ಬೀಜಿಂಗ್ : ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ರಾಜಕಾರಣಿಗಳ ಸಾಲಿನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿ ನಿಂತಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ಕಾರ್ಯವೈಖರಿಯಿಂದ ಬಹು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಮೋದಿ ಜನಪ್ರಿಯತೆ ಭಾರತದಲ್ಲಿ ಮಾತ್ರವಲ್ಲ ಕೊರೊನಾ ಸೃಷ್ಟಿಸಿದ ಚೀನಾದಲ್ಲಿಯೂ ಹೆಚ್ಚಾಗಿದೆಯಂತೆ. ಚೀನಾದ ಜನರಿಗೀಗ ಮೋದಿಯೇ ಹಾಟ್ ಫೇವರೇಟ್ ಅಂತೆ. ಹಾಗಂತ ನಾವು ಹೇಳ್ತಿಲ್ಲ. ಬದಲಾಗಿ ಚೀನಾದ ಪತ್ರಿಕೆಯೊಂದು ನಡೆದ ಸಮೀಕ್ಷೆಯಲ್ಲಿ ಬಯಲಾಗಿದೆ.

ಹೌದು. ನರೇಂದ್ರ ಮೋದಿ. ಭಾರತದ ಸರ್ವಶ್ರೇಷ್ಟ ಪ್ರಧಾನಿ ಅಂತಾ ಕರೆಯಿಸಿಕೊಳ್ಳುತ್ತಿರುವ ಮೋದಿ ಈಗಾಗಲೇ ಹಲವಾರು ಯೋಜನೆ, ಕಾನೂನು ಬದಲಾವಣೆ, ದಿಟ್ಟ ನಿಲುವಿನಿಂದಾಗಿ ಬಹು ಪ್ರಖ್ಯಾತಿಯನ್ನ ಪಡೆದುಕೊಂಡಿದ್ದಾರೆ. ದೇಶ ಮಾತ್ರವಲ್ಲದೇ ವಿಶ್ವದ ಹಲವು ರಾಷ್ಟ್ರಗಳು ಕೂಡ ಈಗಾಗಲೇ ಮೋದಿ ಅವರ ಜನಪ್ರಿಯತೆಯಿಂದಾಗಿಯೇ ಭಾರತದದೊಂದಿಗೆ ಸ್ನೇಹ ಹಸ್ತ ಚಾಚಿವೆ.

ಆದರೆ ಅಚ್ಚರಿಯ ಸಂಗತಿ ಎಂದರೆ, ಕರೊನಾ ವೈರಸ್ ಹಾಗೂ ಲಡಾಖ್ ಗಡಿ ವಿವಾದದ ನಂತರ ತಿರಸ್ಕರಿಸಲ್ಪಟ್ಟಿರುವ ಚೀನಾದಲ್ಲಿನ ಜನರು ಕೂಡ ಮೋದಿ ಅವರನ್ನೇ ಹೆಚ್ಚು ಪ್ರೀತಿಸುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ. ಚೀನಾದ ಮೌತ್ಪೀಸ್ ಗ್ಲೋಬಲ್ ಟೈಮ್ಸ್ ಈ ಕುರಿತು ಸಮೀಕ್ಷೆಯೊಂದನ್ನು ನಡೆಸಿದೆ.

ಲಡಾಖ್ ವಿವಾದದ ಮೂರು ತಿಂಗಳ ನಂತರ ಚೀನಾದ ಮೌತ್ಪೀಸ್ ಗ್ಲೋಬಲ್ ಟೈಮ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಹೆಚ್ಚಿನ ಚೀನೀಯರು ತಮ್ಮ ನಾಯಕರಿಗಿಂತ ಪಿಎಂ ಮೋದಿಯವರ ಕಾರ್ಯವೈಖರಿಯ ಬಗ್ಗೆ ಹೆಚ್ಚಿನ ಒಲವು ಹೊಂದಿರುವುದಾಗಿ ಅದರಲ್ಲಿ ವರದಿಯಾಗಿದೆ.

ಗ್ಲೋಬಲ್ ಟೈಮ್ಸ್ ನಡೆಸಿರುವ ಸಮೀಕ್ಷೆಯ ಪ್ರಕಾರ 50 ಪ್ರತಿಶತದಷ್ಟು ಚೀನಾದ ನಾಗರಿಕರು ಬೀಜಿಂಗ್ ಮೇಲೆ ಅನುಕೂಲಕರ ಪ್ರಭಾವವನ್ನು ಹೊಂದಿದ್ದರೆ, 50 ಪ್ರತಿಶತ ಜನರು ಭಾರತದ ಮೋದಿ ಸರ್ಕಾರವನ್ನು ಶ್ಲಾಘಿಸಿದ್ದಾರೆ.

ಚೀನಾದ ಅತಿದೊಡ್ಡ ಟೆಕ್ ಕಂಪನಿ ಹುವಾವೇ ಭಾರತದ ಎಲ್ಲಾ ಪ್ರಮುಖ ದಿನಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತುಗಳನ್ನು ಪ್ರಕಟಿಸುವ ಮೂಲಕ ಭಾರತವನ್ನು ತನ್ನತ್ತ ಸೆಳೆಯಲು ಪ್ರಯತ್ನಿಸುತ್ತಿದೆ. ಭಾರತದೊಂದಿಗಿನ ತನ್ನ ಸಂಬಂಧವು ಸಾಕಷ್ಟು ಹಳೆಯದು ಎಂದು ತೋರಿಸಲು ಹುವಾವೇ ಪ್ರಯತ್ನಿಸುತ್ತಿದೆ ಎಂಬುವುದಾಗಿ ಸಮೀಕ್ಷಾ ವರದಿ ಹೇಳುತ್ತಿದೆ.

ಭಾರತದಲ್ಲಿ ಚೀನಾ ವಿರೋಧಿ ಭಾವನೆ ಹೊಂದಿರುವವರ ಸಂಖ್ಯೆ ಶೇ.70ರಷ್ಟಿದ್ದು, ಅದೇ ಸಮಯದಲ್ಲಿ ಎರಡೂ ದೇಶಗಳ ಸಂಬಂಧ ಮತ್ತೆ ಚಿಗುರುತ್ತೆ ಅಂತಾ ಶೇ.30ರಷ್ಟು ಜನರು ಭಾವಿಸಿದ್ದಾರೆ.

ಈಗಾಗಲೇ ಚೀನಾದ ಆ್ಯಪ್, ಸರಕುಗಳ ಮೇಲೆ ಭಾರತ ನಿಷೇಧ ಹೇರಿದೆ. ಸಾಲದಕ್ಕೆ ಚೀನಿಯರು ಭಾರತಕ್ಕೆ ಬರುವುದಕ್ಕೂ ನಿಷೇಧ ಹೇರಿರುವ ಭಾರತದ ವಿರುದ್ದ ಚೀನಿಯರು ಸಹಜವಾಗಿಯೇ ವಿರೋಧಿಸಬೇಕಿತ್ತು.

ಆದ್ರೆ ಚೀನಾದ ಜನರು ಮಾತ್ರ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವುದು ಸಮೀಕ್ಷೆಯಿಂದ ಬಯಲಾಗಿದೆ.