Japanese kid in Hindi : ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಜಪಾನ್‌ನ ಟೋಕಿಯೊ ನಗರಕ್ಕೆ ಎರಡು ದಿನಗಳ ಪ್ರವಾಸದಲ್ಲಿದ್ದಾರೆ. ಇಂದು ಅವರು ಟೋಕಿಯೋಗೆ ಬಂದಿಳಿದ ಅವರು, ಹೋಟೆಲ್‌ಗೆ ಆಗಮಿಸಿದ ಭಾರತೀಯ ಮಕ್ಕಳೊಂದಿಗೆ ತಮ್ಮ ಹಸ್ತಾಕ್ಷರಕ್ಕಾಗಿ ಕಾಯುತ್ತಿದ್ದ ಕೆಲವು ಜಪಾನಿನ ಮಕ್ಕಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಜಪಾನಿ ಬಾಲಕನೊಬ್ಬ ಕೈಯಲ್ಲಿ ತ್ರಿವರ್ಣ ಧ್ವಜವನ್ನು ಪ್ರಧಾನಿ ಮೋದಿಯೊಂದಿಗೆ ಹಿಂದಿ ಭಾಷೆಯಲ್ಲಿ ಸಂವಹನ ನಡೆಸಿದ್ದಾನೆ.ಇದರಿಂದ ಆಶ್ಚರ್ಯಗೊಂಡ ಪ್ರಧಾನಿ ನರೇಂದ್ರ ಮೋದಿ, ವ್ಹಾವ್! ನೀವು ಹಿಂದಿ ಭಾಷೆಯನ್ನು ಎಲ್ಲಿ ಕಲಿತಿದ್ದೀರಿ..? ನಿಮಗೆ ಹಿಂದಿ ಚೆನ್ನಾಗಿ ಮಾತನಾಡಲು ಬರುತ್ತದೆಯೇ ಎಂದು ಕೇಳಿದ್ದಾರೆ.
ಜಪಾನ್‌ನ ಬಾಲಕ ವಿಝುಕಿ ಪ್ರಧಾನಿ ಮೋದಿಯೊಂದಿಗೆ ಮಾತನಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ್ದು, ನನಗೆ ಹಿಂದಿ ಚೆನ್ನಾಗಿ ಮಾತನಾಡಲು ಬರುವುದಿಲ್ಲ. ಆದರೆ ನನಗೆ ಅರ್ಥವಾಗುತ್ತದೆ. ಪ್ರಧಾನಿ ಮೋದಿ ನನ್ನ ಮಾತನ್ನು ಅರ್ಥ ಮಾಡಿಕೊಂಡರು. ಅಲ್ಲದೇ ನನಗೆ ಅವರ ಆಟೋಗ್ರಾಫ್ ಕೂಡ ಸಿಕ್ಕಿತು. ಹೀಗಾಗಿ ನಾನು ಸಖತ್ ಖುಷಿಯಾಗಿದ್ದೇನೆ ಎಂದು ಹೇಳಿದರು.
#WATCH | "Waah! Where did you learn Hindi from?… You know it pretty well?," PM Modi to Japanese kids who were awaiting his autograph with Indian kids on his arrival at a hotel in Tokyo, Japan pic.twitter.com/xbNRlSUjik
— ANI (@ANI) May 22, 2022
ಪ್ರಧಾನಿ ಮೋದಿಯನ್ನು ಭೇಟಿಯಾಗುವ ಸಂದರ್ಭದಲ್ಲಿ ಜಪಾನಿನ ಮಕ್ಕಳು ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದದರು. ಪ್ರಧಾನಿ ಮೋದಿ ನಮಗೆ ಆಶೀರ್ವಾದದ ಜೊತೆಯಲ್ಲಿ ಸಹಿ ಕೂಡ ನೀಡಿದ್ದಾರೆ ಎಂದು ಮೋದಿಯೊಂದಿಗಿನ ಸಂವಾದದ ಬಳಿಕ ಮತ್ತೊಬ್ಬ ಬಾಲಕ ರಿತ್ಸುಕಿ ಕೊಬಯಾಶಿ ಹೇಳಿದನು.
ಟೋಕಿಯೊದಲ್ಲಿ ಭಾರತೀಯ ವಲಸಿಗರು ಕೂಡ ಪ್ರಧಾನಿ ಮೋದಿಯವರನ್ನು ಭೇಟಿಯಾದರು. ಪ್ರಧಾನಿಯವರನ್ನು ಸ್ವಾಗತಿಸಲು ಅಲ್ಲಿ ಹಾಜರಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು, “ಪ್ರಧಾನಿ ಮೋದಿಯನ್ನು ಜಪಾನ್‌ಗೆ ಸ್ವಾಗತಿಸಲು ನಮಗೆ ತುಂಬಾ ಸಂತೋಷವಾಗಿದೆ. ಅವರ ಶಕ್ತಿಯು ಎಲ್ಲೆಡೆ ವ್ಯಾಪಿಸಿದೆ … ಅವರು ಎಲ್ಲೆಡೆ ನಮಗೆ ಹೆಮ್ಮೆ ತಂದಿದ್ದಾರೆ” ಎಂದು ಹೇಳಿದರು.
ಇದನ್ನು ಓದಿ : KL Rahul Captain : IND vs SA ENG ಸರಣಿಗೆ ಟೀಂ ಇಂಡಿಯಾ ಆಯ್ಕೆ : T20 ಸರಣಿಗೆ ಕನ್ನಡಿಗ ರಾಹುಲ್ ನಾಯಕ
ಇದನ್ನೂ ಓದಿ : IPL Star ಅಪ್ಪಾ ಕ್ಷೌರಿಕ ಮಗ ಐಪಿಎಲ್ ಸ್ಟಾರ್!
PM Modi impressed as he interacts with Japanese kid in Hindi, asks ‘Where did you learn?’ | VIDEO