ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಗುರುವಾರ 10 ನೇ ತರಗತಿ ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಪರೀಕ್ಷೆ, ಪ್ರಾಜೆಕ್ಟ್ ವರ್ಕ್ ಮತ್ತು ಆಂತರಿಕ ಮೌಲ್ಯಮಾಪನ ಅಂಕಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಗಡುವು ವಿಸ್ತರಣೆಯಿಂದಾಗಿ ಸೆಂಟ್ರಲ್ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ಗೆ ಟರ್ಮ್ 2 ಪರೀಕ್ಷೆಗಳ ಫಲಿತಾಂಶವನ್ನು ಘೋಷಣೆ ಮಾಡುವುದು ವಿಳಂಬವಾಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಈ ಬಗ್ಗೆ ಸಿಬಿಎಸ್ಇ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸಿಬಿಎಸ್ಇ ಮಂಡಳಿಯು ಮೌಲ್ಯಮಾಪನ ಪ್ರಕ್ರಿಯೆಯನ್ನು ವೇಗಗೊಳಿಸಲು ಶಾಲೆಗಳಿಗೆ ಕೇಳಿದೆ.
ಗಡುವು ವಿಸ್ತರಣೆ ಮಾಡಿರುವುದರಿಂದ 10ನೇ ತರಗತಿಯ ಟರ್ಮ್ 1 ಹಾಗೂ ಟರ್ಮ್ 2ನ ಪ್ರಾಯೋಗಿಕ ಪರೀಕ್ಷೆಗಳು, ಪ್ರಾಜೆಕ್ಟ್ ವರ್ಕ್ ಹಾಗೂ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಅಪ್‌ಲೋಡ್ ಮಾಡಲು ಕೊನೆಯ ದಿನಾಂಕ ಮೇ 31 ಆಗಿದೆ ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಜೂನ್ 12 ಕೊನೆಯ ದಿನಾಂಕವಾಗಿದೆ.
ಶಾಲೆಗಳು ಮಾಡಿರುವ ವಿನಂತಿಗಳನ್ನು ಪರಿಗಣಿಸಿರುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ಗಡುವನ್ನು ವಿಸ್ತರಿಸುವ ನಿರ್ಧಾರವನ್ನು ಕೈಗೊಂಡಿದೆ. ಇದಕ್ಕೂ ಮೊದಲು 10 ಹಾಗೂ 12ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳು, ಪ್ರಾಜೆಕ್ಟ್ ವರ್ಕ್ ಹಾಗೂ ಆಂತರಿಕ ಮೌಲ್ಯಮಾಪನಗಳನ್ನು ಅಪ್‌ಲೋಡ್ ಮಾಡಲು ಮಾರ್ಚ್ 2 ಕೊನೆಯ ದಿನಾಂಕವಾಗಿತ್ತು.
ಶಾಲೆಗಳಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಅಪ್‌ಲೋಡ್ ಮಾಡುವ ಸಂಬಂಧ ಕೆಲಸ ಇನ್ನೂ ಬಾಕಿ ಉಳಿದಿದ್ದರೆ ಕೊನೆಯ ದಿನಾಂಕದವರೆಗೂ ಕಾಯಬೇಡಿ. ಕೂಡಲೇ ಅಪ್‌ಲೋಡ್ ಕಾರ್ಯ ಪೂರ್ಣಗೊಳಿಸಿ ಎಂದು ಸಿಬಿಎಸ್ಇ ತನ್ನ ಅಧೀನದಲ್ಲಿರುವ ಶಾಲೆಗಳಿಗೆ ಸೂಚನೆ ನೀಡಿದೆ.
ಇದನ್ನು ಓದಿ : ಮದ್ಯಪ್ರಿಯರಿಗೆ ಬಿಗ್ ಶಾಕ್ : ದುಬಾರಿಯಾಗಲಿದೆ ಮದ್ಯದ ಬೆಲೆ
ಇದನ್ನೂ ಓದಿ : IPL Crickter Umran Mailk ಭರವಸೆಯ ದ್ರುವತಾರೆ ಉಮ್ರಾನ್ ಮಲ್ಲಿಕ್
Will CBSE Term 2 Results be delayed Board Extends Deadline to Upload Practical Exam, Internal Assessment Marks