ಕಾಬೂಲ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ಕೈವಶ ಮಾಡಿಕೊಂಡ ಬೆನ್ನಲ್ಲೇ ಇದೀಗ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಐಎಸ್‌ಪಿಕೆ ( ISPK) ಉಗ್ರ ಸಂಘಟನೆ ಈ ದಾಳಿ ನಡೆಸಿದೆ ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದೀಗ ಮೂರನೇ ಬಾರಿ ಕಾಬೂಲ್ ಏರ್ಪೋಟ್ ಬಳಿಯಲ್ಲಿ ಬಾಂಬ್ ಬ್ಲಾಸ್ಟ್ ನಡೆದಿದ್ದು, 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ.
ಅಮೇರಿಕಾ ಸೇನೆ ತಂಗುತ್ತಿದ್ದ ಬ್ಯಾರನ್ ಹೋಟೆಲ್ ಹಾಗೂ ವಿಮಾನ ನಿಲ್ದಾಣದ ಅಪ್ಪೆ ಗೇಟ್ ಬಳಿಯಲ್ಲಿ ಈ ದಾಳಿಯನ್ನು ನಡೆಸಲಾಗಿದೆ. ಸುಮಾರು ನಲವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, 50ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ. ಇನ್ನೊಂದೆಡೆಯಲ್ಲಿ 100 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಕಳೆದ ಒಂದು ವಾರಗಳಿಂದಲೂ ಅಮೇರಿಕಾ ಸೇನೆ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶದಲ್ಲಿಟ್ಟುಕೊಂಡು, ಅಮೇರಿಕಾ ಹಾಗೂ ಅಫ್ಘಾನ್ ಪ್ರಜೆಗಳನ್ನು ಬೇರೆ ರಾಷ್ಟ್ರಗಳಿಗೆ ಸಾಗಿಸುವ ಕಾರ್ಯವನ್ನು ಮಾಡುತ್ತಿದೆ. ಅಮೇರಿಕಾ ಸೇನೆಯನ್ನು ಟಾರ್ಗೇಟ್ ಮಾಡಿಕೊಂಡು ಈ ದಾಳಿ ನಡೆದಿದೆ ಅನ್ನೋ ಕುರಿತು ಅಂತರಾಷ್ಟ್ರೀಯ ಮಾಧ್ಯಮಗಳು ಕೂಡ ವರದಿ ಮಾಡಿವೆ.
ಸಂಜೆ ನಾಲ್ಕು ಗಂಟೆಯಿಂದಲೇ ಸರಣಿ ಸ್ಪೋಟ ಸಂಭವಿಸಿದೆ. ಘಟನೆಯಿಂದಾಗಿ ಅಫ್ಘಾನಿಸ್ತಾನದ ಜನರು ಬೆಚ್ಚಿಬಿದ್ದಿದ್ದಾರೆ. ಅದ್ರಲ್ಲೂ ಅಮೇರಿಕಾ ಪ್ರಜೆಗಳು ಹಾಗೂ ಪ್ರಜೆಗಳು ಕೂಡ ಗಾಯಗೊಂಡಿದ್ದಾರೆ. ಇದೀಗ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತುರ್ತು ಸಭೆಯನ್ನು ಕರೆದಿದ್ದಾರೆ.
ಇದನ್ನೂ ಓದಿ : ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾರೀ ಸ್ಪೋಟ : ಆತ್ಮಾಹುತಿ ದಾಳಿ ಶಂಕೆ
ಇದನ್ನೂ ಓದಿ : ಯೋಧರ ಮೇಲೆ ದಾಳಿ : ತುರ್ತು ಸಭೆ ಕರೆದ ಅಮೇರಿಕಾ ಅಧ್ಯಕ್ಷ