ವಾಷಿಂಗ್ಟನ್ : ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ದಾಳಿಯನ್ನ ಅಮೇರಿಕಾ ಯೋಧರನ್ನು ಗುರಿಯಾಗಿಸಿಟ್ಟುಕೊಂಡು ನಡೆಸಲಾಗಿದ್ದು, ಅಮೇರಿಕಾ ನಿವಾಸಿಗಳು ಸಾವನ್ನಪ್ಪಿದ್ದು, ಯೋಧರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಇನ್ನೊಂದೆಡೆಯಲ್ಲಿ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತುರ್ತು ಸಭೆ ಕರೆದಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗೇಟ್ ಹಾಗೂ ಹೋಟೆಲ್ ಬಳಿಯಲ್ಲಿ ಬಾಂಬ್ ದಾಳಿ ನಡೆದಿದೆ. ಘಟನೆಯಲ್ಲಿ ಅಮೇರಿಕಾ ನಿವಾಸಿ ಗಳು ಸಾವನನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಾವಿನ ಸಂಖ್ಯೆ ಇನ್ನೂ ಖಚಿತವಾಗಿಲ್ಲ. ಇನ್ನೊಂದೆಡೆಯಲ್ಲಿ ಈ ದಾಳಿಯನ್ನು ಅಮೇರಿಕಾ ಯೋಧರನ್ನು ಗುರಿಯಾಗಿ ಟ್ಟುಕೊಂಡು ನಡೆಸಲಾಗಿದೆ ಎನ್ನಲಾಗುತ್ತಿದ್ದು, ಸುಮಾರು ೨೫ ಅಧಿಕ ಅಮೇರಿಕಾ ಯೋಧರು ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಅಮೇರಿಕಾ ರಕ್ಷಣಾ ಸಂಸ್ಥೆ ಪೆಂಟಗಾನ್ ಖಚಿತ ಪಡಿಸಿದೆ
ಇನ್ನೊಂದೆಡೆಯಲ್ಲಿ ಕಾಬೂಲ್ ನಡೆಯುತ್ತಿದ್ದಂತೆಯೇ ಅಮೇರಿಕಾ ಎಚ್ಚೆತ್ತುಕೊಂಡಿದೆ. ಅಗಸ್ಟ್ ಅಂತ್ಯದ ಒಳಗಾಗಿ ಅಮೇರಿಕಾ ಸೇನೆ ಅಪ್ಘಾನಿಸ್ತಾನವನ್ನು ತೊರೆಯುವಂತೆ ಎಚ್ಚರಿಕೆ ಯನ್ನು ನೀಡಿತ್ತು. ಇದೀಗ ಅಮೇರಿಕಾ ಸೇನೆಯನ್ನೇ ಗುರಿಯಾಗಿಟ್ಟುಕೊಂಡು ದಾಳಿ ನಡೆದ ಬೆನ್ನಲ್ಲೇ ಅಮೇರಿಕಾ ಅಧ್ಯಕ್ಷ ಜೋ ಬೈಡನ್ ತುರ್ತು ಸಭೆಯನ್ನು ಕರೆದಿದ್ದಾರೆ. ಇನ್ನೊಂದಡೆ ಅಮೇರಿಕಾ ಸೈನಿಕರು ಅಪ್ಘಾನಿಸ್ತಾನಕ್ಕೆ ಬರುವ ಸಾಧ್ಯತೆಯೂ ಇದೆ.
ಕಾಬೂಲ್ ದಾಳಿಯನ್ನು ತಾಲಿಬಾನ್ ಉಗ್ರರು ಮಾಡಿದ್ದಾರೆಯೇ ಇಲ್ಲಾ, ಐಸಿಸ್ ಮಾಡಿದೆಯಾ ಅನ್ನೋ ಬಗ್ಗೆ ಯಾವುದೇ ಖಚಿತತೆ ಇಲ್ಲ. ಆದರೆ ಅಮೇರಿಕಾ ಯೋಧರನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿರೋದು ಖಚತವಾದಂತಿದೆ. ತಾಲಿಬಾನ್ ಉಗ್ರರಿಗೆ ಶರಣಾಗಿರುವ ಅಮೇರಿಕಾ ಸೇನೆ ಇದೀಗ ಮತ್ತೆ ತಾಲಿಬಾನ್ ವಿರುದ್ದ ಸಮರ ಸಾರುತ್ತಾ ಅನ್ನೋದನ್ನು ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ಕಾಬೂಲ್ ವಿಮಾನ ನಿಲ್ದಾಣದ ಬಳಿ ಬಾರೀ ಸ್ಪೋಟ : ಆತ್ಮಾಹುತಿ ದಾಳಿ ಶಂಕೆ
ಇದನ್ನೂ ಓದಿ : ಇತಿಹಾಸದಲ್ಲೇ ಅತಿದೊಡ್ಡ ಏರ್ ಲಿಫ್ಟ್ ! 24 ಗಂಟೆಗಳಲ್ಲಿ 19,000 ಜನರ ಏರ್ ಲಿಫ್ಟ್