ದಕ್ಷಿಣ ಆಫ್ರಿಕಾ : ವಂಚನೆ ಮತ್ತು ಖೋಟಾ ಪ್ರಕರಣದ ಆರೋಪದ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗಳಾದ ಆಶಿಶ್ ಲತಾ ರಾಮ್‌ಗೋಬಿನ್ ಅವರಿಗೆ ದಕ್ಷಿಣ ಆಫ್ರಿಕಾದ ಡರ್ಬನ್ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಗಾಂಧೀಜಿ ಅವರ ಮರಿಮೊಮ್ಮಗಳಾದ ಆಶಿಶ್ ಲತಾ ರಾಮ್‌ಗೋಬಿನ್ ನಕಲಿ ದಾಖಲೆಗಳನ್ನು ನೀಡಿಸಿ ದಕ್ಷಿಣ ಆಫ್ರಿಕಾ ಮೂಲದ ಉದ್ಯಮಿ ಮಹಾರಾಜ್ ಅವರಿಂದ 3,33,59,586 ರೂ. ಹಣ ಪಡೆದು ವಂಚಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ನ್ಯೂ ಆಫ್ರಿಕಾ ಅಲೈಯನ್ಸ್ ಫೂಟ್ವೇರ್ ಡಿಸ್ಟ್ರಿಬ್ಯುಟರ್ಸ್ ಎಂಬ ಕಂಪನಿಯ ನಿರ್ದೇಶಕ ಮಹಾರಾಜ್ ಅವರಿಗೆ ಭಾರತದಿಂದ ಮೂರು ಕಂಟೈನರ್ ಲೆನಿನ್ ಬಟ್ಟೆಗಳನ್ನು ತರಿಸಿಕೊಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಹಣ ಪಡೆದು ವಂಚನೆ ನಡೆಸಿದ್ದಾರೆ ಎಂದು ಮಹಾರಾಜ್ ದೂರು ದಾಖಲು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ರಾಮ್ಗೋಬಿನ್ರನ್ನು ದೋಷಿಯೆದು ಪರಿಗಣಿಸಿರುವ ಡರ್ಬನ್ ವಿಶೇಷ ವಾಣಿಜ್ಯ ಅಪರಾಧ ನ್ಯಾಯಾಲಯ ಪರಿಗಣಿಸಿ ತೀರ್ಪು ನೀಡಿದೆ.
ಖ್ಯಾತ ಸಾಮಾಜಿಕ ಹಕ್ಕುಗಳ ಕಾರ್ಯಕರ್ತರಾದ ಎಲಾ ಗಾಂಧಿ ಮತ್ತು ದಿವಂಗತ ಮೇವಾ ರಾಮ್‌ಗೋಬಿಂದ್ ಅವರ ಪುತ್ರಿ ಲತಾ ರಾಮ್‌ಗೋಬಿನ್ ಅವರಿಗೆ ಶಿಕ್ಷೆ ವಿಧಿಸಿರುವ ನ್ಯಾಯಾಲಯ ಮೇಲ್ಮನವಿ ಸಲ್ಲಿಸಲು ಅವಕಾಶ ನಿರಾಕರಿಸಿತು.