ಮಂಗಳವಾರ, ಏಪ್ರಿಲ್ 29, 2025
HomeWorldShinzo Abe :ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಿತಿ ಗಂಭೀರ : ಜಪಾನ್​ ಪ್ರಧಾನಿ...

Shinzo Abe :ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ಸ್ಥಿತಿ ಗಂಭೀರ : ಜಪಾನ್​ ಪ್ರಧಾನಿ ಕಿಶಿಡಾ ಮಾಹಿತಿ

- Advertisement -

ಟೋಕಿಯೋ : Shinzo Abe : ನಾರಾ ನಗರದಲ್ಲಿ ಸಾರ್ವಜನಿಕ ಭಾಷಣದ ಸಂದರ್ಭದಲ್ಲಿ ಗುಂಡಿನ ದಾಳಿಗೆ ತುತ್ತಾದ ಜಪಾನ್​ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ . ಅವರನ್ನು ಜೀವಾಪಾಯದಿಂದ ಕಾಪಾಡಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಜಪಾನ್​ನ ಪ್ರಧಾನಿ ಫ್ಯೂಮಿಯೋ ಕಿಶಿಡಾ ಹೇಳಿದ್ದಾರೆ. ಅಲ್ಲದೇ ಈ ಕೃತ್ಯವನ್ನು ಎಸಗಿದವರ ವಿರುದ್ಧ ಕೂಡಲೇ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದೂ ಕಿಶಿಡಾ ಇದೇ ವೇಳೆ ಹೇಳಿದ್ದಾರೆ. ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿಕೋರರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು.


ಸ್ಥಳೀಯ ಅಗ್ನಿಶಾಮಕ ಇಲಾಖೆಯ ಅಧಿಕಾರಿ ಮಕೊಟೊ ಮೊರಿಮೊಟೊ ಈ ವಿಚಾರವಾಗಿ ಮಾತನಾಡಿದ್ದು ಗುಂಡಿನ ದಾಳಿಗೆ ಒಳಗಾದ ಬಳಿಕ ಅವರು ಉಸಿರಾಡುತ್ತಿರಲಿಲ್ಲ. ಅಲ್ಲದೇ ಅವರನ್ನು ಪ್ರಿಫೆಕ್ಚರಲ್​ ಆಸ್ಪತ್ರೆಗೆ ಏರ್​ಲಿಫ್ಟ್​ ಮಾಡಬೇಕಾದ ಸಂದರ್ಭದಲ್ಲಿ ಅವರ ಹೃದಯ ಬಡಿತ ಕೂಡ ನಿಂತಿತ್ತು ಎಂದು ಮಾಹಿತಿ ನೀಡಿದ್ದಾರೆ. ಎರಡನೇ ಗುಂಡು ಹಾರಿದ ನಂತರ ಶಿಂಜೊ ಅಬೆ ಕುಸಿದುಬಿದ್ದರು ಎಂದು ವರದಿಗಳು ಹೇಳಿವೆ. ಶಿಂಜೋ ಅಬೆ ಮೇಲೆ ದಾಳಿಕೋರರು ಹಿಂಬದಿಯಿಂದ ಗುಂಡು ಹಾರಿಸಿದ್ದಾರೆ.


ಶಿಂಜೊ ಅಬೆ 2006ರಿಂದ 2007ರವರೆಗೆ ಹಾಗೂ 2012ರಿಂದ 2020ರವರೆಗೆ ಜಪಾನ್​ನ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಜಪಾನ್​ನ ಇತಿಹಾಸದಲ್ಲಿ ದೀರ್ಘಾವಧಿಯ ಪ್ರಧಾನಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 2012 ರಿಂದ 2020ರವರೆಗೆ ಶಿಂಜೊ ಅಬೆ ಲಿಬರಲ್​ ಡೆಮಾಕ್ರಟಿಕ್​ ಪಕ್ಷದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.


ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್​​ ಅಬೆ ಹತ್ಯೆ ಪ್ರಯತ್ನದ ಬಗ್ಗೆ ಅಮೆರಿಕ ತೀವ್ರವಾದ ದುಃಖ ಹಾಗೂ ಕಾಳಜಿಯನ್ನು ಹೊಂದಿದೆ ಎಂದು ಹೇಳಿದ್ದಾರೆ. ನಮಗೆ ಶಿಂಜೋ ಅಬೆ ಸ್ಥಿತಿ ಬಗ್ಗೆ ಸೂಕ್ತವಾದ ಮಾಹಿತಿ ತಿಳಿದಿಲ್ಲ. ಅವರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬುದಷ್ಟೇ ನಮಗೆ ತಿಳಿದಿದೆ. ನಮ್ಮ ಪ್ರಾರ್ಥನೆ ಶಿಂಜೋ ಅಬೆ ಹಾಗೂ ಅವರ ಕುಟುಂಬಸ್ಥರ ಜೊತೆ ಇರಲಿದೆ. ಇದು ಖಂಡಿತವಾಗಿಯೂ ದುಃಖದ ಕ್ಷಣವಾಗಿದೆ ಎಂದು ಹೇಳಿದ್ದಾರೆ.


ಬ್ರಿಟನ್​ ಮಾಜಿ ಪ್ರಧಾನಿ ಬೋರಿಸ್​ ಜಾನ್ಸನ್​ ಕೂಡ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಜಪಾನ್​ನ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ಗುಂಡಿನ ದಾಳಿ ನಿಜಕ್ಕೂ ದುರಾದೃಷ್ಟಕರ. ನನ್ನ ಪ್ರಾರ್ಥನೆಯು ಶಿಂಜೋ ಅಬೆ ಹಾಗೂ ಅವರ ಪ್ರೀತಿಪಾತ್ರರ ಜೊತೆ ಇರಲಿದೆ ಎಂದು ಹೇಳಿದ್ದಾರೆ.


ಪ್ರಧಾನಿ ಮೋದಿ ಕೂಡ ಈ ವಿಚಾರವಾಗಿ ಟ್ವೀಟ್​ ಮಾಡಿದ್ದು, ನನ್ನ ಆತ್ಮೀಯ ಗೆಳೆಯ ಶಿಜೋ ಅಬೆ ಮೇಲಿನ ದಾಳಿಯ ಸುದ್ದಿಯನ್ನು ಕೇಳಿ ನೋವುಂಟಾಗಿದೆ. ನಮ್ಮ ಪ್ರಾರ್ಥನೆ ಅವರ ಹಾಗೂ ಅಬೆ ಕುಟುಂಬದ ಜೊತೆ ಇದೆ ಎಂದಿದ್ದಾರೆ.

ಇದನ್ನು ಓದಿ : Heavy Rain Red Alert : ಕರಾವಳಿಯಲ್ಲಿ ಮೇಘಸ್ಪೋಟ : ರೆಡ್‌ ಅಲರ್ಟ್‌ ಘೋಷಣೆ, ಶಾಲೆಗಳಿಗೆ ರಜೆ, 5 ದಿನ ಸುರಿಯಲಿದೆ ಭಾರಿ ಮಳೆ

ಇದನ್ನೂ ಓದಿ : Ola driver kills passenger : ಒಟಿಪಿ ವಿಚಾರಕ್ಕೆ ಜಗಳ : ಕೋಪಗೊಂಡ ಓಲಾ ಚಾಲಕನಿಂದ ಪ್ರಯಾಣಿಕನ ಕೊಲೆ

Former Japan Prime Minister Shinzo Abe is in serious condition

RELATED ARTICLES

Most Popular