ಚೀನಾ : Langya henipavirus : ಚೀನಾದಿಂದ ಬಂದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಅಲ್ಲೋಲ ಕಲ್ಲೋಲ ಮಾಡಿ ಹಾಕಿದೆ. ಇನ್ನೂ ಕೊರೊನಾ ವೈರಸ್ನಿಂದ ಜಗತ್ತು ಚೇತರಿಸಿಕೊಳ್ಳುತ್ತಿರುವುದರ ನಡುವೆಯೇ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಹುಟ್ಟುಕೊಂಡಿದೆ. ಚೀನಾದಲ್ಲಿ ಲಾಂಗ್ಯಾ ಹೆನಿಪಾವೈರಸ್ನ 35 ಪ್ರಕರಣಗಳು ವರದಿ ಮಾಡಿವೆ. ಇದು ಪ್ರಾಣಿಗಳಿಂದ ಮನುಷ್ಯನಿಗೆ ಬರುವ ಕಾಯಿಲೆಯಾಗಿದ್ದು ಮೂತ್ರಪಿಂಡ ಹಾಗೂ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ. ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ.
ತೈವಾನ್ನ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ನ್ನು ಉಲ್ಲೇಖಿಸಿ ವರದಿ ಮಾಡಲಾಗಿದ್ದು ಶಾನ್ಡಾಂಗ್ ಹಾಗೂ ಹೆನಾನ್ ಪ್ರಾಂತ್ಯಗಳಲ್ಲಿ ತೀವ್ರವಾದ ಲ್ಯಾಂಗ್ಯಾ ಹೆನಿಪಾವೈರಸ್ನ 35 ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 26 ಮಂದಿ ಸೋಂಕಿತರಿಗೆ ಯಾವುದೇ ಇತರೆ ರೋಗಕಾರಕಗಳು ಕಂಡು ಬಂದಿಲ್ಲ.
ವೈದ್ಯಕೀಯ ವರದಿಗಳು ನೀಡಿರುವ ಮಾಹಿತಿಯ ಪ್ರಕಾರ, ಹೆನಿಪಾ ವೈರಸ್ಗಳು ಬಾವಲಿಗಳಿಂದ ಹರಡುವ ಕಾಯಿಲೆಯಾಗಿದ್ದು ಆಸ್ಟ್ರೇಲಿಯಾ ಹಾಗೂ ಏಷ್ಯಾಗಳಲ್ಲಿ ಹೆಚ್ಚುತ್ತಿರುವ ಝೂನೋಟಿಕ್ ರೋಗಗಳ ಜೊತೆಯಲ್ಲಿ ಸಂಬಂಧವನ್ನು ಹೊಂದಿದೆ. ನಿಫಾ ವೈರಸ್ ಕೂಡ ಇದೇ ಕುಟುಂಬಕ್ಕೆ ಸೇರಿದೆ ಎನ್ನಲಾಗಿದೆ.
ಆಗಸ್ಟ್ ನಾಲ್ಕರಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ನಲ್ಲಿ ಪ್ರಕಟವಾದ ಎ ಝೂನೋಟಿಕ್ ಹೆನಿಪಾವೈರಸ್ ಇನ್ ಫೆಬ್ರೈಲ್ ಪೇಷಂಟ್ಸ್ ಇನ್ ಚೀನಾ ಅಧ್ಯಯನದಲ್ಲಿ ಜ್ವರವನ್ನು ಉಂಟುಮಾಡುವ ಮಾನವನ ಅನಾರೋಗ್ಯಕ್ಕೆ ಸಂಬಂಧಿಸಿದ ಹೊಸ ಹೆನಿಪಾವೈರಸ್ ಅನ್ನು ಚೀನಾದಲ್ಲಿ ಗುರುತಿಸಲಾಗಿದೆ ಎಂದು ಹೇಳಿದೆ.
ಲಕ್ಷಣಗಳು :
ಈ ಸೋಂಕಿಗೆ ಒಳಗಾದ 26 ರೋಗಿಗಳು ಜ್ವರ, ಆಯಾಸ, ಕೆಮ್ಮು, ಅಜೀರ್ಣ, ಸ್ನಾಯು ನೋವು, ವಾಕರಿಕೆ, ತಲೆನೋವು ಮತ್ತು ವಾಂತಿ ಸೇರಿದಂತೆ ಅನೇಕ ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ವರದಿಯಾಗಿದೆ. ಲ್ಯಾಂಗ್ಯಾ ಹೆನಿಪಾವೈರಸ್ ಸೋಂಕಿಗೆ ಒಳಗಾದವರಲ್ಲಿ ಬಿಳಿ ರಕ್ತಕಣಗಳ ಕುಸಿತ, ಕಡಿಮೆ ಪ್ಲೇಟ್ಲೆಟ್, ಯಕೃತ್ತು ಹಾಗೂ ಮೂತ್ರಪಿಂಡಗಳ ವೈಫಲ್ಯವನ್ನು ಅನುಭವಿಸುತ್ತಿರುವುದು ವರದಿಯಾಗಿದೆ .
ಆಗಸ್ಟ್ 7ರಂದು ನಡೆಸಲಾದ ಸೆರೋಲಾಜಿಕಲ್ ಸಮೀಕ್ಷೆಯ ಪ್ರಕಾರ 2 ಪ್ರತಿಶತ ಮೇಕೆಗಳು ಹಾಗೂ 5 ಪ್ರತಿಶತ ನಾಯಿಗಳಲ್ಲಿ ಈ ಸೋಂಕು ಕಂಡುಬಂದಿದೆ ಎಂದು ತಿಳಿದುಬಂದಿದೆ.
25 ಕಾಡು ಪ್ರಾಣಿಗಳ ಪ್ರಭೇದಗಳ ಮೇಲೆ ಈ ಸೋಂಕಿನ ಬಗ್ಗೆ ಪರೀಕ್ಷೆಯನ್ನು ನಡೆಸಲಾಗಿದ್ದು ಶ್ರೂ ಎಂಬ ಪ್ರಾಣಿಯು ಲ್ಯಾಂಗ್ಯಾ ಹೆನಿಪಾವೈರಸ್ನ ಮೂಲವಾಗಿರಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ 27 ಪ್ರತಿಶತ ಶ್ರೂಗಳಲ್ಲಿ ಈ ವೈರಸ್ ಕಂಡುಬಂದಿದೆ ಎಂದು ಸಿಡಿಸಿ ಡೆಪ್ಯೂಟಿ ಡಿಜಿ ಹೇಳಿದ್ದಾರೆ.
ಲ್ಯಾಂಗ್ಯಾ ವೈರಸ್ ಅತ್ಯಂತ ಹೊಸದಾಗಿ ಪತ್ತೆಯಾಗಿರುವ ಸೋಂಕಾಗಿರುವುದರಿಂದ ತೈವಾನ್ನ ಪ್ರಯೋಗಾಲಯಗಳಿಗೆ ವೈರಸ್ ಬಗ್ಗೆ ಇನ್ನಷ್ಟು ಅಧ್ಯಯನ ಕೈಗೊಳ್ಳಲು ಪ್ರಮಾಣಿತ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷಾ ವಿಧಾನವನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ. ಇದರಿಂದ ಮನುಷ್ಯನ ಮೇಲೆ ಸೋಂಕಿನ ಪ್ರಮಾಣ ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ಅಧ್ಯಯನ ಮಾಡಬಹುದಾಗಿದೆ.
ಇದನ್ನು ಓದಿ : 3rd CM proposal : ಮತ್ತೆ ಮೂರನೇ ಸಿಎಂ ಪ್ರಸ್ತಾಪ : ಬೆಚ್ಚಿ ಬಿದ್ದ ಬಿಜೆಪಿ ಶಾಸಕರು
ಇದನ್ನೂ ಓದಿ : MS Dhoni Menton CSA T20 League : ದಕ್ಷಿಣ ಆಫ್ರಿಕಾ ಟಿ20 ಲೀಗ್‌ನಲ್ಲಿ ಸಿಎಸ್‌ಕೆ ತಂಡಕ್ಕೆ ಎಂ.ಎಸ್ ಧೋನಿ ಮೆಂಟರ್
All about Langya henipavirus that has infected 35 people in China