ಸಿಗರೇಟ್ ಚಟದಿಂದ ಹೊರಬರಲು ಇಲ್ಲಿದೆ ಸಿಂಪಲ್ ಟ್ರಿಕ್: ಈ 4D ರೂಲ್ಸ್ ಗೊತ್ತಾ
ಸಿಗರೇಟ್ ಸೇದಬೇಕು ಎನಿಸಿದಾಗ ‘4D’ ವಿಧಾನವನ್ನು ಅನುಸರಿಸುವ ಮೂಲಕ ಈ ಹಾನಿಕಾರಕ ಅಭ್ಯಾಸದಿಂದ ಸುಲಭವಾಗಿ ಹೊರಬರಬಹುದು.
By Meghana Pranuth | ಮೇಘನಾ ಪ್ರಣೂತ್
1 min read
ಸಿಗರೇಟ್ ಸೇದುವ ಅಭ್ಯಾಸವನ್ನು ಬಿಡಬೇಕು ಎಂದುಕೊಂಡರೂ ಪದೇ ಪದೇ ಅದೇ ಚಟಕ್ಕೆ ಜಾರುತ್ತಿದ್ದೀರಾ? ಹಾಗಾದರೆ ನಿಮಗಾಗಿ ಇಲ್ಲಿದೆ ನೋಡಿ ಒಂದು ಸರಳ ಮತ್ತು ಪರಿಣಾಮಕಾರಿ ಮಾರ್ಗ. ಸಿಗರೇಟ್ ಸೇದಬೇಕು ಎನಿಸಿದಾಗ ‘4D’ ವಿಧಾನವನ್ನು ಅನುಸರಿಸುವ ಮೂಲಕ ಈ ಹಾನಿಕಾರಕ ಅಭ್ಯಾಸದಿಂದ ಸುಲಭವಾಗಿ ಹೊರಬರಬಹುದು.
ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ, ಅದನ್ನು ಬಿಡುವುದು ಅನೇಕರಿಗೆ ಕಷ್ಟವಾಗುತ್ತದೆ. ಆದರೆ ಸರಿಯಾದ ತಯಾರಿ ಇದ್ದರೆ ಈ ಅಭ್ಯಾಸದಿಂದ ಖಂಡಿತವಾಗಿಯೂ ಹೊರಬರಬಹುದು ಎನ್ನುತ್ತಾರೆ ತಜ್ಞರು. ಸಿಗರೇಟ್ ಬಿಡಲು ಬಯಸುವವರು ಮೊದಲು ಒಂದು ದಿನವನ್ನು ನಿಗದಿಪಡಿಸಿ, ಕುಟುಂಬದವರ ಬೆಂಬಲ ಪಡೆಯಬೇಕು.
ಅಲ್ಲದೆ, ಸಿಗರೇಟ್ ಸೇದಬೇಕು ಎಂಬ ತೀವ್ರ ಬಯಕೆ ಬಂದಾಗ ತಕ್ಷಣ ಸಿಗರೇಟ್ ತೆಗೆದುಕೊಳ್ಳುವ ಬದಲು ‘4D’ ವಿಧಾನವನ್ನು ಪ್ರಯತ್ನಿಸಬಹುದು.
ವಿಳಂಬಿಸಿ (Delay): ಬಯಕೆ ಬಂದ ತಕ್ಷಣ ಸೇದದೆ ಕೆಲವು ನಿಮಿಷ ಕಾಯಿರಿ, ಅದು ತಾನಾಗಿಯೇ ಕಡಿಮೆಯಾಗುತ್ತದೆ.
ಆಳವಾಗಿ ಉಸಿರಾಡಿ (Deep Breathing): ನಿಧಾನವಾಗಿ ದೀರ್ಘವಾದ ಉಸಿರನ್ನು ತೆಗೆದುಕೊಂಡು ಮನಸ್ಸನ್ನು ಶಾಂತಗೊಳಿಸಿ.
ನೀರು ಕುಡಿಯಿರಿ (Drink Water): ಬಾಯಿಗೆ ಬೇರೆ ಚಟುವಟಿಕೆ ನೀಡುವುದರಿಂದ ಬಯಕೆಯನ್ನು ಹತೋಟಿಯಲ್ಲಿಡಬಹುದು.
ಬೇರೆ ಏನಾದರೂ ಮಾಡಿ (Do Something Else): ಸ್ವಲ್ಪ ನಡೆದಾಡಿ, ಸಂಗೀತ ಕೇಳಿ ಅಥವಾ ಬೇರೆ ಕೆಲಸದಲ್ಲಿ ಗಮನಹರಿಸಿ.
ಇದರೊಂದಿಗೆ ಪ್ರತಿದಿನ ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ಒತ್ತಡ ಕಡಿಮೆಯಾಗಿ ಸಿಗರೇಟ್ ಬಗ್ಗೆ ಯೋಚಿಸುವ ಸಮಯವೂ ಕಡಿಮೆಯಾಗುತ್ತದೆ.
Topics
ಸಂಬಂಧಿತ ಸುದ್ದಿಗಳು
health
ನೀವು ದಿನಕ್ಕೆ 6 ಗಂಟೆಗಿಂತಲೂ ಕಡಿಮೆ ನಿದ್ದೆ ಮಾಡ್ತೀರಾ? ಈ ಕಾಯಿಲೆಗಳು ಬರಬಹುದು ಎಚ್ಚರ..!
health
ಉಪ್ಪು Vs ಸಕ್ಕರೆ : ಹೃದಯದ ಆರೋಗ್ಯಕ್ಕೆ ಯಾವುದು ಹೆಚ್ಚು ಹಾನಿಕಾರಕ ?
health
ಮಹಿಳೆಯರಲ್ಲಿ ಹೃದಾಯಾಘಾತದ 4 ಪ್ರಮುಖ ಚಿಹ್ನೆಗಳು ! ಈ ಲಕ್ಷಣಗಳು ಕಂಡುಬಂದ್ರೆ ನಿರ್ಲಕ್ಷಿಸಬೇಡಿ !
health

