ಬೆಂಗಳೂರು : (BBMP Election Awareness) ಐಟಿ-ಬಿಟಿ ಸಿಟಿ ಎನ್ನಿಸಿಕೊಂಡಿರೋ ಬೆಂಗಳೂರಿನಲ್ಲಿ ಜನರು ಅಭಿವೃದ್ಧಿ, ಯೋಜನೆಗಳ ಬಗ್ಗೆ ಮಾತನಾಡಿದಷ್ಟು ಉತ್ಸಾಹದಲ್ಲಿ ಮತಗಟ್ಟೆಗೆ ಬರೋದೆ ಇಲ್ಲ. ಇದರ ಫಲವಾಗಿ ರಾಜ್ಯ ರಾಜಧಾನಿಯಲ್ಲೇ ಮತದಾನದ ಪ್ರಮಾಣ ಕುಗ್ಗುತ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ 100 ಕ್ಕೆ 100 ರಷ್ಟು ಮತದಾನ ಸಾಧಿಸಲು ಬಿಬಿಎಂಪಿ ನಾನಾ ಕಸರತ್ತು ನಡೆಸುತ್ತಿದೆ.
2018 ರಲ್ಲಿ ಬೆಂಗಳೂರಿನ ಮತದಾನ ದಾಖಲೆಯ ಪ್ರಮಾಣದಲ್ಲಿ ಕುಸಿದಿದೆ. ಹೀಗಾಗಿ ರಾಜ್ಯಮಟ್ಟದಲ್ಲಿ ಚುನಾವಣಾ ಆಯೋಗ ಹಾಗೂ ಜನರು ಮುಜುಗರಪಡುವ ಸ್ಥಿತಿ ಎದುರಾಗಿತ್ತು. ಶಿಕ್ಷಿತರೇ ಇರುವ ಬೆಂಗಳೂರಿನಲ್ಲಿ ಹೀಗಾದ್ರೇ ಇನ್ನೂ ಹಳ್ಳಿಗಳ ಸ್ಥಿತಿ ಏನು ಎಂದು ಪ್ರಜ್ಞಾವಂತರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಲಾರಂಭಿಸಿದ್ದರು. ಹೀಗಾಗಿ ಮತ್ತೊಂದು ಚುನಾವಣೆ ಹೊಸ್ತಿಲಿನಲ್ಲಿರೋ ಬೆಂಗಳೂರು ಸ್ಥಳಿಯ ಆಡಳಿತ ಬಿಬಿಎಂಪಿ ಈ ಭಾರಿ ಮೊದಲೇ ಎಚ್ಚೆತ್ತುಕೊಂಡಿದೆ. ನಾನಾ ರೀತಿಯಲ್ಲಿ ಮತದಾನ ಜಾಗೃತಿ (BBMP Election Awareness) ಕಾರ್ಯಕ್ರಮ ಕೈಗೊಳ್ತಿರೋ ಬಿಬಿಎಂಪಿ ಜನರನ್ನು ಮತದಾನದತ್ತ ಪ್ರೇರೇಪಿಸುವ ಕೆಲಸಮಾಡ್ತಿದೆ. ಕಸದ ಆಟೋದಲ್ಲಿ ಮತದಾನದ ಬಗ್ಗೆ ಅನೌನ್ಸ್ ಮಾಡ್ತಿರೋ ಬಿಬಿಎಂಪಿ ಸಿಬ್ಬಂದಿ, ಬೆಳ್ಳಂ ಬೆಳ್ಳಗ್ಗೆ ಮನೆ ಮನೆ ಕಸ ಎತ್ತುವ ಆಟೋಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ.
ಅಲ್ಲದೇ ಈಗಾಗಲೇ ಬಿಬಿಎಂಪಿಯಿಂದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಜೊತೆಗೂ ಮಾತನಾಡಿ ಮತದಾನ ಜಾಗೃತಿಗೆ (BBMP Election Awareness) ಕಾರ್ಯಾಗಾರ ಹಮ್ಮಿಕೊಳ್ಳಲು ಸಿದ್ಧತೆ ನಡೆಸಿದೆ. ನಗರದಾದ್ಯಂತ ಆಟೋಗಳಲ್ಲಿ ಮತದಾನ ಜಾಗೃತಿ ಮಾಡಿ ಮತದಾನದ ಪ್ರಮಾಣ ಹೆಚ್ಚಿಸಲು ಮುಂದಾದ ಪಾಲಿಕೆ ಐಟಿ ಕಂಪನಿಗಳನ್ನು ಗುರಿಯಾಗಿಸಿಕೊಂಡು ಕ್ಯಾಂಪೇನ್ ಗಳನ್ನು ನಡೆಸಿ ಮತದಾನದ ಮಹತ್ವವನ್ನು ಸಾರುವ ಪ್ರಯತ್ನ ಮಾಡ್ತಿದೆ.
ಇದನ್ನೂ ಓದಿ : Karnataka Weather Report : ಕರ್ನಾಟಕದಲ್ಲಿ ಮುಂದಿನ 4 ದಿನ ಬಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
ಇದನ್ನೂ ಓದಿ : ತುಪ್ಪ ಬೇಕು ತುಪ್ಪಾ; ರಾಜ್ಯದಲ್ಲಿ ಕೆಎಂಎಫ್ ಇದ್ರೂ ತುಪ್ಪಕ್ಕೆ ಬರ, ಹೊಟೇಲ್ – ಬೇಕರಿ ಮಾಲೀಕರ ಪರದಾಟ
BBMP Election Awareness : ಮತದಾನದ ಪ್ರಮಾಣ ಹೆಚ್ಚಿಸಲು ಸರ್ಕಸ್
ಬೆಂಗಳೂರಿನಲ್ಲಿ ಮತದಾನದ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿರುವುದರ ಬಗ್ಗೆ ಕೆಲ ದಿನಗಳ ಹಿಂದೆ ಸುದ್ದಿಗೋಷ್ಟಿ ನಡೆಸಿದ್ದ ಕೇಂದ್ರ ಚುನಾವಣಾ ಆಯೋಗವೂ ಕಳವಳ ವ್ಯಕ್ತಪಡಿಸಿತ್ತು. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 7 ವಿಧಾನಸಭಾ ಕ್ಷೇತ್ರವಿದ್ದು, 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನಲ್ಲಿ ಕಡಿಮೆ ಮತದಾನವಾಗಿದ್ದು. ಈ ವ್ಯಾಪ್ತಿಯಲ್ಲಿ ಕೇವಲ ಶೇ.57.8 ರಷ್ಟು ಮತದಾನವಾಗಿತ್ತು. ಈ ಹಿನ್ನಲೆಯಲ್ಲಿ ಈ ಬಾರಿ ಶೇ.65ರಷ್ಟು ಮತದಾನವಾಗಬೇಕೆಂದು ಚುನಾವಣಾ ಆಯೋಗವು ಗುರಿ ನೀಡಿದೆ. ಬೆಂಗಳೂರಿನಲ್ಲಿ ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆಯಂತಹ ಕಾರ್ಯಗಳು ಪ್ರಗತಿಯಲ್ಲಿದ್ದು, ಬಿಬಿಎಂಪಿ ಹಾಗೂ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲಾಡಳಿತ ಮತದಾನದ ಪ್ರಮಾಣ ಹೆಚ್ಚಿಸುವ ಸರ್ಕಸ್ (BBMP Election Awareness) ಆರಂಭಿಸಿದೆ.
ಇದನ್ನೂ ಓದಿ : Karnataka Weather Report : ಕರ್ನಾಟಕದಲ್ಲಿ ಮುಂದಿನ 4 ದಿನ ಬಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ
BBMP Election Awareness: Using Garbage Auto, BBMP Election Awareness: Voter turnout reaches 65% target