ಸೋಮವಾರ, ಏಪ್ರಿಲ್ 28, 2025
HomeWorld8 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಕೊರೊನಾ ! ಅಮೇರಿಕಾ ಸಂಶೋಧಕರಿಂದ ಬಯಲಾಯ್ತು ಚೀನಾದ ಮಹಾಸುಳ್ಳು

8 ವರ್ಷಗಳ ಹಿಂದೆಯೇ ಪತ್ತೆಯಾಗಿತ್ತು ಕೊರೊನಾ ! ಅಮೇರಿಕಾ ಸಂಶೋಧಕರಿಂದ ಬಯಲಾಯ್ತು ಚೀನಾದ ಮಹಾಸುಳ್ಳು

- Advertisement -

ವಾಷಿಂಗ್ಟನ್ : ಜಗತ್ತನೇ ನಡುಗಿಸಿರುವ ಕೊರೊನಾ ವೈರಸ್ ಸೋಂಕಿನ ಕುರಿತು ಚೀನಾ ಹೇಳುತ್ತಾ ಬಂದಿದ್ದ ಒಂದೊಂದೆ ಸುಳ್ಳು ಇದೀಗ ಬಯಲಾಗುತ್ತಿದೆ. ಕೇವಲ 8 ತಿಂಗಳ ಹಿಂದೆಯಷ್ಟೇ ಕೊರೊನಾ ಪತ್ತೆಯಾಗಿದೆ ಎಂದು ಚೀನಾ ಹೇಳುವ ಹಸಿ ಹಸಿ ಸುಳ್ಳನ್ನು ಅಮೇರಿಕಾದ ಸಂಶೋಧಕರು ದಾಖಲೆ ಸಮೇತ ಬಯಲು ಮಾಡಿದ್ದಾರೆ. 

ಚೀನಾದಲ್ಲಿ ಕೊರೊನಾ ಹೆಮ್ಮಾರಿ ಕೇವಲ 8 ತಿಂಗಳ ಹಿಂದಯೆಷ್ಟೇ ಅಲ್ಲಾ 8 ವರ್ಷಗಳ ಹಿಂದೆಯೇ ಚೀನಾದಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಅಲ್ಲದೇ ಮಹಾಮಾರಿ ಚೀನಾವನ್ನು ಕಾಡಿತ್ತು. ಆದ್ರೀಗ ಚೀನಾ ಕೊರೊನಾ ವೈರಸ್ ಸೋಂಕಿನ ಭಯಾನಕೆಯನ್ನು . ಅಮೇರಿಕಾ ಸಂಶೋಕರು ಪತ್ತೆ ಹಚ್ಚಿದ್ದಾರೆ.

ಚೀನಾದ ಗಣಿಯಲ್ಲಿ ಕಳೆದ 8 ವರ್ಷದ ಹಿಂದೆಯೇ ಕೊರೊನಾ ವೈರಸ್ ಪತ್ತೆಯಾಗಿತ್ತು. ಚೀನಾದಲ್ಲಿ ಈ ಸೋಂಕು 2012ರಲ್ಲಿ ಪತ್ತೆಯಾದ ಸಮಯದಲ್ಲಿಯೇ ಫಿಲಿಪ್ಪೀನ್ಸ್ ಕ್ವಿಜೋನ್ ಸಿಟಿಯಲ್ಲಿ ಜಿ -614 ಪತ್ತೆಯಾಗಿದೆ, ಇದು ವುಹಾನ್ ವೈರಸ್ಗಿಂತ 1.22 ಪಟ್ಟು ವೇಗವಾಗಿ ಹರಡಿತ್ತು. ಮಲೇಷ್ಯಾದಲ್ಲಿ ಜಿ -614 ಎಂಬ ವೈರಸ್ ಹರಡಿತ್ತು. ಇವೆಲ್ಲವೂ ಚೀನಾದ ಕರೊನಾ ವೈರಸ್ನ ವಿವಿಧ ರೂಪಾಂತರಗಳೇ ಎಂದು ವಿಜ್ಞಾನಿಗಳು ವಿಶ್ಲೇಷಿಸಿದ್ದಾರೆ.

ಈ ಕುರಿತು ದಾಖಲೆ ಸಮೇತ ವಿವರಣೆಯನ್ನು ನೀಡಿರುವ ಅಮೇರಿಕಾದ ಸಂಶೋಧಕರು ದಾಖಲೆ ಸಮೇತ ಮಾಹಿತಿಯನ್ನು ನೀಡಿದ್ದಾರೆ.  ಚೀನಾದ ನೈರುತ್ಯ ದಿಕ್ಕಿನ ಯುನ್ನಾನ್ ಪ್ರಾಂತ್ಯದ ಮೊಜಿಯಾಂಗ್ ಗಣಿ ಬಳಿ ಈ ವೈರಸ್ ಮೊದಲು ಪತ್ತೆಯಾಗಿದೆ. 2012ರಲ್ಲಿ ಕೆಲವು ಕಾರ್ಮಿಕರನ್ನು ಸತ್ತು ಬಿದ್ದಿದ್ದ ಬಾವಲಿಗಳನ್ನು ಸ್ವಚ್ಛಗೊಳಿಸಲು ಗಣಿಗೆ ಕಳುಹಿಸಲಾಗಿದೆ. ಈ ಕಾರ್ಮಿಕರು ಗಣಿಯಲ್ಲಿ 14 ದಿನಗಳನ್ನು ಅಲ್ಲಿ ಕಳೆದಿದ್ದರು. ನಂತರ 6 ಕಾರ್ಮಿಕರು ಅನಾರೋಗ್ಯಕ್ಕೆ ಒಳಗಾದರು.

ಈ ರೋಗಿಗಳಿಗೆ ಹೆಚ್ಚಿನ ಜ್ವರ, ಕೆಮ್ಮು, ಉಸಿರಾಟದ ತೊಂದರೆ, ತೋಳು ಮತ್ತು ಕಾಲುಗಳಲ್ಲಿ ತೀವ್ರವಾದ ನೋವು, ತಲೆನೋವು ಮತ್ತು ಗಂಟಲು ನೋವು ಇತ್ತು. ಅಲ್ಲದೇ ಅನಾರೋಗ್ಯ ಪೀಡಿತ ರೋಗಿಗಳಲ್ಲಿ ಮೂವರು ಮೃತಪಟ್ಟಿದ್ದರು.

ಈ ಎಲ್ಲಾ ಮಾಹಿತಿಯು ಚೀನಾದ ವೈದ್ಯ ಲಿ ಕ್ಸು ಅವರ ಸ್ನಾತಕೋತ್ತರ ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ವೈದ್ಯ ಡಾ.ಲಿ ಕ್ಸು ಬರೆದಿರುವ  ಪ್ರಬಂಧವನ್ನು ಡಾ. ಜೊನಾಥನ್ ಲಾಥಮ್ ಮತ್ತು ಡಾ. ಆಲಿಸನ್ ವಿಲ್ಸನ್ ಅನುವಾದಿಸುವುದರ ಜೊತೆಗೆ ಅಧ್ಯಯನವನ್ನೂ ಮಾಡಿದ್ದಾರೆ.

ಕೊರೊನಾ ವೈರಸ್ ಸೋಂಕಿನ ತೀವ್ರತೆ ಕೆಂಪುರಾಷ್ಟ್ರ ಚೀನಾಕ್ಕೆ ಮೊದಲೇ ಇತ್ತು. ಆದರೂ ಚೀನಾ ಬೇಕು ಅಂತಲೇ ಹೆಮ್ಮಾರಿಯ ವಿಚಾರವನ್ನು ಮುಚ್ಚಿಟ್ಟಿದೆ. ಆದರೆ ಚೀನಾ ಮಾಡಿದ ಎಡವಟ್ಟಿನಿಂದಾಗಿ ಇಂದು ಕೊರೊನಾ ಮಹಾಮಾರಿ ಇಡೀ ವಿಶ್ವದಾದ್ಯಂತ ರೌದ್ರ ನರ್ತನವನ್ನಾಡುತ್ತಿದೆ.

ಆರಂಭದಿಂದಲೂ ಕೊರೊನಾ ಸೋಂಕಿತರ ಸಂಖ್ಯೆಯ ವಿಚಾರದಲ್ಲಿ ಸುಳ್ಳು ಹೇಳಿದ್ದ ಚೀನಾ, ಕೊರೊನಾದಿಂದ ಸಾವನ್ನಪ್ಪಿರುವವರ ಮಾಹಿತಿಯನ್ನೇ ಗೌಪ್ಯವಾಗಿಟ್ಟಿದೆ. ಇದೀಗ ಕೊರೊನಾದ ಮೂಲವನ್ನೇ ಚೀನಾ ಮುಚ್ಚಿಟ್ಟಿರುವುದನ್ನು ಅಮೇರಿಕಾ ಪತ್ತೆ ಹಚ್ಚಿದೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular