ಕೆನಡಾ : ಪ್ಯಾಸೆಂಜರ್ ವ್ಯಾನ್ ಹಾಗೂ ಟ್ರಾಕ್ಟರ್ – ಟ್ರೇಲರ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರಂತ ಘಟನೆ ಕೆನಡಾದ ಟೊರೆಂಟೋ ಬಳಿಯಲ್ಲಿ ನಡೆದಿದೆ. ಅಲ್ಲದೇ ಅಪಘಾತದಲ್ಲಿ ಗಾಯಗೊಂಡಿರುವ ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ ಸಿಂಗ್, ಕರಣ್‌ಪಾಲ್ ಸಿಂಗ್, ಮೋಹಿತ್ ಚೌಹಾನ್ ಮತ್ತು ಪವನ್ ಕುಮಾರ್ ಎಂಬವರೇ ಮೃತ ವಿದ್ಯಾರ್ಥಿಗಳಾಗಿದ್ದಾರೆ. ಕೆನಡಾದ ಟೊರೆಂಟೋದ ಹೆದ್ದಾರಿ 401 ರಲ್ಲಿ ಪ್ಯಾಸೆಂಜರ್ ವ್ಯಾನ್‌ನಲ್ಲಿ ಪಶ್ಚಿಮಕ್ಕೆ ಪ್ರಯಾಣ ಬೆಳೆಸುತ್ತಿದ್ದರು. ಬೆಳಗ್ಗೆ 3:45 ರ ಸುಮಾರಿಗೆ ಪ್ಯಾಸೆಂಜರ್ ವ್ಯಾನ್ ಟ್ರ್ಯಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದಿದ್ದಾರೆ. ಸ್ಥಳದಲ್ಲಿಯೇ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಉಳಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ವಿಂಟೆ ವೆಸ್ಟ್ ಒಂಟಾರಿಯೊ ಪ್ರಾಂತೀಯ ಪೊಲೀಸ್ (OPP) ತನಿಖೆಯನ್ನು ಮುಂದುವರಿಸಿದ್ದಾರೆ. ಆಟೋ ಅಪಘಾತದಲ್ಲಿ ಕನಿಷ್ಠ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೆನಡಾದ ಭಾರತದ ಕಮಿಷನರ್ ಅಜಯ್ ಬಿಸಾರಿಯಾ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎನ್‌ಐಎ ವರದಿ ಮಾಡಿದೆ.
Heart-breaking tragedy in Canada: 5 Indians students passed away in an auto accident near Toronto on Saturday. Two others in hospital. Deepest condolences to the families of the victims. @IndiainToronto team in touch with friends of the victims for assistance. @MEAIndia
— Ajay Bisaria (@Ajaybis) March 14, 2022
ಟ್ವಿಟರ್‌ನಲ್ಲಿ ಅಜಯ್ ಬಿಸಾರಿಯಾ ಅವರು ಸಂತ್ರಸ್ತರ ಕುಟುಂಬಗಳಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.”ಕೆನಡಾದಲ್ಲಿ ಹೃದಯ ವಿದ್ರಾವಕ ದುರಂತ: ಶನಿವಾರ ಟೊರೊಂಟೊ ಬಳಿ ಆಟೋ ಅಪಘಾತದಲ್ಲಿ 5 ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿದ್ದರು. ಸಂತ್ರಸ್ತರ ಕುಟುಂಬಗಳಿಗೆ ಆಳವಾದ ಸಂತಾಪ. ಸಹಾಯಕ್ಕಾಗಿ ಸಂತ್ರಸ್ತರ ಸ್ನೇಹಿತರೊಂದಿಗೆ @IndiainToronto ತಂಡವು ಸಂಪರ್ಕದಲ್ಲಿದೆ, ಕೆನಡಾದಲ್ಲಿರುವ ಭಾರತದ ಹೈಕಮಿಷನರ್ ಹೇಳಿದ್ದಾರೆ.
(Auto accident in Canada kills 5 Indian students, two admitted hospital)