ತಿರುವನಂತಪುರ : ಕೇರಳದ ಕೋಝಿಕ್ಕೋಡಿನಲ್ಲಿ ನಡೆದಿರುವ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣ 20 ಮಂದಿಯನ್ನು ಬಲಿ ಪಡೆಡಿದೆ. ಘಟನೆಯಲ್ಲಿ ಇನ್ನರು ಫೈಲಟ್ ಗಳು ಸಾವನ್ನಪ್ಪಿದ್ದಾರೆ. ಈ ಪೈಕಿ ಮೃತ ದೀಪಕ್ ವಸಂತ್ ಸಾಠೆ ಬೆಸ್ಟ್ ಫೈಲೆಟ್ ಆಗಿದ್ದರು.

ವಿಮಾನದ ಲ್ಯಾಂಡಿಂಗ್ ವೇಳೆಯಲ್ಲಿ ಪತನಕ್ಕೆ ಒಳಗಾದ ಏರ್ ಇಂಡಿಯ ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಹಾಗೂ ಫಸ್ಟ್ ಆಫೀಸರ್ ಅಖಿಲೇಶ್ ಕುಮಾರ್ ಅವರನ್ನು ಬಲಿ ಪಡೆದಿದೆ. ಕ್ಯಾಪ್ಟನ್ ಸಾಠೆ ಅವರು ಭಾರತೀಯ ವಾಯುಪಡೆಯಲ್ಲಿ ಟೆಸ್ಟ್ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು.

1981 ರಲ್ಲಿ ವಾಯುಪಡೆ ಸೇವೆಗೆ ಸೇರ್ಪಡೆಯಾಗಿದ್ದ ಸಾಠೆ ಸುಮಾರು 22 ವರ್ಷಗಳ ಕಾಲ ವಾಯುಪಡೆಯಲ್ಲಿ ಸೇವೆ ಸಲ್ಲಿಸಿದ್ದರು. ಅದ್ರಲ್ಲೂ ಬೋಯಿಂಗ್ 737 ವಿಮಾನಗಳನ್ನು ಚಾಲನೆ ಮಾಡುವಲ್ಲಿ ಅತ್ಯಂತ ಅನುಭವ ಹೊಂದಿದ್ದ ಫೈಲೆಟ್ ಎಂಬ ಖ್ಯಾತಿಗೆ ಪಾತ್ರರಾಗಿದ್ದರು.

ಕ್ಯಾಪ್ಟನ್ ದೀಪಕ್ ವಸಂತ್ ಸಾಠೆ ಗೆ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಅಲ್ಲದೇ 58 ಎನ್ ಡಿಎ ರಾಷ್ಟ್ರಪತಿ ಚಿನ್ನ ಪದಕವನ್ನು ಪ್ರಧಾನ ಮಾಡಲಾಗಿತ್ತು.