ಮಗುವಿನ ಜನನ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣ. ತಮ್ಮ ಮಗುವಿನ ಜನನದ ದಿನದಂದು ಯಾವುದೇ ಕೆಲಸವಿದ್ದರೂ ಸರಿ ಅದನ್ನು ಬದಿಗೊತ್ತಿ, ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿರುವುದು ಪತಿಯಾದವನ ಕರ್ತವ್ಯ. ಆದರೆ ಇಲ್ಲೋರ್ವ ಪತಿರಾಯ ಬರ್ಗರ್ ತಿನ್ನುವ ಆಸೆಯಿಂದ ಡೆಲಿವರಿ ಟೈಮ್ ಅಲ್ಲಿ ಪತ್ನಿಯ ಜೊತೆಯಲ್ಲಿ ಇರಲಿಲ್ಲ. ಇದೇ ಕಾರಣಕ್ಕೆ ಪತ್ನಿಯೋರ್ವಳು ಪತಿಗೆ ವಿಚ್ಚೇದನ ನೀಡಿದ್ದಾಳೆ.
ಹೌದು, ಈ ಪತಿ ಮಹಾಶಯನಿಗೆ ಮ್ಯಾಕ್ ಡೋನಾಲ್ಡ್ ಬರ್ಗರ್ ತಿನ್ನೋ ಖಯಾಲಿ, ಪತ್ನಿ ಹೆರಿಗೆಯ ನೋವಿನಿಂದ ಬಳಲುತ್ತಿದ್ದಳು. ಜೊತೆಗೆ ಹೆರಿಗೆಯ ಹಿನ್ನೆಲೆಯಲ್ಲಿ ಮಡದಿ ಹಸಿದುಕೊಂಡಿದ್ದಳು. ಆದರೆ ಪತಿ ಪತ್ನಿಯ ಜೊತೆಗಿದ್ದು, ಸಂತೈಸುವುದನ್ನು ಬಿಟ್ಟು ಬರ್ಗರ್ ತಿನ್ನೋದಕ್ಕೆ ಹೋಗಿದ್ದಾನೆ. ಅಲ್ಲದೇ ಹಸಿದು ನೋವಲ್ಲಿದ್ದ ಪತ್ನಿಯ ಮುಂದೆಯೇ ಬರ್ಗರ್ ತಿಂದಿದ್ದಾನೆ ಎಂದು ಪತ್ನಿ ನ್ಯಾಯಾಲಯಕ್ಕೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಇಷ್ಟೇ ಅಲ್ಲಾ ಪತ್ನಿ ಹೆರಿಗೆಯ ನೋವಲ್ಲಿದ್ದಾಗಲೂ ಪತಿರಾಯ, ಪತ್ನಿಯನ್ನು ಒಬ್ಬಂಟಿಯಾಗಿ ಬಿಟ್ಟು ನಿರೀಕ್ಷಣಾ ಕೊಠಡಿಗೆ ಮಲಗಲು ತೆರಳಿದ್ದಾನೆ. ನನಗೆ ಸಿ-ಸೆಕ್ಷನ್ ಆದ ಘಳಿಗೆ ನನ್ನ ತಂದೆ ಜೊತೆಯಲ್ಲಿದ್ದರು” ಎಂದು ಸಿಟ್ಟಿಗೆದ್ದ ಪತ್ನಿ ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಘಟನೆ ಬಳಿಕ ತಾವಿಬ್ಬರೂ ಜೊತೆಯಾಗಿ ಬಾಳುತ್ತಿಲ್ಲ ಎಂದು ತಿಳಿಸಿದ ಮಹಿಳೆ, “ನಾನು ಈಗ ಆತನ ಜೊತೆಗೆ ಇಲ್ಲ, ನನ್ನ ಮಗನ ಜನನದ ಘಳಿಗೆಯಲ್ಲಿ ನಾನು ಆತನೊಂದಿಗೆ ಇರಲಿಲ್ಲ. ನಾಲ್ಕು ವರ್ಷಗಳ ಕಾಲ ಜೊತೆಯಲ್ಲಿದ್ದು 14 ತಿಂಗಳು ವೈವಾಹಿಕ ಜೀವನವನ್ನೂ ನಡೆಸಿದ್ದೆವು. ಆತ ನನ್ನನ್ನು ಪ್ರೀತಿಸುತ್ತಿಲ್ಲ ಎಂದು ನನಗೆ ಅರಿವಾದಾಗ ನಾನು ಆರು ತಿಂಗಳ ಗರ್ಭಿಣಿ ಎಂದು ಹೇಳಿಕೊಂಡಿದ್ದಾರೆ. ಮಹಿಳೆಯ ಈ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ವಿಮಾನದೊಳಗೆ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ : ಮುಂದೇನಾಯ್ತು ಗೊತ್ತಾ ?
ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್ ಟಾಕರ್ “ನನ್ನ ಪತಿ ಸಹ ಹೀಗೇ ನೆಲದ ಮೇಲೇ ಮಲಗಿಬಿಟ್ಟಿದ್ದರು. ನನ್ನ ತುರ್ತು ಸಿ-ಸೆಕ್ಷನ್ ಸರ್ಜರಿ ಸಂದರ್ಭದಲ್ಲಿ ವೈದ್ಯರು ಆತನನ್ನು ಎಬ್ಬಿಸಬೇಕಾಯಿತು. ನಿಜ ಹೇಳಬೇಕೆಂದರೆ ಆತ 48 ಗಂಟೆಗಳ ಕಾಲ ನಿದ್ರಿಸಿರಲಿಲ್ಲ” ಎಂದು ನೆಟ್ಟಿಗರೊಬ್ಬರು ಈ ಪೋಸ್ಟ್ಗೆ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
(Husband who is not accompanying childbirth: Divorce wife to her husband!)