ಭಾನುವಾರ, ಏಪ್ರಿಲ್ 27, 2025
HomeWorldLockdown Again : ಮತ್ತೆ ಜಾರಿ ಆಯ್ತು ಲಾಕ್‌ಡೌನ್ : 5 ದಿನ ಶಾಲೆ, ಕಾಲೇಜು...

Lockdown Again : ಮತ್ತೆ ಜಾರಿ ಆಯ್ತು ಲಾಕ್‌ಡೌನ್ : 5 ದಿನ ಶಾಲೆ, ಕಾಲೇಜು ಬಂದ್‌

Lockdown Announced 5 days Schools, colleges closed : ಐದು ದಿನಗಳ ಕಾಲ ಕಾಲ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

- Advertisement -

Lockdown Again : ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್‌ಡೌನ್‌ ಜಾರಿ ಆಗಿತ್ತು. ಆದರೆ ಎರಡು ವರ್ಷಗಳಿಂದೀಚೆಗೆ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಹೊತ್ತಲ್ಲೇ ಈ ದೇಶದಲ್ಲಿ ಐದು ದಿನಗಳ ಕಾಲ ಕಾಲ ಲಾಕ್‌ಡೌನ್‌ ಜಾರಿ ಮಾಡಲಾಗಿದೆ. ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಲಾಕ್‌ಡೌನ್‌ ಜಾರಿ ಆಗಿರೋ ದೇಶ ಯಾವುದು, ಯಾವ ಕಾರಣಕ್ಕೆ ಲಾಕ್‌ಡೌನ್‌ ಹೇರಿಕೆ ಮಾಡಲಾಗಿದೆ ಅನ್ನೋ ಮಾಹಿತಿ ಇಲ್ಲಿದೆ.

Lockdown Again Announced 5 days Schools, colleges closed
Image Credit to Original Source

ಭಾರತದ ಬದ್ದ ವಿರೋಧಿ ಪಾಕಿಸ್ತಾನದಲ್ಲಿ ಐದು ದಿನಗಳ ಕಾಲ ಲಾಕ್‌ ಡೌನ್‌ ಜಾರಿ ಮಾಡಲಾಗಿದೆ. ಪಾಕಿಸ್ತಾನದ ಎರಡು ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಮತ್ತು ಪ್ರಮುಖ ನಗರ ರಾವಲ್ಪಿಂಡಿಯಲ್ಲಿ ಅಕ್ಟೋಬರ್ 12 ರಿಂದ ಅಕ್ಟೋಬರ್ 16 ರವರೆಗೆ‌ ಲಾಕ್‌ಡೌನ್ ಜಾರಿಯಲ್ಲಿ ಇರಲಿದೆ. ಗುರುವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಎಸ್‌ಸಿಒ (ಶಾಂಘೈ ಸಹಕಾರ ಸಂಸ್ಥೆ) ಸಮ್ಮೇಳನಕ್ಕಾಗಿ ಈ ಎರಡು ನಗರಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ.

ಈ ಅವಧಿಯಲ್ಲಿ ಎಲ್ಲಾ ಶಾಲೆಗಳು, ಕಾಲೇಜುಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಚಟುವಟಿಕೆಗಳನ್ನು ಮುಚ್ಚಲು ಆದೇಶಿಸಲಾಗಿದೆ. ಈ ಸಮಾವೇಶದಲ್ಲಿ ಭಾರತ ಸೇರಿದಂತೆ ಹತ್ತು ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಪಾಕಿಸ್ತಾನ ಸರ್ಕಾರವು ಐದು ದಿನಗಳ ಕಾಲ ಎರಡು ನಗರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿಯನ್ನು ಮಿಲಿಟರಿಗೆ ವಹಿಸಿದೆ. ಸ್ಥಳೀಯ ಪೊಲೀಸರನ್ನು ನೆಚ್ಚಿಕೊಳ್ಳದೆ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : ರೇಣುಕಾಸ್ವಾಮಿ ಕೊಲೆ ಪ್ರಕರಣ: ಆರೋಪಿಗಳಾದ ದರ್ಶನ್, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾ

ಭಾರತ, ರಷ್ಯಾ, ಪಾಕಿಸ್ತಾನ, ಚೀನಾ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ಉಜ್ಬೇಕಿಸ್ತಾನ್, ಇರಾನ್ ಮತ್ತು ಬೆಲಾರಸ್ ದೇಶಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪಾಲ್ಗೊಳ್ಳಲಿದ್ದಾರೆ. ಪಾಕಿಸ್ತಾನದ ಕೆಲವು ನಗರಗಳಲ್ಲಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟಗಳ ಕಾರಣ, ಸಮ್ಮೇಳನದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಸ್ತುವಾರಿಯನ್ನು ಮಿಲಿಟರಿಗೆ ವಹಿಸಲಾಗಿದೆ,

ಮಿಲಿಟರಿಯ ಸೂಚನೆಯನ್ನು ಎರಡು ನಗರಗಳ ಪೊಲೀಸರು ಕೇಳಲೇ ಬೇಕು. ಇದು ಯುರೋಪ್ ಮತ್ತು ಏಷ್ಯಾದಲ್ಲಿ ನಡೆದ ಅತಿದೊಡ್ಡ ಸಮ್ಮೇಳನವಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ಭಾಗವಹಿಸುವಂತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನೂ ಭಾರತದ ಪ್ರಧಾನಿ ಖುದ್ದಾಗಿ ಆಹ್ವಾನಿಸಿದ್ದರು.

Lockdown Again Announced 5 days Schools, colleges closed
Image Credit to Original Source

ಇಮ್ರಾನ್ ಖಾನ್ ಅವರ ಪಕ್ಷದ ನಾಯಕರ ಪ್ರತಿಭಟನೆಗಳು ದೇಶದ ಹೆಚ್ಚಿನ ಭಾಗಗಳಲ್ಲಿ ಮುಂದುವರಿದಾಗ, ಪಾಕಿಸ್ತಾನದ ಸರ್ಕಾರವು ಯಾವುದೇ ಅವಕಾಶವನ್ನು ತೆಗೆದುಕೊಳ್ಳದೆ, ಕಾನೂನನ್ನು ಮಿಲಿಟರಿಗೆ ಹಸ್ತಾಂತರಿಸಿದೆ. ಈಗಾಗಲೇ ಹತ್ತು ಸಾವಿರ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಎರಡೂ ನಗರಗಳಲ್ಲಿ ಶಾಲಾ ಕಾಲೇಜುಗಳು, ಮದುವೆ ಮಂಟಪಗಳು, ಸ್ನೂಕರ್ ಕ್ಲಬ್‌ಗಳು, ರೆಸ್ಟೋರೆಂಟ್‌ಗಳು ಸೇರಿದಂತೆ ವಾಣಿಜ್ಯ ಚಟುವಟಿಕೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ : ದಸರಾ ಮುಗಿಸಿ ಕಾಡಿಗೆ ವಾಪಸಾದ ಗಜಪಡೆ; ಮೈಸೂರು ಅರಮನೆ ಆವರಣದಲ್ಲಿ ಬೀಳ್ಕೊಡುಗೆ

ಸೇನಾ ಆದೇಶವನ್ನು ಉಲ್ಲಂಘಿಸಿ ಚಟುವಟಿಕೆಗಳನ್ನು ನಡೆಸಿದರೆ ಪರವಾನಗಿ ರದ್ದು ಪಡಿಸಲಾಗುವುದು ಎಂದು ಸರಕಾರ ಎಚ್ಚರಿಸಿದೆ. ಈ ಆದೇಶದ ಹೊರತಾಗಿಯೂ ಪ್ರತಿಭಟನೆ ನಡೆಸುವುದಾಗಿ ಇಮ್ರಾನ್ ಖಾನ್ ಅವರ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಹೇಳಿದೆ. ಹೀಗಾಗಿ ಸೇನೆ ಮತ್ತು ಅವರ ಪಕ್ಷದ ನಾಯಕರ ನಡುವೆ ಘರ್ಷಣೆಯಾಗುವ ಸಾಧ್ಯತೆ ಇದೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇಮ್ರಾನ್ ಅವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುವಂತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರಿಗೆ ಮನವಿ ಮಾಡಿದರು. ಬಳಿಕ ಇಮ್ರಾನ್ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದರು.

Lockdown Again Announced 5 days Schools, colleges closed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular