ನವದೆಹಲಿ : ಇ ಕಾಮರ್ಸ್ ದೈತ್ಯ ಅಮೆಜಾನ ಸಂಸ್ಥೆಯ ಸಿಇಒ ಸ್ಥಾನದಿಂದ ಜೆಫ್ ಬೆಜೋಸ್ ಕೆಳಗೆ ಇಳಿಯಲು ಮುಂದಾಗಿದ್ದಾರೆ. ಅಮೆಜಾನ್ ಸಿಇಒ ಹುದ್ದೆಯನ್ನು ಆ್ಯಂಡಿ ಜಸ್ಸಿ ಅವರಿಗೆ ಹಸ್ತಾಂತರಿ ಸಲಿದ್ದಾರೆ. ಆದರೂ ಅಮೆಜಾನ್ ಸಂಸ್ಥೆಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಅವರು ಮುಂದುವರಿಯಲಿದ್ದಾರೆ
ಜೆಫ್ ಬೆಜೋಸ್ ಇನ್ಮುಂದೆ ಖಾಸಗಿ ಬಾಹ್ಯಾಕಾಶ ಪರಿಶೋಧನಾ ಸಂಸ್ಥೆ, ಸಾಮಾಜಿಕ ಕೆಲಸಗಳು ಮತ್ತು ಬೇರೆ ಕ್ಷೇತ್ರಗಳಲ್ಲಿ ಮುಂದುವ ರಿಸಲು ನಿರ್ಧರಿಸಿದ್ದಾರೆ. ಸುಮಾರು 25 ವರ್ಷಗಳ ಹಿಂದೆ ಜೆಫ್ ಬೆಜೊಸ್ ಅವರು ಸ್ಥಾಪಿಸಿದ್ದ ಅಮೆಜಾನ್ ಸಂಸ್ಥೆ ಇ-ಕಾಮರ್ಸ್ ಕ್ಷೇತ್ರದಲ್ಲಿ ದೈತ್ಯವಾಗಿ ಬೆಳೆದಿದೆ.
ಅಮೇಜಾನ್ ಸಂಸ್ಥೆ ಇ-ಕಾಮರ್ಸ್ ಉದ್ಯಮ, ಪುಸ್ತಕ ಮಾರಾಟ ಮತ್ತು ಚಿಲ್ಲರೆ ಮಾರುಕಟ್ಟೆ ಕ್ಷೇತ್ರದಲ್ಲಿ ಮುಂಚೂಣಿ ಸ್ಥಾನವನ್ನು ಹೊಂದಿದೆ. ಅಲ್ಲದೇ ಅಮೆಜಾನ್ ಸಂಸ್ಥೆಯ ಮಾರುಕಟ್ಟೆ ಬೆಲೆ 1.7 ಟ್ರಿಲಿಯನ್ ಡಾಲರ್ ಗಿಂತಲೂ ಅಧಿಕವಾಗಿದೆ.
ಇ-ಕಾಮರ್ಸ್, ಕ್ಲೌಡ್ ಕಂಪ್ಯೂಟಿಂಗ್, ದಿನಸಿ ವಸ್ತುಗಳ ಆನ್ ಲೈನ್ ಮಾರಾಟ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಸ್ಟ್ರೀಮಿಂಗ್ ಮೀಡಿಯಾ ಹೀಗೆ ಹಲವು ವಹಿವಾಟುಗಳಿಂದ ಕಳೆದ ವರ್ಷ 386 ಬಿಲಿಯನ್ ಡಾಲರ್ ವಾರ್ಷಿಕ ಆದಾಯ ಪಡೆಯುತ್ತಿದೆ.