ಸೋಮವಾರ, ಏಪ್ರಿಲ್ 28, 2025
HomeElectionಕರ್ನಾಟಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆಯ ದಿನ

ಕರ್ನಾಟಕ ವಿಧಾನಸಭೆ ಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದೇ ಕೊನೆಯ ದಿನ

- Advertisement -

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಪ್ರಚಾರಕ್ಕೆ ಇಂದು (ಮೇ 8) ಕೊನೆಯ (End of open election campaign) ದಿನವಾಗಿದೆ. ಹೀಗಾಗಿ ಪ್ರತಿ ರಾಜಕೀಯ ಪಕ್ಷದವರು ಎಲ್ಲಾ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಈ ಭಾರೀ ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಪಕ್ಷದವರು ರೋಡ್‌ ಶೋ ಸೇರಿದಂತೆ ಅನೇಕ ಸಭಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ತಮ್ಮ ತಮ್ಮ ಪಕ್ಷದ ಪ್ರಣಾಳಿಕೆಯ ಬಗ್ಗೆ ಕೂಡ ಜನರಿಗೆ ತಿಳಿಸಿದ್ದಾರೆ. ಹೀಗಾಗಿ ಈ ಭಾರೀ ಕರ್ನಾಟಕದಲ್ಲಿ ಯಾವ ಪಕ್ಷ ಗದುಗೆ ಏರಲಿದೆ ಎನ್ನುವುದು ಎಲ್ಲರಿಗೂ ಸಾಕಷ್ಟು ಕುತೂಹಲ ಹುಟ್ಟಿಸಿದೆ.

ನಾಳೆಯಿಂದ ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ತಿಳಿಸಿದೆ. ಈ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಅಬ್ಬರದ ಪ್ರಚಾರಗಳೆಲ್ಲವೂ ಇಂದು ಸಂಜೆ 6 ಗಂಟೆಯೊಳಗೆ ಮುಕ್ತಾಯಗೊಳ್ಳಬೇಕು ಎಂದು ಕೂಡ ತಿಳಿಸಿದೆ. ಬಹಿರಂಗ ಪ್ರಚಾರ ಮುಗಿದ ಬಳಿಕ ಸ್ಟಾರ್ ಪ್ರಚಾರಕರು, ಮುಖಂಡರು ಕ್ಷೇತ್ರದಿಂದ ಹೊರ ಉಳಿಯಬೇಕಾಗುತ್ತದೆ. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು. ಸಂಜೆಯ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ನಿಯಮ ಉಲ್ಲಂಘಿಸಿದವರ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ. ಮತದಾನ ಮುಕ್ತಾಯದ 48 ಗಂಟೆಗೂ ಮೊದಲು ಚುನಾವಣಾ ಬಹಿರಂಗ ಪ್ರಚಾರ ಅಂತ್ಯವಾಗಲಿದೆ ಎಂದಿದೆ. ಚುನಾವಣಾ ಕಣದಲ್ಲಿ ಅಂತಿಮವಾಗಿ 2615 ಅಭ್ಯರ್ಥಿಗಳು ಉಳಿದಿದ್ದಾರೆ. ಆಪೈಕಿ 2,430 ಪುರುಷರು, 184 ಮಹಿಳೆಯರು ಮತ್ತು ಒಬ್ಬರು ಇತರರು ಕಣದಲ್ಲಿದ್ದಾರೆ. ಒಟ್ಟು 58,545 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಚುನಾವಣೆಯಲ್ಲಿ 1,15,709 ಬ್ಯಾಲೆಟ್‌ ಯೂನಿಟ್‌ ಬಳಕೆ ಮಾಡಲಾಗುತ್ತದೆ. 82,543 ಕಂಟ್ರೋಲ್‌ ಯೂನಿಟ್‌, 89,379 ವಿವಿ ಪ್ಯಾಟ್‌ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ಇದನ್ನೂ ಓದಿ : Aishwarya : ತಂದೆಗಾಗಿ ಮತಕೇಳದೇ ರಾಜ್ಯಕ್ಕಾಗಿ ಮತದಾನ ಮಾಡಿ ಎಂದ ಡಿ.ಕೆ.ಶಿವಕುಮಾರ್ ಪುತ್ರಿ‌ ಐಶ್ವರ್ಯಾ ವಿಡಿಯೋ ವೈರಲ್

ಇದನ್ನೂ ಓದಿ : ವಿಷಕಂಠನ ಸನ್ನಿಧಿಯಲ್ಲಿ ನಮೋ : ಪ್ರಧಾನಿ ಪ್ರದೋಷ ಪೂಜೆಯ ವಿಶೇಷತೇ ಏನು ಗೊತ್ತಾ ?

ರಾಜ್ಯದಲ್ಲಿ ಒಟ್ಟು 47,488 ಮಂದಿ ಸೇವ ಮತದಾರರಿದ್ದು, 11,71,558 ಮಂದಿ ಯುವ ಮತದಾರರಿದ್ದು, 5,71,281 ಮಂದಿ ವಿಕಲಚೇತನ ಹಾಗೂ 12,15,920 ಮಂದಿ 80 ವರ್ಷ ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನ ಮತದಾರರಿದ್ದಾರೆ. ಒಟ್ಟು 2,67,28,053 ಮಂದಿ ಪುರುಷ್ಟು, 2,64,00,074 ಮಂದಿ ಮಹಿಳೆಯರು ಹಾಗೂ 4,927 ಮಂದಿ ಇತರೆ ಮತದಾರರು ಸೇರಿದಂತೆ ಒಟ್ಟು 5,31,33,054 ಮದಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದಾರೆಂದು ಆಯೋಗ ಮಾಹಿತಿ ನೀಡಿದೆ.

End of open election campaign : Today is the last day for the open campaign for the Karnataka assembly elections

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular