ಮಾಸ್ಕೋ : ಪ್ರಯಾಣಿಕರ ಹೊತ್ತು ಪೂರ್ವ ರಷ್ಯಾದ ಕಮ್ಚಟ್ಕಾ ಪರ್ಯಾಯ ದ್ವೀಪಕ್ಕೆ ತೆರಳುತ್ತಿದ್ದ ರಷ್ಯಾದ ಎಎನ್ -26 ವಿಮಾನ ನಾಪತ್ತೆಯಾಗಿದೆ. ವಿಮಾನದ ಲ್ಯಾಂಡಿಂಗ್ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು, ವಿಮಾನದಲ್ಲಿ ಸುಮಾರು 28 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಶೋಧ ಹಾಗೂ ರಕ್ಷಣಾ ತಂಡ ಸ್ಥಳಕ್ಕೆ ದೌಡಾಯಿಸಿದೆ.
ರಷ್ಯಾದ ಪ್ರಾದೇಶಿಕ ರಾಜಧಾನಿ ಪೆಟ್ರೊಪಾವ್ಲೋವ್ಸ್ಕ್- ಕಮ್ಚಾಟ್ಸ್ಕಿಯಿಂದ ಪರ್ಯಾಯ ದ್ವೀಪದ ಉತ್ತರ ಭಾಗದ ಪಲಾನಾಕ್ಕೆ ಸಂಚಾರ ಮಾಡುತ್ತು. ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವ ವೇಳೆಯಲ್ಲಿ ವಾಯು ಸಂಚಾರದೊಂದಿಗೆ ನಿಯಂತ್ರಣ ಕಳೆದುಕೊಂಡಿದೆ. ಕೂಡಲೇ ವಿಮಾನ ನಿಲ್ದಾಣದ ಅಧಿಕಾರಿಗಳು ಪೈಲೆಟ್ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸಿದ್ದಾರೆ ಆದರೆ ಅದು ಸಾಧ್ಯವಾಗಿಲ್ಲ ಎಂದು ರಷ್ಯಾದ ಪತ್ರಿಕೆಗಳು ವರದಿ ಮಾಡಿವೆ.
ವಿಮಾನದಲ್ಲಿ ಒಟ್ಟು 22 ಮಂದಿ ಪ್ರಯಾಣಿಕರು ಹಾಗೂ 6 ಮಂದಿ ಸಿಬ್ಬಂದಿಗಳು ಇದ್ದರು ಎಂದು ಹೇಳಲಾಗುತ್ತಿದೆ. ವಿಮಾನ ನಾಪತ್ತೆಯಾಗಿರೋದ ಖಚಿತವಾಗುತ್ತಿದ್ದಂತೆಯೇ ಸ್ಥಳಕ್ಕೆ ಶೋಧ ಹಾಗೂ ರಕ್ಷಣಾ ತಂಡ ಆಗಮಿಸಿದ್ದು, ಕಾರ್ಯಾಚರಣೆಯನ್ನು ಆರಂಭಿಸಿವೆ. ವಿಮಾನ ನಿಲ್ದಾಣ ಪ್ರದೇಶದಲ್ಲಿ ಮೋಡ ಕವಿದ ವಾತಾವರಣವಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ದೇಶದ ತುರ್ತು ಸಚಿವಾಲಯ ಹೇಳಿದೆ. ಆದರೆ ಹವಾಮಾನ ವೈಪರುತ್ಯದಿಂದ ಈ ಘಟನೆ ಸಂಭವಿಸಿದೆಯಾ ಇಲ್ಲಾ ಬೇರೆ ಕಾರಣವಿದೆಯೇ ಅನ್ನೋದು ಇನ್ನೂ ತಿಳಿದುಬಂದಿಲ್ಲ.