ಸೋಮವಾರ, ಜೂನ್ 16, 2025
HomeWorldAfghanistan : 100 ದೇಶಗಳೊಂದಿಗೆ ತಾಲಿಬಾನ್ ಒಪ್ಪಂದ !

Afghanistan : 100 ದೇಶಗಳೊಂದಿಗೆ ತಾಲಿಬಾನ್ ಒಪ್ಪಂದ !

- Advertisement -

ಕಾಬೂಲ್‌ : ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಆರ್ಭಟ ಮುಂದುವರಿದಿದೆ. ಹಿಂಸಾಚಾರದಿಂದ ಬೇಸತ್ತ ಅಪ್ಘಾನ್‌ ಪ್ರಜೆಗಳು ಅಫ್ಘಾನಿಸ್ತಾನದಿಂದ ದೇಶ ತೊರೆಯಲು ಸಜ್ಜಾಗಿದ್ದಾರೆ. ಹೀಗಾಗಿ ಬಹುತೇಕರು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಬೀಡುಬಿಟ್ಟಿದ್ದಾರೆ. ತಾಲಿಬಾನ್‌ ದಿನೇ ದಿನೇ ಅಫ್ಘಾನಿಸ್ತಾನದಲ್ಲಿ ಸಂಪೂರ್ಣ ಹಿಡಿತ ಸಾಧಿಸುತ್ತಿದ್ದು, ಈ ನಡುವಲ್ಲೇ ಭಯೋತ್ಪಾದಕ ತಾಲಿಬಾನ್ ಸಂಘಟನೆ 00 ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಅಮೆರಿಕ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಟರ್ಕಿ ಸೇರಿದಂತೆ ಸುಮಾರು 100 ದೇಶಗಳೊಂದಿಗೆ ಅಫ್ಘಾನಿಸ್ತಾನದ ಒಪ್ಪಂದದ ಕುರಿತು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಜಂಟಿ ಹೇಳಿಕೆಯನ್ನು ನೀಡಿದೆ. ಜಂಟಿ ಹೇಳಿಕೆಯ ಪ್ರಕಾರ, ತಾಲಿಬಾನ್ ಬೇರೆ ದೇಶಗಳಿಗೆ ಪ್ರಯಾಣಿಸಲು ಸರಿಯಾದ ದಾಖಲೆಗಳನ್ನು ಹೊಂದಿರುವ ಎಲ್ಲಾ ವಿದೇಶಿ ಪ್ರಜೆಗಳು ಮತ್ತು ಅಫ್ಘಾನ್ ಪ್ರಜೆಗಳು ಅಫ್ಘಾನಿಸ್ತಾನದಿಂದ ಹೊರಗೆ ಹೋಗುವುದನ್ನು ತಡೆಯುವುದಿಲ್ಲ ಎಂದು ಈ ದೇಶಗಳಿಗೆ ಭರವಸೆ ನೀಡಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಮತ್ತೆ ಉಗ್ರ ದಾಳಿ ಸಾಧ್ಯತೆ : ಅಮೇರಿಕ ಎಚ್ಚರಿಕೆ

ಅಮೇರಿಕಾದ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ, ಜಂಟಿ ಹೇಳಿಕೆಯನ್ನು ನೀಡಿದ ಎಲ್ಲಾ ದೇಶಗಳು ತಮ್ಮ ನಾಗರಿಕರು ಮತ್ತು ಅವರಿಗಾಗಿ ಕೆಲಸ ಮಾಡಿದ ಅಫ್ಘಾನ್ ನಾಗರಿಕರನ್ನು ಅಫ್ಘಾನಿಸ್ತಾನದಿಂದ ಹೊರತರಲು ಬದ್ಧವಾಗಿವೆ ಎಂದು ತಿಳಿಸಿದೆ. ಇದಷ್ಟೇ ಅಲ್ಲ, ಈ ಎಲ್ಲಾ ದೇಶಗಳು ಅಫ್ಘಾನಿಸ್ತಾನದ ನಾಗರಿಕರಿಗೆ ತಮ್ಮ ದೇಶಕ್ಕೆ ಬರಲು ಅಗತ್ಯ ದಾಖಲೆಗಳನ್ನು ನೀಡುವುದನ್ನು ಮುಂದುವರಿಸುತ್ತವೆ ಎಂದೂ ಜಂಟಿ ಹೇಳಿಕೆಯಲ್ಲಿ ಹೇಳಲಾಗಿದೆ. ಅದೇ ಸಮಯದಲ್ಲಿ, ಈ ದೇಶಗಳು ತಾಲಿಬಾನ್ ಅಂತಹ ಅಫಘಾನ್ ಪ್ರಜೆಗಳನ್ನು ತಡೆಯುವುದಿಲ್ಲ ಎಂದು ನಿರೀಕ್ಷಿಸುವುದಾಗಿಯೂ ತಿಳಿಸಿವೆ.

ಇದನ್ನೂ ಓದಿ: Aliens Child : ಏಲಿಯನ್ ರೀತಿ ಮಗುವಿನ ಜನನ !

RELATED ARTICLES

Most Popular