ಸೋಮವಾರ, ಏಪ್ರಿಲ್ 28, 2025
HomeWorldಚೀನಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ :36 ಮಂದಿ ಸಾವು, 2 ಮಂದಿ ನಾಪತ್ತೆ

ಚೀನಾದ ಕಾರ್ಖಾನೆಯಲ್ಲಿ ಅಗ್ನಿ ಅವಘಡ :36 ಮಂದಿ ಸಾವು, 2 ಮಂದಿ ನಾಪತ್ತೆ

- Advertisement -

ಅನ್ಯಾಂಗ್ : 36 killed factory fire China : ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿ 36 ಮಂದಿ ಸಾವನ್ನಪ್ಪಿ ಇಬ್ಬರು ನಾಪತ್ತೆಯಾಗಿರುವ ಘಟನೆ ಚೀನಾದ ಅನ್ಯಾಂಗ್ ಸಿಟಿಯ ವೆನ್‌ಫೆಂಗ್ ಜಿಲ್ಲೆಯ ಕೈಕ್ಸಿಂಡಾ ಟ್ರೇಡಿಂಗ್ ಕೋ ಲಿಮಿಟೆಡ್‌ನಲ್ಲಿಕಾರ್ಖಾನೆಯಲ್ಲಿ ಸಂಭವಿಸಿದೆ. ಸ್ಥಳಕ್ಕೆ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ ಕಾರ್ಯವನ್ನು ಆರಂಭಿಸಿವೆ. ಕಾರ್ಖಾನೆಯೊಳಗೆ ಇನ್ನಷ್ಟು ಮಂದಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

ಚೀನಾದ ಹೆನಾನ್ ಪ್ರಾಂತ್ಯದ ಅನ್ಯಾಂಗ್ ನಗರದಲ್ಲಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಕಾರ್ಖಾನೆಯಲ್ಲಿದ್ದ 36 ಮಂದಿ ಸುಟ್ಟು ಕರಕಲಾಗಿದ್ದಾರೆ. ಅಲ್ಲದೇ ಇಬ್ಬರು ಘಟನೆಯಲ್ಲಿ ಗಾಯಗೊಂಡಿದ್ದರೆ, ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯವನ್ನು ನಡೆಸಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಘಟನೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಸಾರ್ವಜನಿಕ ಭದ್ರತಾ ಇಲಾಖೆಯ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚನೆಯನ್ನು ನೀಡಲಾಗಿದೆ.

ಚೀನಾದಲ್ಲಿ ಕೊರೊನಾಕ್ಕೆ ವೃದ್ದರು ಬಲಿ

ಕೋರೊನಾ ತವರು ಚೀನಾದಲ್ಲಿ ಕೋವಿಡ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದ್ರಲ್ಲೂ ಕೋವಿಡ್ ಮಹಾಮಾರಿ ಇದೀಗ ವೃದ್ದರನ್ನೇ ಟಾರ್ಗೆಟ್ ಮಾಡುತ್ತಿದೆ. ಚೀನಾದಲ್ಲಿ ಸೋಮವಾರ 962 ಕ್ಕೆ ತಲುಪಿದೆ. ಬೀಜಿಂಗ್ ಮತ್ತು ದೇಶಾದ್ಯಂತ ಕಟ್ಟುನಿಟ್ಟಾದ ಹೊಸ ಕ್ರಮಗಳ ನಡುವಲ್ಲೇ ಬೀಜಿಂಗ್ ಮೊದಲ ಸಾವು ಪ್ರಕರಣ ದಾಖಲಾಗಿದೆ. ರಾಷ್ಟ್ರೀಯ ಆರೋಗ್ಯ ಆಯೋಗವು ವೈರಸ್‌ನಿಂದ 87 ವರ್ಷದ ಬೀಜಿಂಗ್ ವ್ಯಕ್ತಿಯ ಸಾವನ್ನು ವರದಿ ಮಾಡಿದೆ. ಇದು ಮೇ 26ರ ನಂತರ ವರದಿಯಾದ ಮೊದಲ ಕೋವಿಡ್ ಸಾವು ಪ್ರಕರಣ. ಇದುವರೆಗೆ ಒಟ್ಟು 5,227 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಹೆಚ್ಚಿನ ಪ್ರದೇಶಗಳಲ್ಲಿ ವ್ಯವಹಾರಗಳನ್ನು ಮುಚ್ಚಲಾಗುತ್ತಿದ್ದು, ನಿರ್ಬಂಧಗಳನ್ನು ಹೇರಲಾಗುತ್ತಿದೆ. ಕಚೇರಿ ಕಟ್ಟಡಗಳು, ಶಾಪಿಂಗ್ ಮಾಲ್‌ಗಳು ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು, ಜನರು ದಿನಕ್ಕೊಮ್ಮೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು ಮತ್ತು ಕೋವಿಡ್‌ ನೆಗೆಟಿವ್‌ ವರದಿಯನ್ನು ತೋರಿಸಬೇಕು. ಶೂನ್ಯ ಸಹಿಷ್ಣುತೆ ನೀತಿಯಿಂದಾಗಿ ಚೀನಾದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಶಾಲೆಗಳು, ಕೈಗಾರಿಕೆಗಳು ಮತ್ತು ಅಂಗಡಿಗಳನ್ನು ಏಕಾಏಕಿ ಮುಚ್ಚಿರುವುದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ

ಇದನ್ನೂ ಓದಿ :ಸದ್ಯಕ್ಕೆ ಹೊಸ ಕಾರು, ಫ್ರಿಡ್ಜ್, ಟಿವಿ ಖರೀದಿಸಬೇಡಿ ಎಂದ ಅಮೆಜಾನ್ ಸಂಸ್ಥಾಪಕ; ಕಾರಣ ಏನಿರಬಹುದು

ಇದನ್ನೂ ಓದಿ : Ex-lover murder: ಉತ್ತರ ಪ್ರದೇಶದಲ್ಲಿ ರಾಕ್ಷಸಿ ಕೃತ್ಯ; ಮಾಜಿ ಪ್ರೇಯಸಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ತುಂಡು ಮಾಡಿದ ದುರುಳ

36 killed factory fire in China anyang city

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular