ಸೋಮವಾರ, ಏಪ್ರಿಲ್ 28, 2025
HomeWorldRussia Ukraine crisis : ತಕ್ಷಣ ಖಾರ್ಕಿವ್ ತೊರೆಯಲು ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ

Russia Ukraine crisis : ತಕ್ಷಣ ಖಾರ್ಕಿವ್ ತೊರೆಯಲು ವಿದ್ಯಾರ್ಥಿಗಳಿಗೆ ರಾಯಭಾರ ಕಚೇರಿ ಸೂಚನೆ

- Advertisement -

ನವದೆಹಲಿ : (Russia Ukraine crisis )ಒಂದೆಡೆ‌ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅನ್ನ ನೀರು ಮೂಲಭೂತ ಸೌಲಭ್ಯವಿಲ್ಲದೇ ಕಂಗಾಲಾಗಿರುವ ಬೆನ್ನಲ್ಲೇ ವಿದ್ಯಾರ್ಥಿಗಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಉಕ್ರೇನ್ ನಲ್ಲಿರುವ ಭಾರತೀಯರಿಗೆ ರಾಯಭಾರ ಕಚೇರಿ ತಕ್ಷಣವೇ ಖಾರ್ಕಿವ್ ತೊರೆಯುವಂತೆ ತುರ್ತು ಸಲಹೆ ನೀಡಿದೆ. ತಕ್ಷಣ ಎಲ್ಲರೂ ತಮ್ಮ ಖಾರ್ಕಿವ್ ಸ್ಥಳ ಗಳನ್ನು ತೊರೆಯುವಂತೆ ಹಾಗೂ ಭಾರತೀಯ ಕಾಲಮಾನ ರಾತ್ರಿ 9.30 ರೊಳಗಾಗಿ ಖಾರ್ಕಿವ್ ನಿಂದ ಪೆಸೊಚಿನ್, ಬಾಬಾಯೆ, ಬೆಜ್ಲ್ಯುಡೋವ್ಕಾ ವಸಾಹಾತುಗಳನ್ನು ತೊರೆಯುವಂತೆ ರಾಯಭಾರ ಕಚೇರಿ ಕರೆ ನೀಡಿದೆ.

ರಷ್ಯಾದ ಮೂಲಗಳ ಮಾಹಿತಿ ಆದರಿಸಿ ಭಾರತೀಯ ರಾಯಭಾರ ಕಚೇರಿ ತನ್ನ ವಿದ್ಯಾರ್ಥಿಗಳಿಗೆ ಈ ಸಂದೇಶ ನೀಡಿದೆ ಎನ್ನಲಾಗುತ್ತಿದ್ದು, ಖಾರ್ಖಿವ್ ನಲ್ಲಿರೋ ಭಾರತೀಯರು ತಮ್ಮ ಸುರಕ್ಷತೆ ಹಾಗೂ ಭದ್ರತೆಗೆ ಈ ಖಾರ್ಕಿವ್ ಅನ್ನು ತೊರೆಯಬೇಕು ಎಂದು ಸೂಚಿಸಿದೆ. ಮೆಸೆಜ್ ಮತ್ತು ಟ್ವಿಟ್ ಮೂಲಕ ಈ ಪ್ರಮುಖವಾದ ಸಂದೇಶವನ್ನು ರವಾನಿಸಲಾಗಿದೆ. ಈ ಹಿಂದೆ ಪೋಲೆಂಡ್ ನಲ್ಲಿರುವ ರಾಯಭಾರ ಕಚೇರಿ ಭಾರತಕ್ಕೆ ವಿದ್ಯಾರ್ಥಿಗಳನ್ನು ಕರೆತರುವುದಕ್ಕಾಗಿ ಪೋಲೆಂಡ್ ಗೆ ತ್ವರಿತವಾಗಿ ತೆರಳಲು ಬುಡೋಮಿಯಾರ್ಜ್ ಗಡಿ ಪ್ರದೇಶಕ್ಕೆ ಬರುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿತ್ತು.

ಈಗಾಗಲೇ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ರಷ್ಯಾ ( Russia Ukraine crisis ) ಇನ್ನು ಮುಂದೇ ಖಾರ್ಕೀವ್ ನಗರದ ಮೇಲೂ ಬಾಂಬ್ ದಾಳಿ ನಡೆಸಲಿದೆ ಎನ್ನಲಾಗುತ್ತಿದೆ. ಹೀಗಾಗಿ ವಿದ್ಯಾರ್ಥಿಗಳನ್ನು ರಕ್ಷಿಸಲು ಈ ಸಲಹೆ ನೀಡಲಾಗಿದೆ. ಆದರೆ ಈ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಹೇಗೆ ಖಾರ್ಖಿವ್ ತೊರೆದು ಎಂಬೆಸಿ ಸೂಚಿಸಿದ ಸ್ಥಳಗಳನ್ನು ತಲುಪುತ್ತಾರೆ? ಇದು ಹೇಗೆ ಸಾಧ್ಯ? ಮಕ್ಕಳನ್ನು ಹೊರಗೆ ಬನ್ನಿ ಎನ್ನುವುದಲ್ಲ ಎಂಬೆಸಿಯೇ ಅವರನ್ನು ರಕ್ಷಿಸಿ ಕರೆತರಬೇಕು ಎಂಬ ಆಗ್ರಹ ಭಾರತದಲ್ಲಿರುವ ಪೋಷಕರಿಂದ ವ್ಯಕ್ತವಾಗುತ್ತಿದೆ.

ಈ ಮಧ್ಯೆ ಆಫರೇಶನ್ ಗಂಗಾ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ರಕ್ಷಿಸಿ ಕರೆತರುವ ಕಾರ್ಯಾಚರಣೆ ಚುರುಕುಗೊಂಡಿದೆ. ಬುಧವಾರ ಒಂದೇ ದಿನ ಉಕ್ರೇನಿನಿಂದ ಭಾರತಕ್ಕೆ 9 ವಿಮಾನ ಗಳ ಆಗಮಿಸಿದ್ದು, ಅಂದಾಜು1 ಸಾವಿರ ವಿದ್ಯಾರ್ಥಿಗಳು ತಾಯ್ನೆಲ‌ ತಲುಪಿದ್ದಾರೆ. ಇನ್ನೊಂದೆಡೆ ನಾಳೆ ದೆಹಲಿ ಮತ್ತು ಮುಂಬೈಗೆ 7 ವಿಮಾನಗಳು ಬರಲಿದ್ದು, ವಾಯುಸೇನೆ ಯ C-17 ವಿಮಾನಗಳ ಮೂಲಕವೂ ಏರ್ ಲಿಫ್ಟ್ ಮಾಡಲು ಕೇಂದ್ರ ಸರ್ಕಾರ ಪ್ಲ್ಯಾನ್ ಮಾಡಿದೆ. ಮಂಗಳವಾರ ತಡ ರಾತ್ರಿ ಒ 4 C-17 ವಿಮಾನಗಳಲ್ಲಿ ಒಂದು ಬ್ಯಾಚ್ ಬಂದಿದೆ.

ಇನ್ಮುಂದೇ ಪ್ರತಿದಿನ ಉಕ್ರೇನ್ ಗೆ ನಾಲ್ಕು ವಾಯುಸೇನಾ ವಿಮಾನಗಳು ತೆರಳಲಿದ್ದು, ಒಂದು ಸಲಕ್ಕೆ 200 ಜನರನ್ನು ಭಾರತಕ್ಕೆ ಕರೆತರಲಾಗುತ್ತದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರುವ ಭರವಸೆ ಇದೆ ಎಂದು ವಾಯುಪಡೆಯ ವೈಸ್ ಚೀಫ್ ಏರ್ ಮಾರ್ಷಲ್ ಸಂದೀಪ್ ಸಿಂಗ್ ಹೇಳಿದ್ದಾರೆ. ಒಟ್ಟಿನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ಕೇಂದ್ರದಿಂದ ಚುರುಕುಗೊಂಡಿದೆ.

ಇದನ್ನೂ ಓದಿ : ಉಕ್ರೇನ್ – ರಷ್ಯಾ ಯುದ್ಧದ ಎಫೆಕ್ಟ್ : 150 -175 ರೂ.ಗೆ ಏರಿಕೆಯಾಗುತ್ತಾ ಪೆಟ್ರೋಲ್‌

ಇದನ್ನೂ ಓದಿ : Russia Ukraine crisis ಉಕ್ರೇನ್‌ನಲ್ಲಿ ಪಂಜಾಬ್‌ ಮೂಲದ ವಿದ್ಯಾರ್ಥಿ ಚಂದನ್‌ ಜಿಂದಾಲ್‌ ಸಾವು

Russia Ukraine crisis Embassy instructs students to leave Kharkiv immediately

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular