COVID-19 Vaccination Fraud:ಕೋವಿಡ್ 19 ಸೋಂಕಿನ ವಿರುದ್ಧ ಹೋರಾಡಲು ಕೊರೊನಾ ಲಸಿಕೆಗಳನ್ನು ಸ್ವೀಕರಿಸುವುದು ಅತ್ಯಂತ ಅವಶ್ಯಕವಾಗಿದೆ. ಸರ್ಕಾರ ಕೂಡ ಜನರನ್ನು ಕೊರೊನಾ ಲಸಿಕೆಯನ್ನು ಸ್ವೀಕರಿಸುವಂತೆ ಉತ್ತೇಜಿಸಲು ಈಗಾಗಲೇ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡು ಯಶಸ್ವಿ ಕೂಡ ಆಗಿದೆ. ದೇಶದ ಬಹುಪಾಲು ಜನತೆ ಇದೀಗ ಕೊರೊನಾ ಲಸಿಕೆಯನ್ನು ಸ್ವೀಕರಿಸಿದ ಪಟ್ಟಿಗೆ ಸೇರ್ತಿದ್ದಾರೆ. ಈ ನಡುವೆಯೇ ಒಮಿಕ್ರಾನ್ ಆತಂಕ ಕೂಡ ಎದುರಾಗಿರುವ ಹಿನ್ನೆಲೆಯಲ್ಲಿ ಬೂಸ್ಟರ್ ಡೋಸ್ ಬೇಕೆಂದು ಎಲ್ಲೆಡೆ ಕೂಗು ಕೇಳಿ ಬರ್ತಿದೆ. ಇದಕ್ಕಾಗಿ ಈಗಾಗಲೇ ಸಾಕಷ್ಟು ಅಧ್ಯಯನಗಳು ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಪ್ರಗತಿಯಲ್ಲಿವೆ.
ವಿಶ್ವದಲ್ಲಿ ಮೂರನೇ ಡೋಸ್ ಕೊರೊನಾ ಲಸಿಕೆಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ ಬೆಲ್ಜಿಯಂನಲ್ಲಿ ಅತ್ಯಂತ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬೆಲ್ಜಿಯಂನ ಚಾರ್ಲೆರಾಯ್ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ 9ನೇ ಡೋಸ್ ಲಸಿಕೆ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಸಿಕ್ಕಿಬ್ಬಿದ್ದಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ .
ಸುಳ್ಳು ದಾಖಲೆಗಳನ್ನು ನೀಡಿ ತನ್ನ ಒಂಬತ್ತನೇ ಕೋವಿಡ್ 19 ಲಸಿಕೆ ಸ್ವೀಕರಿಸಲು ಯತ್ನಿಸುತ್ತಿದ್ದ ವೇಳೆಯಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ, ಕೊರೊನಾ ಲಸಿಕೆಯನ್ನು ಸ್ವೀಕರಿಸಲು ಇಚ್ಚಿಸದವರ ಪರವಾಗಿ ಈತ ಕೋವಿಡ್ ಲಸಿಕೆಯನ್ನು ಪಡೆಯುತ್ತಿದ್ದ ಎನ್ನಲಾಗಿದೆ. ಇದಕ್ಕಾಗಿ ಆತ ಅವರಿಂದ ಹಣವನ್ನೂ ಪಡೆಯುತ್ತಿದ್ದ ಎನ್ನಲಾಗಿದೆ.
ಈತ ಪದೇ ಪದೇ ಲಸಿಕೆಯನ್ನು ಸ್ವೀಕರಿಸಲು ಲಸಿಕಾ ಕೇಂದ್ರಕ್ಕೆ ಬರುತ್ತಿರೋದನ್ನು ಆರೋಗ್ಯ ಸಿಬ್ಬಂದಿ ಮೊದಲು ಗಮನಿಸಿದ್ದಾರೆ. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲ ಹೆಚ್ಚುವರಿ ಡೋಸ್ ಲಸಿಕೆ ಪಡೆದ ಬಳಿಕವೂ ಈತನ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓಮಿಕ್ರಾನ್ ಹರಡುತ್ತಿರೋದನ್ನು ಗಮನದಲ್ಲಿಟ್ಟುಕೊಂಡು ಬೆಲ್ಜಿಯಂ ಕೋವಿಡ್ 19 ಸಂಬಂಧ ಹೊಸ ಮಾರ್ಗಸೂಚಿಯನ್ನು ಜಾರಿ ಮಾಡಿದೆ. ಒಳಾಂಗಣ ಮಾರ್ಕೆಟ್, ಚಿತ್ರಮಂದಿರ ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಪ್ರದೇಶವನ್ನು ಬಂದ್ ಮಾಡಲಾಗಿದೆ. ಪ್ರೇಕ್ಷಕರಿಲ್ಲದೇ ಕ್ರೀಡಾ ಚಟುವಟಿಕೆಗಳನ್ನು ನಡೆಸುವಂತೆ ಹೇಳಲಾಗಿದೆ. ಹೊಸ ಮಾರ್ಗಸೂಚಿಯು ಡಿಸೆಂಬರ್ 2ರಿಂದ ಜಾರಿಯಲ್ಲಿದೆ.
COVID-19 Vaccination Fraud: Belgium Man Arrested After He Was Caught Trying To Get Vaccinated for Ninth Time
ಇದನ್ನು ಓದಿ: Hurricane of the Philippines: ಫಿಲಿಪೈನ್ಸ್ನಲ್ಲಿ ಚಂಡಮಾರುತದ ಆರ್ಭಟ; ಸಾವಿನ ಸಂಖ್ಯೆ 208ಕ್ಕೆ ಏರಿಕೆ
ಇದನ್ನೂ ಓದಿ: Karachi blast : ಕರಾಚಿಯಲ್ಲಿ ಭಾರೀ ಸ್ಫೋಟ : 13 ಸಾವು, 12 ಮಂದಿ ಗಂಭೀರ