ವಾಷಿಂಗ್ಟನ್ : ಹಾಲಿವುಡ್‌ನ ಖ್ಯಾತ ನಟ ಎಡ್ ಅಸ್ನರ್ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಲೆಜೆಂಡರಿ ನಟ 50 ರಲ್ಲಿ ಶೋಬಿಜ್ ಗೆ ಪ್ರವೇಶಿಸಿದ್ದರು. ಅತ್ಯಂತ ಜನಪ್ರಿಯ ದಿ ಮೇರಿ ಟೈಲರ್ ಮೂರ್ ಶೋ ಮೂಲಕ ಎಡ್ ಅಸ್ನರ್ ಜನಪ್ರಿಯತೆ ಗಳಿಸಿದ್ದರು. ಪ್ರತಿಷ್ಠಿತ ಅಂತರಾಷ್ಟ್ರೀಯ ಎಮ್ಮಿ ಅವಾರ್ಡ್ ಗೆ 7 ಬಾರಿ ಭಾಜನರಾಗಿದ್ದ ಖ್ಯಾತ ನಟ ಎಡ್ ಅಸ್ನರ್ ಅವರು 91 ವರ್ಷ ವಯಸ್ಸಾಗಿದ್ದು, ಆ.30 ರಂದು ನಿಧನರಾಗಿದ್ದಾರೆ.
ಹಾಲಿವುಡ್ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಂಡರು. ಈ ಸರಣಿಯ 166 ಸಂಚಿಕೆಗಳಲ್ಲಿ ಆನ್ಸರ್ ನಟಿಸಿದ್ದು 7 ವರ್ಷಗಳ ಸುದೀರ್ಘ ಪಯಣ ಇದಾಗಿತ್ತು. ಈ ಹಾಸ್ಯ ಸರಣಿಯ ನಟನೆ ಜನಪ್ರಿಯತೆ ಉತ್ತುಂಗದಲ್ಲಿರುವಾಗಲೇ ಎಡ್ ಅಸ್ನರ್ “ಲೌ ಗ್ರಾಂಟ್” ಎಂಬ ಮತ್ತೊಂದು ಶೋ ಪ್ರಾರಂಭಿಸಿದರು. ಇದರಲ್ಲಿ ನೂರಕ್ಕೂ ಹೆಚ್ಚನ ಸಂಚಿಕೆಗಳಲ್ಲಿ ನಟಿಸಿ ಮತ್ತಷ್ಟು ಜನಪ್ರಿಯತೆ ಹೊಂದಿದರು.
ಇದನ್ನೂ ಓದಿ: Flight Ban : ಸೆಪ್ಟೆಂಬರ್ 30 ರವರೆಗೆ ಅಂತಾರಾಷ್ಟ್ರೀಯ ವಿಮಾನ ಹಾರಾಟ ನಿಷೇಧ
ಎಡ್ ಅಸ್ನರ್ ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಕುಟುಂಬ ಸದಸ್ಯರು ಈ ಸುದ್ದಿಯನ್ನು ದೃಢಪಡಿಸಿದ್ದು “ನಮ್ಮ ತಂದೆ ಇಂದು ಬೆಳಿಗ್ಗೆ ನಿಧನರಾದರು ಎಂಬುದನ್ನು ತಿಳಿಸಲು ವಿಷಾದಿಸುತ್ತೇವೆ, ನೋವನ್ನು ವ್ಯಕ್ತಪಡಿಸಲು ಪದಗಳಿಲ್ಲ. ನಿಮ್ಮನ್ನು ಪ್ರೀತಿಸುತ್ತೇವೆ ಅಪ್ಪ” ಎಂದು ಬರೆದಿದ್ದಾರೆ.
ಇದನ್ನೂ ಓದಿ: Covid C.1.2 : ಕೋವಿಡ್ ಭೀತಿಯ ನಡುವಲ್ಲೇ ರೂಪಾಂತರ C.1.2 ಪತ್ತೆ !