ನಟ ಯಶ್ ವಿರುದ್ಧ ನಟಿ ರಿಷಿಕಾ ಸಿಂಗ್ ಹೇಳಿಕೆ : ಸಿಡಿದೆದ್ದ ರಾಕಿಂಗ್ ಸ್ಟಾರ್ ಅಭಿಮಾನಿಗಳು
ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿರುವ ರಿಷಿಕಾ ಸಿಂಗ್, 'ಐ ಆಮ್ ಟಾಕ್ಸಿಕ್' ಎಂಬ ಶೀರ್ಷಿಕೆಯಡಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಬೆನ್ನಲ್ಲೇ, ನಟಿ ರಿಷಿಕಾ ಸಿಂಗ್ ಅವರ ಬಹಿರಂಗ ವೀಡಿಯೋ ಸವಾಲು ಸ್ಯಾಂಡಲ್ವುಡ್‌ನಲ್ಲಿ ಹೊಸ ವಿವಾದದ ಕಿಡಿ ಹೊತ್ತಿಸಿದೆ. ಟ್ರೇಲರ್‌ನಲ್ಲಿ ನಟ ಯಶ್ ಅವರು ಬೋಲ್ಡ್ ಹಾಗೂ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವುದನ್ನು ಲೇವಡಿ ಮಾಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರವಾಗಿ ಹರಿಹಾಯ್ದಿದ್ದಾರೆ.
ಖ್ಯಾತ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರ ಪುತ್ರಿಯಾಗಿರುವ ರಿಷಿಕಾ ಸಿಂಗ್, 'ಐ ಆಮ್ ಟಾಕ್ಸಿಕ್' ಎಂಬ ಶೀರ್ಷಿಕೆಯಡಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅತ್ಯಂತ ತೀಕ್ಷ್ಣ ಪದಗಳನ್ನು ಬಳಸಿರುವ ಅವರು, ಹೆಣ್ಣುಮಕ್ಕಳಿಗೆ ಅಂದ ಇದ್ದರೆ ಚಂದ, ಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ ಕಂದ. ಮನೆಯಲ್ಲಿ ಹೆಂಡತಿ ಮತ್ತು ಮಗಳಿದ್ದರೂ ಹೀರೋಯಿನ್‌ಗಳ ಜೊತೆ ಈ ಚಕ್ಕಂದ ಬೇಕಿತ್ತೇ? ಹೆಣ್ಣುಮಕ್ಕಳಿಗೆ ಗೌರವ ನೀಡದಿದ್ದರೆ ನಿಮ್ಮನ್ನು ಕರ್ನಾಟಕದಿಂದ ಜಾಗ ಖಾಲಿ ಮಾಡಿಸುತ್ತೇವೆ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.
ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಅಸಮಾಧಾನಗೊಂಡಿರುವ ಯಶ್ ಅಭಿಮಾನಿಗಳು ಹಾಗೂ ನೆಟ್ಟಿಗರು ರಿಷಿಕಾ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ. ಒಪ್ಪಂದದ ಪ್ರಕಾರ ಸಂಭಾವನೆ ಪಡೆದು ನಟಿಸಿದ ಚಿತ್ರದ ನಟಿಯರಿಗೇ ಇಲ್ಲದ ಆಕ್ಷೇಪ ನಿಮಗೇಕೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಹಿಂದೆ ರಿಷಿಕಾ ಸಿಂಗ್ ಅವರು 'ಕಂಠೀರವ' ಮತ್ತು 'ಕಳ್ಳ ಮಳ್ಳ ಸುಳ್ಳ' ಚಿತ್ರಗಳಲ್ಲಿ ನಟಿಸಿದ್ದ ಬೋಲ್ಡ್ ದೃಶ್ಯಗಳು ಹಾಗೂ ಬಿಕಿನಿ ಧರಿಸಿದ್ದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಇದು ನಿಮ್ಮ ಸಂಸ್ಕಾರವೇ? ಎಂದು ಭೀಕರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲೂ ವಿವಾದಾತ್ಮಕ ಹೇಳಿಕೆ ನೀಡಿ ಸದ್ದು ಮಾಡಿದ್ದ ರಿಷಿಕಾ, ಸದ್ಯ ಚಿತ್ರರಂಗದಿಂದ ದೂರವಿದ್ದರೂ ಈ ಘಟನೆಯಿಂದ ಮತ್ತೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಒಂದು ಕಡೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದರೆ, ಮತ್ತೊಂದು ವಲಯ ನಟಿಯ ವೈಯಕ್ತಿಕ ಅಭಿಪ್ರಾಯವನ್ನು ಗೌರವಿಸಬೇಕೆಂದು ವಾದಿಸುತ್ತಿದೆ. ಸದ್ಯಕ್ಕೆ ಈ ವಿವಾದದ ಕುರಿತು ನಟ ಯಶ್ ಆಗಲಿ ಅಥವಾ 'ಟಾಕ್ಸಿಕ್' ಚಿತ್ರತಂಡವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
Topics
ಸಂಬಂಧಿತ ಸುದ್ದಿಗಳು
entertainment
ಸರ್ಜರಿ ವೇಳೆ ಆಪರೇಷನ್ ಟೇಬಲ್ನಲ್ಲೇ ಹಾಡು ಹಾಡಿದ ಸೋನು ನಿಗಮ್! ವೀಡಿಯೊ ವೈರಲ್
entertainment
‘ನೀವು ಅಲ್ಲಿರೋದಕ್ಕೆ ಲಾಯಕ್ಕಿಲ್ಲ’: ವಿನಯ್ ಗೌಡ ಮುಖಕ್ಕೇ ಹೊಡೆದಂತೆ ಅಂದ ಸ್ಪರ್ಧಿಗೆ ಶಾಕ್!
entertainment
ವಿಜಯ್ ಸೇತುಪತಿ - ಪೂರಿ ಜಗನ್ನಾಥ್ ಡ್ರಾಮಾ 'ಸ್ಲಮ್ ಡಾಗ್ : ಗೌರಿ ಹೆಗ್ಡೆ' ಪಾತ್ರದಲ್ಲಿ ಟಬು
entertainment

