ನವದೆಹಲಿ : (Petrol Diesel price Today) ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ದದ ಎಫೆಕ್ಟ್ ಇದೀಗ ತೈಲ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮವನ್ನು ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲ ದರ ಬ್ಯಾರಲ್‌ಗೆ 10 ಡಾಲರ್ ಏರಿಕೆ ಕಂಡಿದ್ದು, ತೈಲ ದರ 130 ಡಾಲರ್‌ಗೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಬರೋಬ್ಬರಿ 14 ವರ್ಷಗಳ ನಂತರದಲ್ಲಿ ಕಚ್ಚಾ ತೈಲದ ದರ ದಾಖಲೆಯ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿದೆ.
ಸೋಮವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಆರಂಭಿಸುತ್ತಲೇ ಬ್ರೆಂಟ್ ಕಚ್ಚಾತೈಲವು 10 ಡಾಲರ್ ಏರಿಕೆ ಕಂಡಿದೆ. ಇನ್ನು ಅಮೇರಿಕಾದಲ್ಲಿ 9 ಡಾಲರ್‌ನಷ್ಟು ಏರಿಕೆಯಾಗಲಿದೆ. ರಷ್ಯಾ ಉಕ್ರೇನ್ ವಿರುದ್ದ ಸಮರ ಸಾರುತ್ತಿದ್ದಂತೆಯೇ ವಿಶ್ಲೇಷಕರು ತೈಲ ಬೆಲೆಯಲ್ಲಿ ಭಾರೀ ಏರಿಕೆಯಾಗುವ ಕುರಿತು ಮುನ್ಸೂಚನೆಯನ್ನು ನೀಡಿದ್ದರು. ಉಕ್ರೇನ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಯುದ್ದಕ್ಕೆ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದ್ದರೂ ಕೂಡ ದಾಳಿ ಮುಂದುವರಿದಿದೆ. ಯುದ್ದದ ಹಿನ್ನೆಲೆಯಲ್ಲಿ ಲಿಬಿಯಾದ ರಾಷ್ಟ್ರೀಯ ತೈಲ ಕಂಪೆನಿಯ ಎರಡು ಘಟಕಗಳನ್ನು ಸೇನಾ ಪಡೆಗಳು ಮುಚ್ಚಿಸಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಭಾರತದಲ್ಲಿ ಈಗಾಗಲೇ ತೈಲ ದರ ನೂರರ ಗಡಿ ದಾಟಿದೆ. ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರದಲ್ಲಿ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಪೆಟ್ರೋಲ್ ಹಾಗೂ ಡಿಸೇಲ್ ದರದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಸದ್ಯದ ಮಾಹಿತಿಯ ಪ್ರಕಾರ ಪೆಟ್ರೋಲ್‌ಗೆ ಪ್ರತೀ ಲೀಟರ್‌ಗೆ 12 ರಿಂದ 22 ರೂಪಾಯಿ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಮಾರುಕಟ್ಟೆಗಳಿಗೆ ಇರಾನಿನ ಕಚ್ಚಾ ತೈಲ ಪೂರೈಕೆಯ ವಿಳಂಬದಿಂದಾಗಿ 2008 ರಿಂದ ತೈಲ ಬೆಲೆಗಳು ಅತ್ಯಧಿಕ ಪ್ರಮಾಣದಲ್ಲಿ ಏರಿಕೆಯನ್ನು ಕಂಡಿತ್ತು. ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳು ರಷ್ಯಾದ ತೈಲ ಆಮದಿನ ಮೇಲೆ ನಿರ್ಬಂಧ ವಿಧಿಸಲು ಮುಂದಾಗಿರುವುದು ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮಾರ್ಚ್ 7 ಅಥವಾ ನಂತರ ಪ್ರಸ್ತುತ ಬೆಲೆಗಳನ್ನು ಪರಿಷ್ಕರಿಸಲಿವೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿ ಪಂಚರಾಜ್ಯ ಚುನಾವಣೆ ನಡೆಯುತ್ತಿದ್ದು, ಚುನಾವಣೆಯ ಬೆನ್ನಲ್ಲೇ ಕೇಂದ್ರ ಸರಕಾರ ತೈಲ ಬೆಲೆಯಲ್ಲಿ ಏರಿಕೆ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಅಬಕಾರಿ ಸುಂಕ ಕಡಿಮೆ ಮಾಡಿದ ಬೆನ್ನಲ್ಲೇ ಪೆಟ್ರೋಲ್, ಡಿಸೇಲ್ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದ ಜನತೆಗೆ ಇದೀಗ ಶಾಕ್ ಎದುರಾಗಿದೆ. ಒಂದೊಮ್ಮೆ ತೈಲ ದರ ಏರಿಕೆಯಾದ್ರೆ ಅಗತ್ಯ ವಸ್ತುಗಳ ಬೆಲೆಯೂ ದುಪ್ಪಟ್ಟಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : Oil Price Hike: ಮತ್ತೆ ತೈಲ ಬೆಲೆ ಏರಿಕೆ; ಈ ಸಲ ಜೇಬಿಗೆ 9 ರೂ. ಭಾರ ಎನ್ನುತ್ತಿದೆ ವರದಿ
ಇದನ್ನೂ ಓದಿ : ಮಾಯಾನಗರಿಯಲ್ಲಿ ತಲೆ ಎತ್ತಲಿದೆ ಜಿಯೋ ವರ್ಲ್ಡ್ ಸೆಂಟರ್ : ಏನಿದರ ವಿಶೇಷತೆ ಗೊತ್ತಾ !
( Petrol Diesel price Today crude oil price hike 130 dollars in international market )