ಸೋಮವಾರ, ಏಪ್ರಿಲ್ 28, 2025
HomeElectionGujarath election 2022: ಮೋದಿ ಪಾಳಯದ ಮಹಾ ಗೆಲುವಿನ ಮೂರು ಗುಟ್ಟು!

Gujarath election 2022: ಮೋದಿ ಪಾಳಯದ ಮಹಾ ಗೆಲುವಿನ ಮೂರು ಗುಟ್ಟು!

- Advertisement -

ಗುಜರಾತ್‌: (Gujarath election 2022) ಗುಜರಾತ್‌ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವನ್ನು ಕಂಡುಕೊಂಡಿತ್ತು. ಮೋದಿಯ ಈ ಗೆಲುವು ಇತಿಹಾಸವನ್ನೇ ಸೃಷ್ಟಿಸಿತ್ತು. ಬಿಜೆಪಿ ಎನ್ನುವುದು ಮೇಲ್ವರ್ಗದವರ ಪಕ್ಷ, ಹಿಂದುಳಿದವರಿಗೆ ಅವಕಾಶ ಕೊಡದ ಪಕ್ಷ ಅಂತಾನೇ ಬೇರೆ ಪಕ್ಷದವರು ಮಾತನಾಡಿಕೊಳ್ಳುತ್ತಿದ್ದರು. ಈ ಮಾತಿಗೆಲ್ಲ ಒಂದೇ ಭಾರಿ ಭರ್ಜರಿಯಾಗೇ ಉತ್ತರ ಕೊಟ್ಟಂತಿದೆ ಗುಜರಾತ್‌ ಚುನಾವಣೆಯ ಈ ಭರ್ಜರಿ ಜಯ.

ಗುಜರಾತ್‌ (Gujarath election 2022) ನಲ್ಲಿ ಒಟ್ಟು ಇಪ್ಪತ್ತೇಳು ಮೀಸಲಾತಿ ಕ್ಷೇತ್ರಗಳಿದ್ದು, ಇಪ್ಪತ್ತೇಳು ಎಸ್‌ ಸಿ/ಎಸ್‌ ಟಿ ಕ್ಷೇತ್ರಗಳ ಪೈಕಿ ಇಪ್ಪತ್ತನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಯ ಮೋದಿ ಪಡೆ ಭರ್ಜರಿ ಗೆಲುವನ್ನು ಪಡೆದುಕೊಂಡು ಇತಿಹಾಸ ಸೃಷ್ಟಿಸಿದೆ. ದಲಿತ ಸಮುದಾಯದವರ ಮತಗಳೇ ಬಿಜೆಪಿಗೆ ಮತವಾಗಿ ಗೆಲುವನ್ನು ತಂದುಕೊಟ್ಟಿದೆ ಎನ್ನಲಾಗುತ್ತಿದೆ. ಬಿಜೆಪಿ ತನ್ನ ಸ್ವಕ್ಷೇತ್ರಗಳನ್ನಷ್ಟೇ ಗೆದ್ದಿಲ್ಲ. ಅದಕ್ಕೂ ಮೀರಿ ತನ್ನ ಬಾಹುಗಳನ್ನು ಚಾಚಿ ಗುಜರಾತ್‌ ನಲ್ಲಿ ಗೆಲುವನ್ನು ಕಂಡುಕೊಂಡಿದೆ.

ಗುಜರಾತ್‌ ನ ಎಲ್ಲಾ ಸಮುದಾಯಗಳು ಮೋದಿ ಪಡೆಗೆ ಬೆನ್ನು ತಟ್ಟಿರೋದು ಸ್ಪಷ್ಟವಾಗಿ ತಿಳಿದು ಬರುತ್ತಿದೆ. ಗುಜರಾತ್‌ ನಲ್ಲಿ ಬುಡಕಟ್ಟು ಜನಾಂಗದವರ ಒಟ್ಟು ಮತ ಹದಿನೈದು ಶೇಕಡಾ ಎಂದು ಚುನಾವಣಾ ಆಯೋಗ ಹೇಳಿತ್ತು, ಹದಿನೈದು ಶೇಕಡಾದಲ್ಲಿ ಸಾಕಷ್ಟು ಮತಗಳು ಬಿಜೆಪಿ ಪರವಾಗಿ ಇದ್ದಿದ್ದರಿಂದಲೇ ಗುಜರಾತ್‌ ನಲ್ಲಿ ಮಹಾ ಗೆಲುವನ್ನು ಕಂಡು ದಾಖಲೆ ಬರೆಯಲು ಸಾದ್ಯವಾಯಿತು ಎನ್ನಲಾಗುತ್ತಿದೆ.

ಹಾಗಿದ್ದರೆ ಗುಜರಾತ್‌ ನ ಚುನಾವಣೆಯಲ್ಲಿ ಭರ್ಜರಿ ಜಯ ಕಂಡ ಮೋದಿ ಪಡೆಯ ಮೂರು ಗುಟ್ಟುಗಳೇನು?..
ಮೊದಲನೆಯದಾಗಿ, ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಕೂರಿಸಿದ್ದು
ಎರಡನೆಯದಾಗಿ, ಬುಡಕಟ್ಟು ಸಮುದಾಯಗಳಿಗೆ ಯೋಜನೆಗಳನ್ನು ಮುಟ್ಟಿಸಿದ್ದು,
ಮೂರನೆಯದಾಗಿ, ನರ್ಮದಾ ಪ್ರಾಜೆಕ್ಟ್‌ ಪೂರ್ಣವಾದ ಬಳಿಕ ತಂದುಕೊಟ್ಟ ಲಾಭ..

ಇದನ್ನೂ ಓದಿ : Siddaramaiah Bus Yatra: ಸಿದ್ದರಾಮಯ್ಯ ಬಸ್ ಯಾತ್ರೆಗೆ ಗ್ರೀನ್ ಸಿಗ್ನಲ್‌ : ಜನವರಿ 3 ರಂದು ಬಸ್‌ ಯಾತ್ರೆ ಆರಂಭ

ಇದನ್ನೂ ಓದಿ : CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಇವೆಲ್ಲವು ಸೇರಿ ಮೋದಿಗೆ ಗುಜರಾತ್‌ ನಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿದೆ. ಮೋದಿ ರಚಿಸಿರೋ ಪಾಳಯಕ್ಕೆ ಮುಸ್ಲಿಂ ಸಮುಧಾಯಗಳು, ದಲಿತ ಸಮುದಾಯಗಳು, ಎಲ್ಲಾ ಧರ್ಮದವರು ಹಾಗೂ ಬುಡಕಟ್ಟು ಜನಾಂಗದವರು ಅತಿ ಹೆಚ್ಚು ಸಾತ್‌ ಕೊಟ್ಟಿವೆ ಎನ್ನುವುದು ಈ ಚುನಾವಣೆಯ ಬಿಜೆಪಿ ಭರ್ಜರಿ ಗೆಲುವಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

(Gujarath election 2022) BJP had a huge victory in the Gujarat assembly elections. Modi’s victory created history. Other parties used to talk that BJP is a party of the upper classes and a party that does not give a chance to the backward. This resounding victory in the Gujarat election seems to have answered all these words in one big blow.

RELATED ARTICLES

Most Popular