ಬೀಜಿಂಗ್ : ಕೊರೊನಾ ವೈರಸ್ ಚೀನಿಯರನ್ನು ಬಿಟ್ಟು ಬಿಡದಂತೆ ಕಾಡುತ್ತಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿರುವವರ ಸಂಖ್ಯೆ 636ಕ್ಕೆ ಏರಿಕೆಯಾಗಿದೆ. 30,000 ಕ್ಕೂ ಅಧಿಕ ಮಂದಿಗೆ ಸೋಂಕು ವ್ಯಾಪಿಸಿದ್ದು, ಸೋಂಕು ತಡೆಯಲು ಚೀನಾ 20,000 ಮಂದಿ ರೋಗಿಗಳನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದೆ.

ದಿನೇ ದಿನೇ ಹೆಚ್ಚುತ್ತಿರೋ ಕೊರೊನಾ ವೈರಸ್ ಚೀನಾದಲ್ಲಿ ಮರಣ ಮೃದಂಗವನ್ನೇ ಬಾರಿಸುತ್ತಿದೆ. ಚೀನಾ ಮಾತ್ರವಲ್ಲದೇ ಕೊರೊನಾ ವೈರಸ್ ಹರಡದಂತೆ ವಿಶ್ವದಾದ್ಯಂತ ಎಚ್ಚರಿಕೆಯ ಹೆಜ್ಜೆಯನ್ನು ಇರಿಸಲಾಗುತ್ತಿದೆ. ಇದುವರೆಗೂ 31,000 ಮಂದಿಗೆ ಸೊಂಕು ತಗುಲಿದ್ದು, ಗುರುವಾರ ಒಂದೇ ದಿನದಲ್ಲಿ 3,143 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, 73 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ವುಹಾನ್ ನ ಹುಬೆ ಪ್ರಾಂತ್ಯದಲ್ಲಿ 69 ಮಂದಿ ಸಾವನ್ನಪ್ಪಿದ್ದಾರೆ. ಇದುವರೆಗೆ 1,540 ಮಂದಿ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆಂತ ಚೀನಾದ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಹೆನಾನ್, ಗ್ವಾಂಗ್ಡೊಂಗ್, ಹೈನಾನ್ ಹಾಗೂ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗಿ ವ್ಯಾಪಿಸುತ್ತಿದೆ. ವ್ಯಾಪಕವಾಗಿ ಕೊರೊನಾ ವೈರಸ್ ಹರಡುತ್ತಿರೋ ಹಿನ್ನೆಲೆಯಲ್ಲಿ ಚೀನಾ ಸೋಂಕು ತಗುಲಿದ ರೋಗಿಗಳನ್ನು ಹತ್ಯೆ ಮಾಡಲು ನ್ಯಾಯಾಲಯದ ಮೊರೆ ಹೋಗಿದೆ. ಕೊರೋನಾ ವೈರಸ್ ಸೋಂಕು ಭಾರೀ ಪ್ರಮಾಣದಲ್ಲಿ ಹಬ್ಬುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚೀನಾ ಸರ್ಕಾರ, ಯಾವುದೇ ವ್ಯಕ್ತಿ ತನಗೆ ಸೋಂಕು ತಗುಲಿರುವ ಮಾಹಿತಿಯನ್ನು ಮುಚ್ಚಿಟ್ಟರೆ, ಉದ್ದೇಶ ಪೂರ್ವಕವಾಗಿ ತಮ್ಮ ಕಾಯಿಲೆಯನ್ನು ಮುಚ್ಚಿಟ್ಟು ಸಾರ್ವಜನಿಕ ಸ್ಥಳಗಳಿಗೆ ಬಂದು, ಇತರರಿಗೆ ಹಬ್ಬಿಸಲು ಯತ್ನಿಸಿದರೆ ಅಂತಹವರ ವಿರುದ್ಧ ಮರಣದಂಡನೆ ಸೇರಿದಂತೆ ಇನ್ನಿತರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಚೀನಾ ಎಚ್ಚರಿಸಿದೆ.

ಇನ್ನು ನಿತ್ಯವೂ 60 ರಿಂದ 70 ಮಂದಿಯನ್ನು ಬಲಿಪಡೆಯುತ್ತಿರೋ ಕೊರೊನಾ ವೈರಸ್ ವಿಶ್ವದಾದ್ಯಂತ ವ್ಯಾಪಿಸುತ್ತೋದನ್ನು ತಪ್ಪಿಸೋ ಸಲುವಾಗಿ ಚೀನಾ ಒಂದು ಪ್ರಾಂತ್ಯವನ್ನೇ ತ್ಯಾಗ ಮಾಡಿದೆ. 6 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಹುಬೆ ಪ್ರಾಂತ್ಯದ ಜನರನ್ನು ನಿರಾಶ್ರಿತರನ್ನಾಗಿಸಿದೆ. ಈ ಪ್ರಾಂತ್ಯದಲ್ಲಿ ಜನರ ಮುಕ್ತ ಓಡಾಟಕ್ಕೆ ನಿಷೇಧ ಹೇರಲಾಗಿದ್ದು, ಸಾರಿಗೆ, ಸಮಾರಂಭವನ್ನು ನಿಷೇಧಿಸಲಾಗಿದೆ. ಹುಬೆ ಪ್ರಾಂತ್ಯದ ಜನರು ಚಿಕಿತ್ಸೆಗಾಗಿ ಬೇರೆಡೆಗೆ ತೆರಳಿ ಇತರರಿಗೆ ಈ ಸೋಂಕು ವ್ಯಾಪಿಸೋದನ್ನು ತಪ್ಪಿಸೊ ಸಲುವಾಗಿ 8,000 ಮಂದಿ ಆರೋಗ್ಯ ಸಿಬ್ಬಂಧಿಗಳನ್ನು ರವಾನಿಸಿದ್ದು, 27 ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.