ಭಾನುವಾರ, ಮೇ 11, 2025
HomeCoastal NewsMadras Eye : ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಮದ್ರಾಸ್‌ ಐ : ಮಕ್ಕಳನ್ನೇ ಟಾರ್ಗೆಟ್ ಮಾಡಿದ...

Madras Eye : ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚುತ್ತಿರುವ ಮದ್ರಾಸ್‌ ಐ : ಮಕ್ಕಳನ್ನೇ ಟಾರ್ಗೆಟ್ ಮಾಡಿದ ಕೆಂಗಣ್ಣು ಬೇನೆ

- Advertisement -

ಉಡುಪಿ : ರಾಜ್ಯದ ಕರಾವಳಿಯಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯ ನಡುವೆ ಶಾಲಾ ಮಕ್ಕಳಲ್ಲಿ ಕೆಂಗಣ್ಣು ಬೇನೆ (Eye infection) ಕಾಣಿಸಿಕೊಂಡಿದೆ. ಕರಾವಳಿ ಹಲವು ಕಡೆಯಲ್ಲಿ ಕೆಂಗಣ್ಣು ಬೇನೆ (Madras Eye) ಕೆಲ ದಿನಗಳಿಂದ ಜನರನ್ನು ಕಾಡುತ್ತಿದೆ. ಸಾಮಾನ್ಯವಾಗಿ ಶಾಲಾ ಮಕ್ಕಳಲ್ಲಿ ಕಾಣಿಸಿಕೊಂಡು ಬಳಿಕ ಹರಡಲು ಪ್ರಾರಂಭವಾಗುತ್ತದೆ. ಈಗಾಗಲೇ ಹೆಚ್ಚಿನ ಶಾಲಾ ಮಕ್ಕಳಲ್ಲಿ ಕಂಡು ಬಂದಿದ್ದು, ಮುನ್ನೆಚ್ಚರಿಕೆ ವಹಿಸಬೇಕಾಗಿದೆ.

ಕೆಂಗಣ್ಣು ಬೇನೆ ಕಂಜಕ್ಟಿವಾ ಎಂಬ ಕಣ್ಣುಗಳ ಸುತ್ತ ಇರುವ ಸೂಕ್ಷ್ಮ ಪದರಕ್ಕೆ ತಗಲುವ ಕಾಯಿಲೆಯಾಗಿದೆ. ಸಾಮಾನ್ಯವಾಗಿ ಈ ಕಾಯಿಲೆ ವೈರೆಸ್‌ ಅಥವಾ ಬ್ಯಾಕ್ಟೀರಿಯಾ ಸೊಂಕಿನಿಂದ ಹರಡುತ್ತದೆ. ಈ ಸಮಸ್ಯೆ ಕಾಣಿಸಿಕೊಂಡಾಗ ಸೂಕ್ತ ವೈದ್ಯರನ್ನು ಸಂಪರ್ಕಿಸಿ ಔಷಧಿ ಪಡೆದು, ಕಪ್ಪು ಕನ್ನಡ ಧರಿಸಿ ಇತರರಿಗೆ ಹರಡದಂತೆ ಎಚ್ಚರಿಕೆಯನ್ನು ವಹಿಸುವುದು ಅಗತ್ಯವಾಗಿದೆ. ಇಂತಹ ಸಂದರ್ಭದಲ್ಲಿ ಹೊರಗಡೆ ಕೆಲಸಕ್ಕೆ ಹೋಗುವ ಪೋಷಕರು ತಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಗನ ನೀಡಬೇಕಾಗಿದೆ. ಮಗುವಿಗೆ ಕೆಂಗಣ್ಣು ಬೇನೆ ಇದ್ದರೆ ಸಂಪೂರ್ಣ ಗುಣವಾಗದೇ ಶಾಲೆಗಳಿಗೆ ಕಳುಹಿಸಬಾರದು. ಇದ್ದರಿಂದ ಮತ್ತೊಂದು ಮಗುವಿಗೆ ಆಗುವುದನ್ನು ತಡೆಯಬಹುದು. ಕೆಂಗಣ್ಣು ಬೇನೆಗೆ ತುತ್ತಾದವರು ಆದಷ್ಟು ಕಣ್ಣಿನ ರಕ್ಷಣೆ ಮಾಡಿಕೊಳ್ಳಬೇಕಾಗಿದೆ.

ಕೆಂಗಣ್ಣು ಬೇನೆ (ಮದ್ರಾಸ್‌ ಐ) ಯ ಲಕ್ಷಣಗಳು :

  • ಕಣ್ಣಿನ ಸುತ್ತ ಬಿಳಿ ಅಥವಾ ಹಳದಿ ಬಣ್ಣದ ಲೋಳೆಗಳು ಆವರಿಸಿಕೊಳ್ಳುತ್ತದೆ.
  • ಕಣ್ಣುಗಳು ಕೆಂಪಾಗಿ ನೀರು ಸುರಿಯುತ್ತಿರುತ್ತದೆ.
  • ಒಂದು ಕಣ್ಣಿಗೆ ತಗುಲುವ ಸೋಂಕು ಇನ್ನೊಂದು ಕಣ್ಣಿಗೆ ಹರಡಲು ಹೆಚ್ಚಿನ ಸಮಯ ಬೇಕಾಗುವುದಿಲ್ಲ.
  • ಕೆಂಗಣ್ಣು ಬೇನೆಯಿಂದ ಕಣ್ಣು ಊತಗೊಳ್ಳುತ್ತದೆ ಹಾಗೂ ಲಿಂಪ್‌ ಗ್ರಂಥಿಯ ಸೋಂಕಿನಿಂದಾಗಿ ಕಿವಿಯ ಮುಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
  • ಕೆಲವರಲ್ಲಿ ಈ ಬೇನೆಯಿಂದಾಗಿ ಜ್ವರ, ಗಂಟಲು ನೋವು ಮತ್ತು ಶೀತ ಸೇರಿದಂತೆ ಹಲವು ಲಕ್ಷಣಗಳು ಕಂಡು ಬರುತ್ತದೆ.

ಇದನ್ನೂ ಓದಿ : Home Remedies for Monsoon : ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಈ ಮನೆಮದ್ದು ರಾಮಬಾಣ

ಇದನ್ನೂ ಓದಿ : Drinking Water in Monsoon : ಮಳೆಗಾಲದಲ್ಲಿ ಕುಡಿಯುವ ನೀರಿನ ಬಗ್ಗೆ ಇರಲಿ ಗಮನ

ಕಂಗೆಣ್ಣು ಬೇನೆ (ಮದ್ರಾಸ್‌ ಐ) ಉಂಟಾದಾಗ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು :

  • ಕಣ್ಣುಗಳನ್ನು ಮುಟ್ಟಿ ಉಜ್ಜಿಕೊಳ್ಳಬಾರದು. ಕಣ್ಣುಗಳಿಗೆ ಡ್ರಾಪ್ಸ್‌ ಹಾಕಿಕೊಂಡಾಗ, ಕಣ್ಣುಗಳನ್ನು ಮುಟ್ಟಿಕೊಂಡಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು.
  • ಕೆಂಗಣ್ಣು ಬೇನೆ ಇರುವವರು ಟವೆಲ್‌, ಬೆಡ್‌ಶೀಟ್‌ಗಳು, ಐ ಡ್ರಾಪ್ಸ್‌, ಸೌಂದರ್ಯವರ್ಧಕಗಳು, ಮೊಬೈಲ್‌ ಮುಂತಾದವುಗಳನ್ನು ಪ್ರತ್ಯೇಕವಾಗಿ ಬಳಸಬೇಕು.
  • ಕಣ್ಣಿನಲ್ಲಿ ಸುರಿಯುವ ನೀರನ್ನು ಒರೆಸಲು ಕರವಸ್ತ್ರಗಳ ಬದಲಿಗೆ ಟಿಶ್ಯೂ ಪೇಪರ್‌ ಬಳಸುವುದು ಹೆಚ್ಚು ಸೂಕ್ತವಾಗಿರುತ್ತದೆ.
  • ಸೋಂಕು ತಗಲಿರುವ ಸಂದರ್ಭ ಕಾಂಟ್ಯಾಕ್ಟ್‌ ಲೆನ್ಸ್‌ಗಳನ್ನು ಬಳಸದೇ ಇರುವುದು ಒಳ್ಳೆಯದು.
  • ಶುಚಿತ್ವ ಕಾಪಾಡಿಕೊಳ್ಳುವುದರಿಂದ ಇತರರಿಗೆ ಸೋಂಕು ಹರಡುವುದಂತೆ ತಪ್ಪಿಸಬಹುದಾಗಿದೆ.
  • ಸಾರ್ವಜನಿಕ ಸ್ಥಳಗಳಲ್ಲಿ ಸಭೆ, ಸಮಾರಂಭಗಳಲ್ಲಿ ಭಾಗವಹಿಸದೇ ಇರುವುದು ಉತ್ತಮ.

Madras Eye on the Rise in Coastal Districts: Conjunctivitis targeting children

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular