ನವದೆಹಲಿ : ಸುಮಾರು 133 ಮಂದಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬೋಯಿಂಗ್ 737 ಚೀನಾ (China) ಈಸ್ಟರ್ನ್ ಏರ್‌ಲೈನ್ಸ್ ವಿಮಾನ ಪತನವಾಗಿರುವ ಘಟನೆ ಚೀನಾದಲ್ಲಿ ಗುವಾಂಗ್ಕ್ಸಿ ಎಂಬಲ್ಲಿ ನಡೆದಿದೆ. ಆದರೆ ಸಾವು ನೋವುಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಚೀನಾದ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ, ಚೀನಾ ಈಸ್ಟರ್ನ್ ಏರ್ಲೈನ್ಸ್ ಬೋಯಿಂಗ್ 737-800 ಕಾರ್ಯಾಚರಣೆ ವಿಮಾನ ಅಪಘಾತಕ್ಕೆ ಈಡಾಗಿದೆ. ಗುಡ್ಡದ ಪ್ರದೇಶದಲ್ಲಿ ವಿಮಾನ ಪತನವಾಗಿದ್ದು, ವಿಮಾನದಲ್ಲಿ ಸುಮಾರು 133 ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ವಿಮಾನ ಗುಡ್ಡ ಪ್ರದೇಶದಲ್ಲಿ ಪತನವಾಗಿದ್ದು, ಪತನದ ಬೆನ್ನಲ್ಲೇ ವಿಮಾನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರು ವಿಮಾನ ಪತನದ ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಸ್ಥಳಕ್ಕೆ ರಕ್ಷಣಾ ತಂಡ ಭೇಟಿ ನೀಡಿದ್ದು, ಪರಿಶೀಲನಾ ಕಾರ್ಯವನ್ನು ಆರಂಭಿಸಿದೆ. ಆದರೆ ವಿಮಾನದಲ್ಲಿದ್ದವರ ಪೈಕಿ ಎಷ್ಟು ಮಂದಿ ಬದುಕುಳಿದಿದ್ದಾರೆ ಅನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.
A China Eastern Airlines Boeing 737-800 operating flight MU5735 has reportedly crashed near Wuzhou in southern China. Initial reports say 133 onboard.pic.twitter.com/iipgQYGkhK
— WLVN Analysis🔍 (@TheLegateIN) March 21, 2022
ಇದನ್ನೂ ಓದಿ : ವ್ಲಾಡಿಮಿರ್ ಪುಟಿನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯೇ? ಅವರ ಬಳಿಯಿರುವ ಹಣವೆಷ್ಟು?
ಇದನ್ನೂ ಓದಿ : China : ಚೀನಾದಲ್ಲಿ ಒಂದೇ ದಿನ ದಾಖಲೆಯ ಕೊರೋನಾ ಪ್ರಕರಣ ದಾಖಲು : ಕೋಟ್ಯಾಂತರ ಮಂದಿಗೆ ದಿಗ್ಬಂಧನ
(Boeing 737 Plane Carrying 133 Crashes In China, Causes Mountain Fire)