ಬಲ್ಗೇರಿಯಾ : ಚಲಿಸುತ್ತಿದ್ದ ಬಸ್ಸಿನಲ್ಲಿ ಬೆಂಕಿ ಅವಘಡ ಸಂಭವಿಸಿ ಅಪಘಾತದಲ್ಲಿ (Bus Accident) 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಸಾವನ್ನಪ್ಪಿದ ಘಟನೆ ಪಶ್ಚಿಮ ಬಲ್ಗೇರಿಯಾದ ಹೆದ್ದಾರಿಯಲ್ಲಿ ನಡೆದಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬಸ್ಸಿನಿಂದ ಜಿಗಿದು ಗಾಯಗೊಂಡಿದ್ದ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ.
ಸೋಫಿಯಾದಿಂದ 45 ಕಿಮೀ (26 ಮೈಲುಗಳು) ಹೆದ್ದಾರಿಯಲ್ಲಿ ಪ್ರಯಾಣಿಸುವಾಗ ಸ್ಥಳೀಯ ಕಾಲಮಾನ ಮುಂಜಾನೆ 2 ಗಂಟೆಯ ಸುಮಾರಿಗೆ ಅಗ್ನಿಅವಘಡಕ್ಕೆ ಒಳಗಾಗಿದೆ. ಬಲ್ಗೇರಿಯಾದ ಆಂತರಿಕ ಸಚಿವಾಲಯವು 45 ಜನರು ಸಾವನ್ನಪ್ಪಿರುವ ಕುರಿತು ಮಾಹಿತಿಯನ್ನು ನೀಡಿದೆ. ಬಾಲ್ಕನ್ ದೇಶದ ಇತಿಹಾಸದಲ್ಲಿಯೇ ಅತ್ಯಂತ ಭೀಕರವಾದ ಅಪಘಾತವಾಗಿದೆ. ಬೋಸ್ನೆಕ್ ಗ್ರಾಮದ ಬಳಿ ಅಪಘಾತ ಸಂಭವಿಸಿದ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಮೆಸಿಡೋನಿಯಾದ ಮುಖ್ಯ ಪ್ರಾಸಿಕ್ಯೂಟರ್ ಲುಬೊಮಿರ್ ಜೋವೆವ್ಸ್ಕಿ, ಸತ್ತವರಲ್ಲಿ 12 ಮಕ್ಕಳು ಮಕ್ಕಳು ಸೇರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಟರ್ಕಿಯಿಂದ ಉತ್ತರ ಮೆಸಿಡೋನಿಯಾಕ್ಕೆ ತೆರಅಥವಾ ನಂತರ ಹೆದ್ದಾರಿ ತಡೆಗೋಡೆಗೆ ಬಡಿದಿದೆ. ಅಲ್ಲದೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡ ನಂತರದಲ್ಲಿ ಜೀವ ರಕ್ಷಣೆಗಾಗಿ ಬಸ್ಸಿನಿಂದ ಕೆಳಗೆ ಹಾರಿದ್ದಾರೆ. ಹೀಗಾಗಿ ಗಾಯಗೊಂಡಿದ್ದಏಳು ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಆಂತರಿಕ ಸಚಿವ ಬಾಯ್ಕೊ ರಾಶ್ಕೋವ್, ಘಟನೆಯಲ್ಲಿ ಮೃತ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಮೆಸಿಡೋನಿಯನ್ ಟ್ರಾವೆಲ್ ಏಜೆನ್ಸಿಯ ನಾಲ್ಕು ಬಸ್‌ಗಳು ಟರ್ಕಿಯಿಂದ ಸೋಮವಾರ ತಡರಾತ್ರಿ ಬಲ್ಗೇರಿಯಾವನ್ನು ಪ್ರವೇಶಿಸಿವೆ. ಚಾಲಕನ ಅಜಾಗರೂಕತೆಯಿಂದ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಲಾಗಿದೆ.
ಇದನ್ನೂ ಓದಿ : ಸಿನಿಮಾದಲ್ಲಿ ನಟಿಸುವ ಆಮಿಷ : ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಕನ ಬಂಧನ
ಇದನ್ನೂ ಓದಿ : ವ್ಯಾನ್ – ಟ್ಯಾಂಕರ್ ಭೀಕರ ಅಪಘಾತ : 5 ಮಂದಿ ಸಾವು, ಮೂವರ ಸ್ಥಿತಿ ಚಿಂತಾಜನಕ
( Bus Accident: 45 people died, including 12 children’s )