Beauty Sleep : ಚಿರಯವ್ವನ ಸದಾ ನಿಮ್ಮದಾಗಿರಬೇಕೇ ? ಹಾಗಾದ್ರೆ ಪ್ರತಿದಿನ ಎಷ್ಟು ಗಂಟೆ ನಿದ್ರಿಸಬೇಕು ಗೊತ್ತಾ ?

Health Secret Beauty Sleep  : ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ಮಲಗಿದರೂ ನಿದ್ರೆ  (Sleep) ಬಂದೇ ಬರುತ್ತದೆ. ಆದರೆ ಇಂದಿನ ಅವಸರದ ಬದುಕಿನಲ್ಲಿ, ಬದುಕು ಕಟ್ಟಿಕೊಳ್ಳುವ ಭರಾಟೆಯಲ್ಲಿ ನೆಮ್ಮದಿಯ ನಿದ್ರೆಯೇ ದೂರವಾಗುತ್ತಿದೆ. ತಲೆ ತುಂಬಾ ನೂರಾರು ಯೋಚನೆಗಳು, ಚಿಂತೆಗಳ ನಡುವೆ ಸುಖವಾಗಿ ಮಲಗುವವರೇ ಕಡಿಮೆ.

Health Secret Beauty Sleep  : ಚಿಂತೆಯಿಲ್ಲದವನಿಗೆ ಸಂತೆಯಲ್ಲಿ ಮಲಗಿದರೂ ನಿದ್ರೆ  (Sleep) ಬಂದೇ ಬರುತ್ತದೆ. ಆದರೆ ಇಂದಿನ ಅವಸರದ ಬದುಕಿನಲ್ಲಿ, ಬದುಕು ಕಟ್ಟಿಕೊಳ್ಳುವ ಭರಾಟೆಯಲ್ಲಿ ನೆಮ್ಮದಿಯ ನಿದ್ರೆಯೇ ದೂರವಾಗುತ್ತಿದೆ. ತಲೆ ತುಂಬಾ ನೂರಾರು ಯೋಚನೆಗಳು, ಚಿಂತೆಗಳ ನಡುವೆ ಸುಖವಾಗಿ ಮಲಗುವವರೇ ಕಡಿಮೆ.

Health Secret Beauty Sleep How Many Hours Should Sleep Every day for Looking Young
Image Credit : Pexels

ಹೌದು, ದೇಹದ ದಣಿವನ್ನು ಕಡಿಮೆ ಮಾಡಲು ಸುಖವಾದ ನಿದ್ರೆ ಅತೀ ಅಗತ್ಯ. ದೇಹಕ್ಕೆ ಮಾತ್ರವಲ್ಲ, ಶರೀರ ಅನೇಕ ಸಮಸ್ಯೆಗಳಿಗೆ ನಿದ್ರೆಯ ಮೂಲಕವೇ ಪರಿಹಾರ ಕಂಡು ಕೊಳ್ಳಬಹುದು. ಕಣ್ಣುಗಳ ಆರೋಗ್ಯಕ್ಕೆ, ಮನಸ್ಸು ಹಾಗೂ ಮೆದುಳನ್ನು ಚುರುಕಾಗಿರಿಸಲು, ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೀಗೆ ಎಲ್ಲದಕ್ಕೂ ಮುಖ್ಯವಾಗಿ ಬೇಕಿರುವುದೇ ನೆಮ್ಮದಿಯ ನಿದ್ರೆ. ಸರಿಯಾಗಿ ನಿದ್ರೆ ಇಲ್ಲವಾದರೆ ಅದು ಅನಾರೋಗ್ಯಕ್ಕೆ ಎಡೆಮಾಡಿಕೊಡುತ್ತದೆ.

ನೀವು ನಂಬಲೇ ಬೇಕಿರುವ ವಿಚಾರವೇನೆಂದರೆ, ಇತ್ತೀಚಿನ ಸಂಶೋಧನೆಯೊಂದು ನಿದ್ರೆಗೆ ಸಂಬಂಧಿಸಿದಂತೆ ಹೊಸ ವಿಚಾರವನ್ನು ಬಹಿರಂಗಪಡಿಸಿದೆ. ಅದೇನೆಂದರೆ, ಸಾಕಷ್ಟು ನಿದ್ದೆ ಮಾಡುವ ಮೂಲಕ ವರ್ಷಗಳಷ್ಟು ಕಿರಿಯರಾಗಿ ಕಾಣುತ್ತಾರಂತೆ. ಇದರ ಜೊತೆಗೆ ಆರೋಗ್ಯಕರ ಆಹಾರ ಮತ್ತು ವ್ಯಾಯಾಮವನ್ನು ರೂಢಿಸಿಕೊಂಡರೆ ವಯಸ್ಸು 40 ರ ಗಡಿ ದಾಟಿದರೂ ನೀವು ಚಿಕ್ಕವರಂತೆ ಕಾಣಲು ಸಹಾಯ ಮಾಡುತ್ತದೆ ಎಂದು ಸ್ವೀಡಿಷ್ ವಿಜ್ಞಾನಿಗಳು ಹೇಳಿದ್ದಾರೆ.

ಇದನ್ನೂ ಓದಿ : Noni Juice : ನೋನಿ ಜ್ಯೂಸ್‌ ಕುಡಿಯೋದು ಅಪಾಯಕಾರಿ : ಮಧುಮೇಹ ನಿಯಂತ್ರಣಕ್ಕೆ ಬರೋದು ನಿಜನಾ ?

ಎಂಟರಿಂದ ಒಂಬತ್ತು ಗಂಟೆಗಳ ನಿದ್ರೆ ಪ್ರಯೋಜನಕಾರಿ:

ನೀವು ಪ್ರತಿನಿತ್ಯವೂ ರಾತ್ರಿ ಏನಿಲ್ಲವೆಂದರೂ ಎಂಟರಿಂದ ಒಂಬತ್ತು ಗಂಟೆಗಳ ಕಾಲ ಚೆನ್ನಾಗಿ ನಿದ್ರೆ ಮಾಡಿದಿರೆಂದರೆ, ವರ್ಷಗಳು ಕಿರಿಯರಾಗಿಬಿಡುತ್ತೀರಿ. ರಾತ್ರಿಯಲ್ಲಿ ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವುದರಿಂದ ನೀವು ಹತ್ತು ವರ್ಷ ವಯಸ್ಸು ಹೆಚ್ಚಾದವರಂತೆ ಕಾಣುತ್ತೀರಿ ಎಂಬ ಮಾಹಿತಿಯನ್ನು ಸ್ಟಾಕ್‌ಹೋಮ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಹಿಡಿದಿದ್ದಾರೆ.

ಮೆದುಳಿನ ಆರೋಗ್ಯಕ್ಕೆ ಉತ್ತಮ ನಿದ್ರೆ ಅತೀ ಅಗತ್ಯ

ಆರೋಗ್ಯಕರ ಮೆದುಳು ಬೇಕೆಂಬುದು ಎಲ್ಲರ ಆಸೆ. ಆದ್ರೆ ಅದಕ್ಕಾಗಿ ಏನು ಮಾಡಬೇಕೆಂಬ ಗೊಂದಲ ಎಲ್ಲರನ್ನೂ ಕಾಡುತ್ತದೆ. ನಿಜ ಹೇಳಬೇಕೆಂದರೆ ಅಂಗೈಯಲ್ಲಿ ಬೆಣ್ಣೆ ಹಿಡಿದು ತುಪ್ಪಕ್ಕಾಗಿ ಅಲೆದರು ಎಂಬಂತೆ, ನಿಮ್ಮ ಕೈಯಲ್ಲೇ ಇದಕ್ಕೆ ಪರಿಹಾರವಿದೆ. ಹೌದು, ಮೆದುಳಿನ ಕಾರ್ಯ ಮತ್ತು ಒಟ್ಟಾರೆ ಯೋಗಕ್ಷೇಮಕ್ಕೆ ನೀವು ಚೆನ್ನಾಗಿ ನಿದ್ರೆ ಮಾಡಬೇಕಿರುವುದಷ್ಟೇ. ಮೆದುಳಿಗೆ ಸರಿಯಾಗಿ ವಿಶ್ರಾಂತಿ ಸಿಗುವುದು ನೀವು ನಿದ್ರಿಸಿದಾಗ.

ಇದನ್ನೂ ಓದಿ : Sleeping Tips : ಉತ್ತರ ದಿಕ್ಕಿಗೆ ತಲೆ ಹಾಕಿ ಮಲಗಿದ್ರೆ ಏನಾಗುತ್ತೆ ? ಯಾವ ದಿಕ್ಕಿಗೆ ಮಲಗೋದು ಸೂಕ್ತ, ಇಲ್ಲಿದೆ ವೈಜ್ಞಾನಿಕ ಕಾರಣ

Health Secret Beauty Sleep How Many Hours Should Sleep Every day for Looking Young
Image Credit : Pexels

ಉತ್ತಮ ನಿದ್ರೆಯಿಂದಾಗುವ ಇತರೇ ಲಾಭಗಳೇನು ಗೊತ್ತಾ ? 

ಉತ್ತಮ ನಿದ್ರೆಯಿಂದ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳಿಂದ ದೂರವಿರಬಹುದು. ಅಲ್ಲದೆ ರಾತ್ರಿ ಬೇಗನೆ ಮಲಗುವುದರಿಂದ, ನಾವು ಸೇವಿಸುವ ಕ್ಯಾಲೊರಿಗಳು ವೇಗವಾಗಿ ಕರಗುತ್ತವೆ. ಇದರಿಂದ ಹೆಚ್ಚುವರಿ ಕೊಬ್ಬು ಇಲ್ಲವಾಗುತ್ತದೆ. ಇದು ಅಧಿಕ ತೂಕದಂತಹ ಅನೇಕ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ದೂರವಿರಿಸುತ್ತದೆ.

ಇನ್ನು ಸೂಕ್ತ ಪ್ರಮಾಣದ ನಿದ್ರೆ ಮಾಡುವವರಿಗೆ ಉತ್ತಮ ಜ್ಞಾಪಕ ಶಕ್ತಿ ಇರುತ್ತದೆ. ಮೆಮೊರಿ ಪವರ್‌ ಗಾಗಿ ವೈದ್ಯರ ಬಳಿ ತೆರಳುವ ಮುನ್ನ ಸರಿಯಾದ ಸಮಯಕ್ಕೆ ನಿದ್ರಿಸುವ ರೂಢಿ ಮಾಡಿಕೊಳ್ಳಿ. ಉತ್ತಮ ನಿದ್ರೆಯನ್ನು ಪಡೆಯುವುದರಿಂದ, ದೇಹವು ಹಾರ್ಮೋನುಗಳನ್ನು ಸರಿಯಾಗಿ ನಿಯಂತ್ರಿಸಲು ಸಹಕಾರಿಯಾಗುತ್ತದೆ. ಸಾಕಷ್ಟು ನಿದ್ರೆ ಪಡೆಯುವ ಮೂಲಕ, ಒಬ್ಬ ವ್ಯಕ್ತಿಯು ಜೀವನದಲ್ಲಿ ಯಾವಾಗಲೂ ಉತ್ಸಾಹಿಯಾಗಿರಲು ಹಾಗೂ ಚುರುಕಿನಿಂದಿರಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : Kannada Health Tips : ಊಟ ಮಾಡುವಾಗ ನೀರು ಕುಡಿಯ ಬಾರದೇ ? ಯಾವಾಗ ನೀರು ಕುಡಿಯೋದು ಬೆಸ್ಟ್‌ : ಡಾ.ರಾಜುಕೃಷ್ಣಮೂರ್ತಿ

ಮಲಗುವ ಮುನ್ನ ನಿಮ್ಮ ರಾತ್ರಿಯ ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸುವುದರಿಂದ ಅವುಗಳ ಉರಿಯೂತದ ಗುಣಲಕ್ಷಣಗಳಾದ ಮೆಲಟೋನಿನ್ ಮತ್ತು ಪೊಟ್ಯಾಸಿಯಮ್ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಸೇಬು, ಚೆರ್ರಿ, ಕಿವಿ ಹಣ್ಣು, ಬಾಳೆಹಣ್ಣು ಮತ್ತು ಅನಾನಸ್ ಸೇರಿದಂತೆ ಅನೇಕ ಹಣ್ಣುಗಳು ಉತ್ತಮ ನಿದ್ರೆಗೆ ಸಹಕಾರಿ. ಅಲ್ಲದೆ ನಿತ್ಯವೂ ಮಲಗುವ ಮುನ್ನ ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಅರಶಿನ ಪುಡಿ ಸೇರಿಸಿ ಕುಡಿಯುವುದರಿಂದಲೂ ಸುಖಕರವಾದ ನಿದ್ರೆ ನಿಮ್ಮದಾಗುತ್ತದೆ. ಈ ಮೂಲಕ ಉತ್ತಮ ಆರೋಗ್ಯವನ್ನು, ದೀರ್ಘಾಯುಷ್ಯವನ್ನು ಹೊಂದಬಹುದು.

Health Secret Beauty Sleep How Many Hours Should Sleep Every day for Looking Young

Comments are closed.