ನ್ಯೂಯಾರ್ಕ್ : ಕೊರೊನಾ ವೈರಸ್ ಸೋಂಕು ವಿಶ್ವದ ಜನರ ನಿದ್ದೆಗೆಡಿಸಿದೆ. ಅದ್ರಲ್ಲೂ ತಂಬಾಕು ಪ್ರಿಯರು ಹಾಗೂ ಧೂಮಪಾನಿಗಳನ್ನೇ ಹೆಚ್ಚಾಗಿ ಕಾಡುತ್ತೆ ಕೊರೊನಾ. ಒಂದೊಮ್ಮೆ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಸಾಯುವ ಸಂಖ್ಯೆ ಶೇ.50 ರಷ್ಟಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
ಸಾಮಾನ್ಯವಾಗಿ ತಂಬಾಕು ಸೇವನೆ ಮಾಡುವವರು ಹಾಗೂ ಧೂಮಪಾನ ಮಾಡುವವರು ಹಲವು ರೀತಿಯ ಗಂಭೀರ ಕಾಯಿಲೆಗೆ ತುತ್ತಾಗುತ್ತಾರೆ. ಅದ್ರಲ್ಲೂ ಕ್ಯಾನ್ಸರ್, ಶ್ವಾಸಕೋಶ ಸಮಸ್ಯೆ, ಹೃದ್ರೋಗ ಸಮಸ್ಯೆ ಬಹುವಾಗಿ ಕಾಡುತ್ತೆ. ವ್ಯಸನಿಗಳಲ್ಲಿ ರೋಗ ನಿರೋಧಕ ಶಕ್ತಿಯ ಪ್ರಮಾಣ ತೀರಾ ಕಡಿಮೆಯಾಗಿರುವುದರಿಂದಾಗಿ ಬಹುಬೇಗನೆ ಕೊರೊನಾ ಸೋಂಕು ವ್ಯಾಪಿಸುವ ಸಾಧ್ಯತೆಯಿದೆ.
ಕೊರೊನಾ ಸಂಕಷ್ಟದ ಕಾಲದಲ್ಲಿ ಧೂಮಪಾನ ತ್ಯೆಜಿಸುವುದು ಉತ್ತಮ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೋಸ್ ಟಧಾನೋಮ್ ಫಬ್ರಯೆಸಸ್ ಅವರು ಸಲಹೆ ನೀಡಿದ್ದಾರೆ.