Johnson & Johnson : ಮಕ್ಕಳ ತ್ವಚೆಯ ರಕ್ಷಣೆಯ ಉತ್ಪನ್ನಗಳನ್ನು ತಯಾರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ಜಾನ್ಸನ್ & ಜಾನ್ಸನ್ ಕಂಪನಿಯು 2023ರಿಂದ ಟಾಲ್ಕ್ ಆಧಾರಿತ ಬೇಬಿ ಪೌಡರ್ ಮಾರಾಟವನ್ನು ನಿಲ್ಲಿಸಲಿದೆ ಎಂದು ಮಾಹಿತಿ ನೀಡಿದೆ. ಸಾವಿರಾರು ಗ್ರಾಹಕರು ಟಾಲ್ಕ್ ಪೌಡರ್ನ ಸುರಕ್ಷತೆ ಕುರಿತಂತೆ ಮೊಕದ್ದಮೆಗಳನ್ನು ಹೂಡಿದ 2 ವರ್ಷಗಳ ಬಳಿಕ ಈ ನಿರ್ಧಾರವನ್ನು ಹೊರಡಿಸಿದೆ.
ಎರಡು ವರ್ಷಗಳ ಹಿಂದೆಯೇ ಅಮೆರಿಕದಲ್ಲಿ ಜಾನ್ಸನ್ & ಜಾನ್ಸನ್ ಕಂಪನಿಯ ಟಾಲ್ಕ್ ಪೌಡರ್ ಮಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. ಮುಂದಿನ ವರ್ಷದಿಂದ ವಿಶ್ವದಾದ್ಯಂತ ಈ ಪೌಡರ್ನ ಮಾರಾಟ ನಿಲ್ಲಿದೆ. ಸುಮಾರು 38 ಸಾವಿರಕ್ಕೂ ಅಧಿಕ ಮಂದಿ ಜಾನ್ಸನ್ & ಜಾನ್ಸನ್ ಬೇಬಿ ಟಾಲ್ಕ್ ಪೌಡರ್ ಬಗ್ಗೆ ದೂರು ನೀಡಿದ ಬೆನ್ನಲ್ಲೇ ಕಂಪನಿಯು ಈ ಘೋಷಣೆಯನ್ನು ಮಾಡಿದೆ.
2020ರಲ್ಲಿ ಜಾನ್ಸನ್ & ಜಾನ್ಸನ್ ಅಮೆರಿಕ ಹಾಗೂ ಕೆನಡಾದಲ್ಲಿ ತನ್ನ ಬೇಬಿ ಟಾಲ್ಕ್ ಪೌಡರ್ ಮಾರಾಟವನ್ನು ನಿಲ್ಲಿಸುವುದಾಗಿ ಘೋಷಣೆಯಾಗಿತ್ತು.ಈ ದೇಶಗಳಲ್ಲಿ ಜಾನ್ಸನ್ & ಜಾನ್ಸನ್ ಬೇಬಿ ಟಾಲ್ಕ್ ಪೌಡರ್ನ ಸುರಕ್ಷತೆಯ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಉತ್ಪನ್ನದ ಬೇಡಿಕೆ ಗಣನೀಯವಾಗಿ ಕಡಿಮೆಯಾಗಿದ್ದರಿಂದ ಈ ನಿರ್ಧಾರವನ್ನು ಕೈಗೊಂಡಿತ್ತು.
38 ಸಾವಿರಕ್ಕೂ ಅಧಿಕ ಗ್ರಾಹಕರು ಜಾನ್ಸನ್ & ಜಾನ್ಸನ್ನ ಈ ಉತ್ಪನ್ನದ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಈ ಪೌಡರ್ನಲ್ಲಿರುವ ಹಾನಿಕಾರಕ ಫೈಬರ್ ಆಸ್ಬೆಸ್ಟೋಸ್ ಕ್ಯಾನ್ಸರ್ಗೆ ಕಾರಣವಾಗುತ್ತದೆ. ಹೀಗಾಗಿ ಉತ್ಪನ್ನದ ಸುರಕ್ಷತೆಯನ್ನು ಪ್ರಶ್ನಿಸಿ ಗ್ರಾಹಕರು ಕಾನೂನು ಹೋರಾಟಕ್ಕೆ ಮುಂದಾದ ಬಳಿಕ ಕಂಪನಿಯು ಸಾವಿರಾರು ಕೋಟಿ ರೂಪಾಯಿ ದಂಡ ಪಾವತಿ ಮಾಡಿದೆ. ಇದೀಗ ತಾನು ಈ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ.
ಆದರೆ ಗ್ರಾಹಕರು ಮಾಡಿರುವ ಈ ಯಾವುದೇ ಆರೋಪಗಳನ್ನು ಜಾನ್ಸನ್ & ಜಾನ್ಸನ್ ಕಂಪನಿಯು ಒಪ್ಪಿಕೊಂಡಿಲ್ಲ. ದಶಕಗಳ ವೈಜ್ಞಾನಿಕ ಪರೀಕ್ಷೆ ಹಾಗೂ ಸುರಕ್ಷತೆಯ ಮಾನದಂಡಗಳನ್ನು ಪಾಲನೆ ಮಾಡಿದ್ದು ಕ್ಯಾನ್ಸರ್ಗೆ ಕಾರಣವಾಗುವ ಯಾವುದೇ ರಾಸಾಯನಿಕಗಳು ಈ ಉತ್ಪನ್ನದಲ್ಲಿಲ್ಲ ಎಂದು ಜಾನ್ಸನ್ & ಜಾನ್ಸನ್ ಕಂಪನಿಯು ಮತ್ತೊಮ್ಮೆ ಪುನರುಚ್ಛರಿಸಿದೆ.
ಇದನ್ನು ಓದಿ : Shirasi Marikamba Temple : ಶಿರಸಿಯ ಸುಪ್ರಸಿದ್ಧ ಶ್ರೀ ಮಾರಿಕಾಂಬಾ ದೇಗುಲದ ಪ್ರಸಾದಕ್ಕೆ ಬಿಹೆಚ್ಒಜಿ ಪ್ರಮಾಣ ಪತ್ರ
ಇದನ್ನೂ ಓದಿ : Praveen Nettaru’s murder case : ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಅಸಲಿ ಕಾರಣ ಬಿಚ್ಚಿಟ್ಟ ಹಂತಕರು
Johnson & Johnson to stop selling talc-based baby powder globally in 2023