಲೆಯಲ್ಲಿ ಮಕ್ಕಳ ಮನರಂಜನೆಗಾಗಿ ಶಿಕ್ಷಕಿಯರು ನೃತ್ಯ ಮಾಡಿದ್ದಾರೆ. ಶಿಕ್ಷಕ, ಶಿಕ್ಷಕಿಯರ ಹಾಡಿಗೆ ವಿದ್ಯಾರ್ಥಿಗಳು ಮನಸೋತಿದ್ದಾರೆ. ಅದ್ರಲ್ಲೂ ತೊಂಡೆ ಕಾಯಿ ಬೆಂಡೆ ಕಾಯಿ ಹಾಡು ವಿದ್ಯಾರ್ಥಿಗಳಿಗೆ ವಿಶೇಷ ಮನರಂಜನೆಯನ್ನು ಒದಗಿಸಿದೆ.
(Teachers from Mangalore dancing in the wake of Children’s Day )