ಢಾಕಾ : (Bangladesh Chittagong) ಆಮ್ಲಜನಕ ಪ್ಲಾಂಟ್ ಸ್ಪೋಟಗೊಂಡು (Oxygen Plant Blast) ಕನಿಷ್ಠ 6 ಮಂದಿ ಸಾವನ್ನಪ್ಪಿ, ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಾಂಗ್ಲಾದೇಶದ ಚಿತ್ತಗಾಂಗ್‌ನ ಸೀತಾಕುಂಡ ಉಪಜಿಲಾದ ಕದಮ್ ರಸುಲ್ (ಕೇಶಬ್‌ಪುರ್) ಪ್ರದೇಶದಲ್ಲಿ ನಡೆದಿದೆ. ಸ್ಫೋಟದ ತೀವ್ರತೆಗೆ ಎರಡು ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿನ ಪ್ರದೇಶದಲ್ಲಿರುವ ಕಟ್ಟಡಗಳು ನಡುಗಿದವು. ಬೃಹತ್ ಸ್ಫೋಟದ ನಂತರ ಚಿತ್ತಗಾಂಗ್ ಪ್ರದೇಶದಲ್ಲಿನ ಆಮ್ಲಜನಕ ಸ್ಥಾವರದಿಂದ ಹಲವಾರು ವಸ್ತುಗಳು ಹಾರುತ್ತಿರುವುದು ಕಂಡುಬಂದಿದೆ.
ಮೃತರ ಪೈಕಿ 5 ಮಂದಿ ಆಮ್ಲಜನಕ ಪ್ಲಾಂಟ್ ನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ಪ್ಲಾಂಟ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ತಮ್ಮ ಕದಮ್ ರಸುಲ್ ಬಜಾರ್ ನಲ್ಲಿರುವ ತಮ್ಮ ಅಂಗಡಿಯಲ್ಲಿ ಕುಳಿತಿದ್ದ 65 ವರ್ಷದ ಶಂಶುಲ್ ಆಲಂ ಮೇಲೆ ಲೋಹದ ವಸ್ತುವೊಂದು ಬಿದ್ದು ಅವರು ಸಾವನ್ನಪ್ಪಿದ್ದಾರೆ.ಆಲಂ ಅವರ ಸಹೋದರ ಮೌಲಾನಾ ಒಬೈದುಲ್ ಮೊಸ್ತಫಾ ಅವರ ಪ್ರಕಾರ, ಸ್ಫೋಟದ ನಂತರ ಸುಮಾರು 250-300 ಕೆಜಿ ತೂಕದ ಲೋಹದ ವಸ್ತು ಅವನ ಮೇಲೆ ಬಿದ್ದಿತು ಮತ್ತು ಅವರು ಸ್ಥಳದಲ್ಲೇ ಸಾವನ್ನಪ್ಪಿದರು.
ಅಗ್ನಿಶಾಮಕ ಅಧಿಕಾರಿಗಳ ಪ್ರಕಾರ, ಸ್ಫೋಟವು ಶನಿವಾರ ಸಂಜೆ 4:30 ರ ಸುಮಾರಿಗೆ ಸಂಭವಿಸಿದೆ. ಮಾಹಿತಿ ಪಡೆದ ಸೀತಾಕುಂದ ಮತ್ತು ಕುಮಿರ ಅಗ್ನಿಶಾಮಕ ದಳದಿಂದ ಒಂಬತ್ತು ಅಗ್ನಿಶಾಮಕ ದಳಗಳು ಒಟ್ಟಾಗಿ ಸ್ಥಳಕ್ಕೆ ಧಾವಿಸಿದವು. ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಂಡರು. ಆಮ್ಲಜನಕ ಪ್ಲಾಂಟ್ ಸ್ಪೋಟಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಬಾಂಗ್ಲಾದೇಶ ಸರಕಾರ ಉನ್ನತ ಮಟ್ಟದ ತನಿಖೆಗೆ ಈಗಾಗಲೇ ಆದೇಶಿಸಿದೆ. ತನಿಖೆಯ ನಂತರವಷ್ಟೇ ದುರಂತಕ್ಕೆ ನಿಜವಾದ ಕಾರಣ ತಿಳಿದು ಬರಬೇಕಾಗಿದೆ.
ಇದನ್ನೂ ಓದಿ : ಸಾಲಿಗ್ರಾಮದ ಕೆನರಾ ಬ್ಯಾಂಕ್‌ನಲ್ಲಿ ಸತ್ತ ವ್ಯಕ್ತಿಗೆ ಸಿಗುತ್ತೆ ಜೀವಂತ ವ್ಯಕ್ತಿಯ ಎಫ್‌ಡಿ ಹಣ !
ಇದನ್ನೂ ಓದಿ : ಶಾಲಾ ಶುಲ್ಕ ಪಾವತಿಸದ ಕಾರಣ ಪರೀಕ್ಷಾ ಹಾಲ್ ಪ್ರವೇಶ ನಿರಾಕರಣೆ: ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ
ಅಕ್ರಮವಾಗಿ ತಂಗಿದ್ದ 18 ಬಾಂಗ್ಲಾದೇಶಿ ಪ್ರಜೆಗಳ ಬಂಧನ
ಥಾಣೆ: ಯಾವುದೇ ಪುರಾವೆಗಳಿಲ್ಲದೇ ದೇಶದಲ್ಲಿ ಅಕ್ರಮವಾಗಿ ತಂಗಿದ್ದ 18 ಬಾಂಗ್ಲಾದೇಶಿ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿ ಪಡೆದ ಮಹಾರಾಷ್ಟ್ರ ಪೊಲೀಸರು ಮಹಾರಾಷ್ಟ್ರದ ಥಾಣೆ ಜಿಲ್ಲೆಯಿಂದ 10 ಮಹಿಳೆಯರು ಸೇರಿದಂತೆ 18 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದಾರೆ.
ನವಿ ಮುಂಬೈನ ಘನ್ಸೋಲಿ ಪ್ರದೇಶದಲ್ಲಿನ ಕಟ್ಟಡವೊಂದರಲ್ಲಿ ಕೆಲವು ಬಾಂಗ್ಲಾದೇಶಿ ಪ್ರಜೆಗಳು ತಂಗಿದ್ದು, ಅವರಲ್ಲಿ ಒಬ್ಬರ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಸೇರಿದ್ದಾರೆ ಎನ್ನುವುದರ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಈ ಸುಳಿವಿನ ಮೇಲೆ ಕಾರ್ಯನಿರ್ವಹಿಸಿದ ನವಿ ಮುಂಬೈನ ಪೊಲೀಸರು ಕಟ್ಟಡದ ಮೇಲೆ ದಾಳಿ ನಡೆಸಿದ್ದಾರೆ. ವೀಸಾ ಮತ್ತು ಪಾಸ್‌ಪೋರ್ಟ್‌ನಂತಹ ಯಾವುದೇ ಮಾನ್ಯ ದಾಖಲೆಗಳಿಲ್ಲದೆ ಕಳೆದ ಒಂದು ವರ್ಷದಿಂದ ಈ ಪ್ರದೇಶದಲ್ಲಿ ನೆಲೆಸಿರುವುದು ದಾಳಿಯ ವೇಳೆ ತಿಳಿದುಬಂದಿದೆ. ಹೀಗಾಗಿ ಅಕ್ರಮವಾಗಿ ವಾಸಿಸುತ್ತಿದ್ದ ಹತ್ತು ಮಹಿಳೆಯರು ಮತ್ತು ಎಂಟು ಪುರುಷರನ್ನು ಕಾರ್ಯಾಚರಣೆಯ ಸಮಯದಲ್ಲಿ ಬಂಧಿಸಲಾಗಿದೆ
“ನವಿ ಮುಂಬೈನ ಘನ್ಸೋಲಿ ಪ್ರದೇಶದಲ್ಲಿನ ಕಟ್ಟಡವೊಂದರಲ್ಲಿ ಕೆಲವು ಬಾಂಗ್ಲಾದೇಶಿ ಪ್ರಜೆಗಳು ಅವರಲ್ಲಿ ಒಬ್ಬರ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಸೇರುತ್ತಾರೆ ಎಂದು ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಅದರ ಮೇಲೆ ಕಾರ್ಯನಿರ್ವಹಿಸಿದ ನವಿ ನಂಬೈ ಪೊಲೀಸ್‌ನ ಅಪರಾಧ ವಿಭಾಗದ ಅಧಿಕಾರಿಗಳು ರಾತ್ರಿ ಆವರಣದ ಮೇಲೆ ದಾಳಿ ನಡೆಸಿದರು. ,” ಎಂದು ರಬಳೆ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಇದೀಗ 18 ಬಾಂಗ್ಲಾದೇಶಿ ಪ್ರಜೆಗಳನ್ನು ಬಂಧಿಸಿದ್ದು, ಅವರ ವಿರುದ್ದ ವಿದೇಶಿಯರ ಕಾಯಿದೆ 1946 ಮತ್ತು ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ನಿಯಮಗಳು 1950 ರ ಅಡಿಯಲ್ಲಿ ಅವರ ವಿರುದ್ಧ ಅಪರಾಧವನ್ನು ದಾಖಲಿಸಲಾಗಿದೆ ಮತ್ತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Bangladesh Chittagong Blast At Oxygen Plant 6 Dead Several Injured