Rare Pink Diamond:ವಜ್ರಗಳಿಗೆ ಆಕಾಶ ತೂಕದ ಬೆಲೆ ಇದೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಡುವೆ ಮಧ್ಯ ಆಫ್ರಿಕಾದ ಅಂಗೋಲಾದಲ್ಲಿ ಗಣಿಗಾರರಿಗೆ ಅತ್ಯಂತ ಅಪರೂಪದ ಶುದ್ಧ ಗುಲಾಬಿ ವಜ್ರವೊಂದು ಸಿಕ್ಕಿದೆ. ಈ ಗುಲಾಬಿ ವಜ್ರವು ಬರೋಬ್ಬರಿ 300 ವರ್ಷಗಳ ಅಂತರದಲ್ಲಿ ಕಂಡು ಬಂದ ಗುಲಾಬಿ ವಜ್ರದ ಪೈಕಿ ಅತ್ಯಂತ ದೊಡ್ಡದು ಎಂದು ಹೇಳಲಾಗಿದೆ.
ಲುಲೋ ರೋಸ್ ಎಂದು ಹೆಸರಿಸಲಾದ ಈ 179 ಕ್ಯಾರಟ್ ಗುಲಾಬಿ ವಜ್ರವನ್ನು ಆಫ್ರಿಕಾದ ಈಶಾನ್ಯ ಪ್ರದೇಶದ ಲುಲೋ ಮೈನ್ನಲ್ಲಿ ಕಂಡು ಹಿಡಿಯಲಾಗಿದೆ. ಇದು ಭೂಮಿಯಲ್ಲಿ ಕಂಡುಬರುವ ಅತ್ಯಂತ ಅಪರೂಪದ ಹಾಗೂ ಅತಿ ದೊಡ್ಡ ಗುಲಾಬಿ ವಜ್ರಗಳಲ್ಲಿ ಒಂದಾಗಿದೆ. ಲುಕುಪಾ ಡೈಮಂಡ್ ಕಂಪನಿ ನೇತೃತ್ವದ ಗಣಿಯೊಂದಿಗೆ ಪಾಲುದಾರರಾಗಿರುವ ಅಂಗೋಲನ್ ಸರ್ಕಾರವು ಈ ವಜ್ರದ ಶುದ್ಧತೆ ಹಾಗೂ ಅಪರೂಪದ ನೈಸರ್ಗಿಕ ಕಲ್ಲುಗಳಿಂದ ಪರಿಗಣಿಸಲ್ಪಟ್ಟ ಈ ವಜ್ರವನ್ನು ಸ್ವೀಕರಿಸಿದೆ.
ಅಂಗೋಲಾದ ಖನಿಜ ಸಂಪನ್ಮೂಲ ಸಚಿವ ಡೈಮಂಟಿನೋ ಅಜೆವೆಡೋ ಈ ಸಂಬಂಧ ಹೇಳಿಕೆ ನೀಡಿದ್ದು ಲುಲೋನಿಂದ ವಶಪಡಿಸಿಕೊಳ್ಳಲಾದ ಈ ಅದ್ಭುತವಾದ ಗುಲಾಬಿ ವಜ್ರವು ಅಂಗೂಲಾವನ್ನು ವಿಶ್ವ ಮಟ್ಟದಲ್ಲಿ ಹೆಸರು ಮಾಡುವಂತೆ ಮಾಡಿದೆ ಎಂದು ಹೇಳಿದ್ದಾರೆ.
ವಜ್ರಗಳು ಹೇಗೆ ಗುಲಾಬಿ ಬಣ್ಣವನ್ನು ಪಡೆಯುತ್ತವೆ..?
ಭೂಮಿಯ ಮೇಲೆ ವಜ್ರವು ರೂಪುಗೊಂಡ ಬಳಿಕ ಎಲ್ಲಾ ದಿಕ್ಕುಗಳಿಂದ ಬರುವ ತೀವ್ರವಾದ ಶಾಖ ಹಾಗೂ ಹೆಚ್ಚಿನ ಒತ್ತಡದ ಪರಿಣಾಮವಾಗಿ ವಜ್ರವು ಗುಲಾಬಿ ಬಣ್ಣವನ್ನು ಪಡೆಯುತ್ತದೆ. ವಜ್ರವನ್ನು ಅಂತಾರಾಷ್ಟ್ರೀಯ ಟೆಂಡರ್ನಲ್ಲಿ ಅಸಮಾನ್ಯ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಇದರ ನಡುವೆ ಲುಲು ರೋಸ್ಗೆ ಮಾರುಕಟ್ಟೆಯಲ್ಲಿ ಅದರ ನಿಜವಾದ ಮೌಲ್ಯವನ್ನು ನೀಡುವ ಸಲುವಾಗಿ ಅದನ್ನು ಕತ್ತರಿಸಿ ಹೊಳಪು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ವಜ್ರವು ತನ್ನ ಅರ್ಧದಷ್ಟು ತೂಕವನ್ನು ಕಳೆದುಕೊಳ್ಳುತ್ತದೆ.
ಇದನ್ನು ಓದಿ : Bigg Boss 4th elimination : ಬಿಗ್ ಬಾಸ್ ಎಲಿಮಿನೇಷನ್ : ಬಿಗ್ ಬಾಸ್ ಮನೆಯಿಂದ ಮಯೂರಿ ಔಟ್
ಇದನ್ನೂ ಓದಿ : Rohit Sharma gets emotional: 90 ಸಾವಿರ ಪ್ರೇಕ್ಷಕರ ಮುಂದೆ ರಾಷ್ಟ್ರಗೀತೆ ಹಾಡುವಾಗ ಕಣ್ಣೀರಿಟ್ಟ ರೋಹಿತ್ ಶರ್ಮಾ
Rare Pink Diamond Discovered In Africa, Largest One To Be Found In 300 Years