ಮಾಸ್ಕೊ:Mikhail Gorbachevಜಗತ್ತಿನ ಅತ್ಯಂತ ದೊಡ್ಡ ಒಕ್ಕೂಟವಾಗಿದ್ದ ಸೋವಿಯತ್ ಒಕ್ಕೂಟದ ಕೊನೇ ನಾಯಕ ಮಿಖಾಯಿಲ್ ಗೋರ್ಬಚೇವ್ (91) ಮಂಗಳವಾರ ರಾತ್ರಿ ನಿಧನಹೊಂದಿದ್ದಾರೆ. ಆಮೂಲಕ ಸೋವಿಯತ್ ಒಕ್ಕೂಟದ ಕೊನೇಯ ಕೊಂಡಿ ಕಳಚಿದೆ.
2ನೇ ಮಹಾಯುದ್ಧದ ನಂತರ ರಷ್ಯಾ ನೇತೃತ್ವದ ಸೋವಿಯತ್ ಒಕ್ಕೂಟ (USSR) ಹಾಗೂ ಅಮೆರಿಕ (USA) ನಡುವೆ ನಡೀತಿದ್ದ ಸುದೀರ್ಘ ಶೀತಲಯುದ್ಧವನ್ನ ಯಾವುದೇ ರಕ್ತಪಾತವಿಲ್ಲದೇ ಅಂತ್ಯಗೊಳಿಸುವಲ್ಲಿ ಸೋವಿಯತ್ ನಾಯಕ ಯಶಸ್ವಿಯಾಗಿದ್ರು. ಆದ್ರೆ, ಸೋವಿಯತ್ ಒಕ್ಕೂಟ ಪತನವಾಗೋದನ್ನ ತಡೆಯುವಲ್ಲಿ ಮಿಖಾಯಿಲ್ ಗೋರ್ಬಚೇವ್ ವಿಫಲರಾಗಿದ್ರು.
ಮಿಖಾಯಿಲ್ ಗೋರ್ಬಚೇವ್ ಮಾರ್ಚ್ 2, 1931ರಂದು ಸ್ಟಾವ್ರೊಪೋಲ್ ಕ್ರೈನ ಪ್ರಿವೊಲ್ನೊಯ್ನಲ್ಲಿ ಜನಿಸಿದರು. ರಷ್ಯಾದ ಮತ್ತು ಉಕ್ರೇನಿಯನ್ ಪರಂಪರೆಯ ಬಡ ರೈತ ಕುಟುಂಬದ ಹಿನ್ನೆಲೆ ಗೋರ್ಬಚೇವ್ ಅವರಿಗಿತ್ತು. ಯುವಕನಾಗಿದ್ದ ಮಿಖಾಯಿಲ್ ಕಮ್ಯುನಿಸ್ಟ್ ಪಕ್ಷದ ಮೇಲೆ ಹೆಚ್ಚು ಒಲವು ಹೊಂದಿದ್ರು. 1955 ರಲ್ಲಿ ಕಾನೂನು ಪದವಿ ಪಡೆದ ಗೋರ್ಬಚೇವ್ 1970 ರಲ್ಲಿ ಸ್ಟಾವ್ರೊಪೋಲ್ ಪ್ರಾದೇಶಿಕ ಸಮಿತಿಯ ಮೊದಲ ಪಕ್ಷದ ಕಾರ್ಯದರ್ಶಿಯಾಗಿ ನೇಮಕಗೊಂಡರು,

1989ರಲ್ಲಿ ಸೋವಿಯತ್ ದೇಶಗಳಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳು ಆರಂಭವಾದಾಗ ಗೋರ್ಬಚೇವ್ ಸೇನಾ ಬಲ ಬಳಸಿ ಹತ್ತಿಕ್ಕಲಿಲ್ಲ. 1989ರ ಈ ಪ್ರತಿಭಟನೆಗಳು ಕ್ರಮೇಣ ಇತರ ಪ್ರಾಂತ್ಯಗಳಿಗೂ ವ್ಯಾಪಿಸಿತು. ಎರಡೇ ವರ್ಷಗಳಲ್ಲಿ ಅಂದರೆ 1991ರಲ್ಲಿ ಸುಮಾರು 15 ಪ್ರಾಂತ್ಯಗಳು ಸ್ವತಂತ್ರ ಗಣರಾಜ್ಯಗಳಾಗಿ ಅಸ್ತಿತ್ವಕ್ಕೆ ಬಂದವು. ಸೋವಿಯತ್ ಒಕ್ಕೂಟ ಪತನವಾಗೋದನ್ನ ತಡೆಯಲು ಗೋರ್ಬಚೇವ್ ಪ್ರಯತ್ನ ಮಾಡಿದರಾದರೂ ಅದು ಫಲ ಕೊಡಲಿಲ್ಲ.
ಸೋವಿಯತ್ ಒಕ್ಕೂಟದ ವಿವಿಧ ಪ್ರಾಂತ್ಯಗಳಿಗೆ ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ್ಯ ಕೊಡುವ ಕ್ರಮಗಳನ್ನು ಘೋಷಿಸಿದರು. ಆದರೆ ಈ ಸುಧಾರಣಾ ಕ್ರಮಗಳು ನಿಯಂತ್ರಣ ಮೀರಿ ಹೋದವು. ರಷ್ಯನ್ನರ ಜೀವನಮಟ್ಟದ ಕುಸಿಯಲು ಸಹ ಗೋರ್ಬಚೇವ್ ತೆಗೆದುಕೊಂಡ ಸುಧಾರಣೆಯ ಕ್ರಮಗಳು ಕಾರಣ ಎಂದು ಹಲವು ರಷ್ಯಾದ ನಾಗರಿಕರು ಇಂದಿಗೂ ಬೇಸರ ವ್ಯಕ್ತಪಡಿಸುತ್ತಾರೆ.
ಮಿಖಾಯಿಲ್ ಗೋರ್ಬಚೇವ್ ನಿಧನಕ್ಕೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಂತಾಪ ವ್ಯಕ್ತಪಡಿಸಿದ್ದಾರೆ. ಹಾಲಿವುಡ್ ನಟ ಅರ್ನಾಲ್ಡ್ ಸಹ ಮಿಖಾಯಿಲ್ ಗೋರ್ಬಚೇವ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಹಿಂದೆ ಅವರ ಜೊತೆಗೆ ಮಾಡಿದ ಸಭೆಗಳನ್ನ ಸ್ಮರಿಸಿಸಿದ್ದಾರೆ.
Mikhail Gorbachev-dies at the age 91- Soviet Union last leader-Russia