ಇಸ್ರೇಲ್ : ಸಾಮಾನ್ಯವಾಗಿ ಮೊಟ್ಟಿಯನ್ನು ಒಂದು ತಿಂಗಳ ಕಾಲ ಸಂಗ್ರಹ ಮಾಡಬಹುದು. ಆ ಮೇಲೆ ಮೊಟ್ಟೆ ಕೆಟ್ಟು ಹೋಗುತ್ತದೆ. ಸಂಗ್ರಹಣೆಯಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಮೊಟ್ಟೆ ಒಡೆದು ಹೋಗುತ್ತೆ. ಆದ್ರಿಲ್ಲಿ ಒಂದು ಸಾವಿರ ವರ್ಷದ ಮೊಟ್ಟೆಯೊಂದು ಪತ್ತೆ ಯಾಗಿದ್ದು, ಮೊಟ್ಟೆ ಸ್ವಲ್ಪವೂ ಒಡೆದಿಲ್ಲ. ಇಸ್ರೇಲ್ ನಲ್ಲಿ ಪತ್ತೆಯಾಗಿರುವ ಅಪರೂಪದ ಮೊಟ್ಟೆಯೀಗ ವಿಶ್ವದ ಗಮನ ಸೆಳೆದಿದೆ.
ಪುರಾತತ್ವ ಇಲಾಖೆಯ ಅಧಿಕಾರಿಗಳು ಇಸ್ರೇಲ್ ನ ಯಾವ್ನೇ ನಗರದಲ್ಲಿ ಉತ್ಖನನ ಕಾರ್ಯವನ್ನು ನಡೆಸುತ್ತಿದ್ರು. ಈ ವೇಳೆಯಲ್ಲಿ ಸೆಸ್ ಪಿಟ್ ನಲ್ಲಿ ಮೊಟ್ಟೆಯೊಂದು ಪತ್ತೆಯಾಗಿತ್ತು. ಈ ಕುರಿತು ಅಧ್ಯಯನ ನಡೆಸಿದ ಪುರಾತತ್ವ ಶಾಸ್ತ್ರಜ್ಞರು ಸುಮಾರು ಒಂದು ಸಾವಿರ ವರ್ಷದಷ್ಟು ಹಳೆಯ ಮೊಟ್ಟೆ ಇದಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಾತ್ರವಲ್ಲ ಬೈಜಾಂಟೈನ್ ಯುಗದ ಮೊಟ್ಟೆ ಇದು ಎನ್ನುವುದಾಗಿ ತಿಳಿಸಿದ್ದಾರೆ.
ಮೊಟ್ಟೆಯ ಆಕಾರ ವಿಶಿಷ್ಟವಾಗಿದೆ. ಸುಮಾರು 6 ಸೆಂ.ಮೀ.ನಷ್ಟು ವಿಸ್ತೀರ್ಣವನ್ನು ಹೊಂದಿರುವ ಮೊಟ್ಟೆಯ ಶೆಲ್ ಗಳಲ್ಲಿ ಕೆಲವೇ ಕೆಲವು ಬಿರುಕುಗಳನ್ನು ಹೊಂಡಿದೆ. ಆದರೆ ಮೊಟ್ಟೆ ಸ್ವಲ್ಪವೂ ಒಡೆದು ಹೋಗಿಲ್ಲ. ಮೊಟ್ಟೆಯನ್ನು ಒಡೆದಾಗ ಮೊಟ್ಟೆಯ ಒಳಗೆ ಹಳದಿ ಭಾಗವೂ ಕಂಡು ಬಂದಿಲ್ಲ. ಹೀಗಾಗಿ ಮೊಟ್ಟೆಯನ್ನು ಹೆಚ್ಚಿನ ಅಧ್ಯಯನಕ್ಕಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿದೆ. ಅಲ್ಲದೇ ಮೊಟ್ಟೆಯ ಡಿಎನ್ಎ ಹೊರತೆಗೆಯಲು ಆದೇಶಿಸಿದ್ದಾರೆ.
ಮೊಟ್ಟೆಗಳು ಹೆಚ್ಚು ಸಮಯದ ವರೆಗೆ ಆರೋಗ್ಯಕರವಾಗಿ ಇರಲು ಸಾಧ್ಯವಿಲ್ಲ. ಆದ್ರೀಗ ಸಾವಿರ ವರ್ಷದ ಮೊಟ್ಟೆ ಪತ್ತೆಯಾಗಿ ರೋದು ಆಶ್ವರ್ಯವನ್ನು ಮೂಡಿಸಿದೆ. ಮೊಟ್ಟೆ ಯಾವ ಕಾಲಕ್ಕೆ ಸೇರಿದ್ದು ಎಂದು ತಿಳಿದು ಕೊಳ್ಳಲಾಗುತ್ತಿದ್ದು. ಇದೇ ಜಾಗದಲ್ಲಿ ಪುರಾತತ್ವ ತಜ್ಞರು ಹೆಚ್ಚಿನ ಅಧ್ಯಯನಕ್ಕಾಗಿ ಉತ್ಖನನ ಕಾರ್ಯವನ್ನು ಮುಂದುವರಿಸಲು ಸೂಚಿಸಲಾಗಿದೆ ಎಂದು ಇಸ್ರೇಲ್ ಆ್ಯಂಟಿಕ್ವಿಟೀಸ್ ಅಥಾರಿಟಿಯ ಪುರಾತತ್ವ ಶಾಸ್ತ್ರಜ್ಞೆ ಅಲ್ಲಾ ನಾಗೋರ್‌ಸ್ಕಿ ಪ್ರತಿಕ್ರಿಯೆ ನೀಡಿದ್ದಾರೆ.