ಸೋಮವಾರ, ಏಪ್ರಿಲ್ 28, 2025
HomeWorldಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತ : ಪಜಾ ನೆಡುಮಾರನ್ ಹೇಳಿಕೆಯನ್ನು ತಳ್ಳಿಹಾಕಿದ ಶ್ರೀಲಂಕಾ

ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಜೀವಂತ : ಪಜಾ ನೆಡುಮಾರನ್ ಹೇಳಿಕೆಯನ್ನು ತಳ್ಳಿಹಾಕಿದ ಶ್ರೀಲಂಕಾ

- Advertisement -

ನವದೆಹಲಿ: ಒಂದು ಕಾಲದಲ್ಲಿ ಶ್ರೀಲಂಕಾದ ನಿದ್ದೆಗೆಡಿಸಿದ್ದ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ (LTTE Cheif Prabhakaran) ದ್ವೀಪ ರಾಷ್ಟ್ರದ ಸೇನೆಯಿಂದ 2009ರಲ್ಲಿಯೇ ಹತ್ಯೆಗೀಡಾಗಿದ್ದ. ಆದರೆ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ ಎಂದು ತಮಿಳು ರಾಷ್ಟ್ರೀಯ ವಾದಿ ನಾಯಕನೋರ್ವ ಹೇಳಿಕೆ ನೀಡಿದ್ದಾನೆ. ಇದರ ಬೆನ್ನಲ್ಲೇ ಶ್ರೀಲಂಕಾ ಈ ಹೇಳಿಕೆಯನ್ನು ತಳ್ಳಿಹಾಕಿದ್ದು, ತಮಾಷೆ ಎಂದು ಕರೆದಿದೆ.

ತಮಿಳುನಾಡಿನ ಹೆಸರಾಂತ ರಾಷ್ಟ್ರೀಯವಾದಿ ನಾಯಕ ಪಜಾ ನೆಡುಮಾರನ್ ತಂಜಾವೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಿಬರೇಶನ್ ಟೈಗರ್ಸ್ ಆಫ್ ತಮಿಳು ಈಳಂ (ಎಲ್‌ಟಿಟಿಇ) ನಾಯಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೇ ಅವರು ಈಗ ಕಾಣಿಸಿಕೊಳ್ಳಲು ಅನುಕೂಲಕರ ವಾತಾವರಣವಿದೆ ಎಂದು ಹೇಳಿದ್ದರು. ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ ಇನ್ನೂ ಜೀವಂತವಾಗಿದ್ದಾರೆ, ತಮಿಳಿನ ನಾಯಕ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

ಪಜಾ ನೆಡುಮಾರನ್ ಹೇಳಿಕೆಯ ಬೆನ್ನಲ್ಲೇ ಶ್ರೀಲಂಕಾದ ರಕ್ಷಣಾ ಸಚಿವಾಲಯ ನೆಡುಮಾರನ್ ಅವರ ಹೇಳಿಕೆಯನ್ನು ತಮಾಷೆ ಎಂದು ಕರೆದಿದೆ. ಅಲ್ಲದೇ ಎಲ್‌ಟಿಟಿಇ ಮುಖ್ಯಸ್ಥ ವೇಲುಪಿಳ್ಳೈ ಪ್ರಭಾಕರನ್ 19 ಮೇ 2009 ರಂದು ಕೊಲ್ಲಲ್ಪಟ್ಟರು ಎಂದು ದೃಢಪಡಿಸಲಾಗಿದೆ. ಅಲ್ಲದೇ ಡಿಎನ್ಎ ಅದನ್ನು ಸಾಬೀತುಪಡಿಸಿದೆ” ಎಂದು ಶ್ರೀಲಂಕಾದ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ನಳಿನ್ ಹೆರಾತ್ ತಿಳಿಸಿರುವ ಕುರಿತು ಪಿಟಿಐ ವರದಿ ಮಾಡಿದೆ. ಶ್ರೀಲಂಕಾದಲ್ಲಿ 1983 ರಲ್ಲಿ ಎಲ್‌ಟಿಟಿಇ ಹಾಗೂ ಶ್ರೀಲಂಕಾ ಸರಕಾರದ ನಡುವೆ ಹೋರಾಟದ ಆರಂಭಗೊಂಡಿತ್ತು. ಸುದೀರ್ಘ ಅವಧಿಯ ವರೆಗೆ ನಡೆದ ಹೋರಾಟದಲ್ಲಿ ಶ್ರೀಲಂಕಾದ ಸೇನೆಯು ಎಲ್‌ಟಿಟಿಇ ನಾಯಕ ನನ್ನು ಕೊಲ್ಲುವ ಮೂಲಕ ಮೇ 2009 ರಲ್ಲಿ ದ್ವೀಪ ರಾಷ್ಟ್ರದಲ್ಲಿ ಸುಮಾರು ಮೂರು ದಶಕಗಳ ಕ್ರೂರ ಅಂತರ್ಯುದ್ಧವನ್ನು ಕೊನೆಗೊಳಿಸಿತ್ತು.

ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ತಮಿಳರಿಗೆ ಸ್ವತಂತ್ರ ರಾಜ್ಯಕ್ಕಾಗಿ ಎಲ್‌ಟಿಟಿಇ ಹೋರಾಡುತ್ತಿತ್ತು. ಶ್ರೀಲಂಕಾ ಸೇನೆಯಿಂದ ಪ್ರಭಾಕರನ್ ಹತ್ಯೆಯಾದ ನಿಖರವಾದ ದಿನಾಂಕ ತಿಳಿದಿಲ್ಲವಾದರೂ, ಮೇ 19, 2009 ರಂದು ಅವನ ಮರಣವನ್ನು ಘೋಷಿಸಲಾಯಿತು. ಮೇ 18, 2009 ರಂದು ಆಗಿನ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು 26 ವರ್ಷಗಳ ಯುದ್ಧದ ಅಂತ್ಯವನ್ನು ಘೋಷಿಸಿದರು, ಇದರಲ್ಲಿ 1,00,000 ಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟರು. ಈ ಯುದ್ದದ ನಂತರದಲ್ಲಿ ಲಕ್ಷಾಂತರ ಶ್ರೀಲಂಕಾದವರು, ಮುಖ್ಯವಾಗಿ ಅಲ್ಪಸಂಖ್ಯಾತ ತಮಿಳರು ದೇಶ ಮತ್ತು ವಿದೇಶಗಳಲ್ಲಿ ನಿರಾಶ್ರಿತರಾಗಿ ಸ್ಥಳಾಂತರಗೊಂಡರು.

ಇದನ್ನೂ ಓದಿ : List of Top Universities: ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವಿರಾ ? ಹಾಗಾದ್ರೆ ಇಲ್ಲಿದೆ ವಿಶ್ವದ 10 ಉನ್ನತ ವಿವಿಗಳ ಪಟ್ಟಿ

ಇದನ್ನೂ ಓದಿ : ಟರ್ಕಿಯಲ್ಲಿ ಭೂಕಂಪನ : ಸಿರಿಯಾದಲ್ಲಿ 34,000ಕ್ಕೇರಿದ ಸಾವಿನ ಸಂಖ್ಯೆ

Sri Lanka Dismisses Tamil Nadu Leader Nedumaran Claim That LTTE Cheif Prabhakaran Is Alive Calls It A Joke

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular