Sri Lanka crisis : ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನಿರ್ಣಯ ಘೋಷಿಸಿದ ರನಿಲ್​ ವಿಕ್ರಮ್​ಸಿಂಘೆ

Sri Lanka crisis :ಶ್ರೀಲಂಕಾದಲ್ಲಿ ಮಿತಿಮೀರಿರುವ ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಜನರು ಶ್ರೀಲಂಕಾ ಅಧ್ಯಕ್ಷರ ನಿವಾಸ ಹಾಗೂ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಗೋತಬಯ ರಾಜಪಕ್ಸೆ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈ ಬೆಳವಣಿಗೆಗಳ ಬೆನ್ನಲ್ಲೇ ಶ್ರೀಲಂಕಾ ಪ್ರಧಾನಿ ರನಿಲ್​ ವಿಕ್ರಮ್​ಸಿಂಘೆ ತಾವು ರಾಜೀನಾಮೆ ನೀಡಲು ಸಿದ್ಧನಿದ್ದು ಹೊಸ ಸರ್ಕಾರವನ್ನು ರಚಿಸಲು ದಾರಿ ಮಾಡಿಕೊಡುತ್ತಿರುವುದಾಗಿ ರಾಜಕೀಯ ನಾಯಕರಿಗೆ ಮಾಹಿತಿಯನ್ನು ನೀಡಿದ್ದಾರೆ.

ಹೊಸ ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದ ನಂತರ ರಾಜೀನಾಮೆ ನೀಡುವುದಾಗಿ ವಿಕ್ರಮಸಿಂಘೆ ಅವರು ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎಂದು ಪ್ರಧಾನಿ ವಕ್ತಾರ ದಿನೌಕ್ ಕೊಲಂಬಗೆ ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ವಿಕ್ರಮ ಸಿಂಘೆ, ದೇಶದ ಎಲ್ಲಾ ನಾಗರಿಕರ ಸುರಕ್ಷತೆ ಸೇರಿದಂತೆ ಸರ್ಕಾರದ ಮುಂದುವರಿಕೆಯನ್ನು ಖಚಿತಪಡಿಸಿಕೊಳ್ಳಲು ನಾನು ಇಂದು ಪಕ್ಷದ ನಾಯಕರ ಶಿಫಾರಸುಗಳನ್ನು ಸ್ವೀಕರಿಸುತ್ತೇನೆ. ಸರ್ವಪಕ್ಷ ಸರ್ಕಾರಕ್ಕೆ ದಾರಿ ಮಾಡಿಕೊಡುತ್ತಿದ್ದೇನೆ. ಇವೆಲ್ಲವನ್ನು ಸುಲಭಗೊಳಿಸಲು ನಾನು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆಂದು ಬರೆದುಕೊಂಡಿದ್ದಾರೆ.

ವಿಕ್ರಮಸಿಂಘೆ ಅವರು ಇಂಧನ ವಿತರಣೆಯನ್ನು ಪುನರಾರಂಭಿಸುವುದರಿಂದ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಸಾಲದ ಸುಸ್ಥಿರತೆಯ ವರದಿಯನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದು ಮಾಧ್ಯಮ ಕಚೇರಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಸಂಸತ್ತಿನ ಸ್ಪೀಕರ್​ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶ್ರೀಲಂಕಾದ ನಾಯಕರು ಆರ್ಥಿಕ ಕುಸಿತ ಹಾಗೂ ದೇಶದಲ್ಲಿ ಶಾಂತಿ ಕದಡುತ್ತಿರುವ ಹಿನ್ನೆಲೆಯಲ್ಲಿ ರಾಜಪಕ್ಸೆ ಹಾಗೂ ವಿಕ್ರಮಸಿಂಘೆ ರಾಜೀನಾಮೆಗೆ ಆಗ್ರಹಿಸಿದ್ದರು ಎನ್ನಲಾಗಿದೆ. ಇದು ಅಧ್ಯಕ್ಷರ ಮನೆಗೆ ಮುತ್ತಿಗೆ ಹಾಕುವವರೆಗೂ ಮುಂದುವರಿದಿದೆ.

ಇದಕ್ಕೂ ಮುನ್ನ, ಶ್ರೀಲಂಕಾದಲ್ಲಿನ ಬಿಕ್ಕಟ್ಟನ್ನು ಪರಿಹರಿಸಲು ಮುಂದಿನ ಕ್ರಮಗಳ ಬಗ್ಗೆ ನಿರ್ಧರಿಸಲು ಸಂಸತ್ತಿನ ಸ್ಪೀಕರ್ ಸಭೆಯ ಅಧ್ಯಕ್ಷತೆ ವಹಿಸುವ ಮೊದಲು ವಿಕ್ರಮಸಿಂಘೆ ಅವರು ಕೆಲವು ಪಕ್ಷದ ನಾಯಕರೊಂದಿಗೆ ಆರಂಭಿಕ ಮಾತುಕತೆ ನಡೆಸಿದರು.

ಇದನ್ನು ಓದಿ : ravindra jadeja : ಸಿಎಸ್​ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್​ಗಳನ್ನು ಡಿಲೀಟ್​ ಮಾಡಿದ ರವೀಂದ್ರ ಜಡೇಜಾ

ಇದನ್ನೂ ಓದಿ : ಯುವ ಆಟಗಾರನ ಹಾದಿಗೆ ವಿರಾಟ್ ಅಡ್ಡಗಾಲು, ಈಗೇನ್ಮಾಡ್ತಾರೆ ಟೀಮ್ ಇಂಡಿಯಾ ಹೀರೋ ?

ಇದನ್ನೂ ಓದಿ : ವಿಶಾಲ ಗಾಣಿಗ ಕೊಲೆ ಪ್ರಕರಣ : ಸುಪಾರಿ ಕಿಲ್ಲರ್‌ ಕೊನೆಗೂ ಅರೆಸ್ಟ್‌, ಆರೋಪಿ ಬಂಧನದ ಹಿಂದಿದೆ ರೋಚಕ ಸ್ಟೋರಿ

Sri Lanka crisis : PM Wickremesinghe says willing to resign, make way for new government

Comments are closed.