ಕಾಬೂಲ್ : Afghanistan :ದಾಳಿಕೋರರ ಸತತ ದಾಳಿಗಳಿಂದ ಕಂಗೆಟ್ಟು ಅಪ್ಘಾನಿಸ್ತಾನವನ್ನು ತೊರೆದಿರುವ ಭಾರತೀಯರಿಗೆ ಮಹತ್ವದ ಮಾಹಿತಿಯನ್ನು ನೀಡಿರುವ ತಾಲಿಬಾನ್ ಸರ್ಕಾರವು ಅಪ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಹರಿಸಿದ್ದೇವೆ.ಹೀಗಾಗಿ ಹಿಂದೂಗಳು ಹಾಗೂ ಸಿಖ್ಖರು ತಾಲಿಬಾನ್ ಆಡಳಿತದ ರಾಷ್ಟ್ರಕ್ಕೆ ಮರಳಬಹುದು ಎಂದು ಹೇಳಿದೆ.
ತಾಲಿಬಾನ್ ರಾಜ್ಯ ಸಚಿವರ ಕಚೇರಿಯ ಮಹಾನಿರ್ದೇಶಕ ಡಾ. ಮುಲ್ಲಾ ಅಬ್ದುಲ್ ವಾಸಿ ಜುಲೈ 24ರಂದು ಅಪ್ಘಾನಿಸ್ತಾನದ ಹಿಂದೂ ಹಾಗೂ ಸಿಖ್ ಕೌನ್ಸಿಲ್ನ ಹಲವಾರು ಸದಸ್ಯರನ್ನು ಭೇಟಿಯಾಗಿ ಬಳಿಕ ಅಪ್ಘಾನಿಸ್ತಾನದ ಮುಖ್ಯಸ್ಥರ ಕಚೇರಿಯಿಂದ ಟ್ವೀಟ್ ಮಾಡಿದ ಬಳಿಕ ಈ ಸಮರ್ಥನೆ ಹೊರಬಿದ್ದಿದೆ.
ಡಾ. ಮುಲ್ಲಾ ಅಬ್ದುಲ್ ವಾಸಿ ಕಾಬೂಲ್ನಲ್ಲಿ ಹಿಂದೂ ಹಾಗೂ ಸಿಖ್ ನಾಯಕರ ನಿಯೋಗವನ್ನು ಭೇಟಿ ಮಾಡಿದ್ದಾರೆ. ಭದ್ರತಾ ಸಮಸ್ಯೆಗಳಿಂದಾಗಿ ಅಪ್ಘನ್ ರಾಷ್ಟ್ರವನ್ನು ತೊರೆದಿದ್ದ ಎಲ್ಲಾ ಭಾರತೀಯರು ಹಾಗೂ ಸಿಖ್ ದೇಶ ಭಾಂಧವರು ಇದೀಗ ಅಪ್ಘಾನಿಸ್ತಾನಕ್ಕೆ ಮರಳಬಹುದಾಗಿದೆ . ದೇಶದಲ್ಲಿ ಈ ಭದ್ರತೆಯನ್ನು ಮರುಸ್ಥಾಪಿಸಲಾಗಿದ್ದು ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಲಾಗಿದೆ.
ತಾಲಿಬಾನ್ ಹೊರಡಿಸಿರುವ ಪ್ರಕಟಣೆಯ ಪ್ರಕಾರ, ಕಾಬೂಲ್‌ನ ಗುರುದ್ವಾರದ ಮೇಲೆ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯದ ದಾಳಿಯನ್ನು ತಡೆದಿದ್ದಕ್ಕಾಗಿ ಸಿಖ್ ನಾಯಕರು ತಾಲಿಬಾನ್ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ.
ಜೂನ್ 18ರಂದು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ ಕಾಬೂಲ್‌ನ ಕಾರ್ಟೆ ಪರ್ವಾನ್ ಗುರುದ್ವಾರದ ಮೇಲೆ ದಾಳಿ ಮಾಡಿತ್ತು. ಮಾರಣಾಂತಿಯ ದಾಳಿಯ ಸಂದರ್ಭದಲ್ಲಿ ಸಿಖ್ ಸೇರಿದಂತೆ ಇಬ್ಬರು ಪ್ರಾಣ ಕಳೆದುಕೊಂಡಿದ್ದರು.
ಮೂಲಗಳ ಪ್ರಕಾರ, ದಾಳಿಕೋರರು ಆವರಣವನ್ನು ಪ್ರವೇಶಿಸಿದ ಸಂದರ್ಭದಲ್ಲಿ ಸರಿ ಸುಮಾರು 25 ರಿಂದ ಮೂವತ್ತು ಜನರು ತಮ್ಮ ಬೆಳಗ್ಗಿನ ಪ್ರಾರ್ಥನೆಯನ್ನು ಸಲ್ಲಿಸಲು ಸಂಕೀರ್ಣದ ಒಳಗೆ ಹಾಜರಿದ್ದರು . ಈ ದಾಳಿಯಿಂದ ಸುಮಾರು 10 ರಿಂದ 15 ಜನರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಗುರುದ್ವಾರದ ಒಳಗಿದ್ದ ಸಿಬ್ಬಂದಿ ಅಹ್ಮದ್ ಎಂಬಾತನನ್ನು ದಾಳಿಕೋರರು ಕೊಂದು ಹಾಕಿದ್ದರು. ಅಫ್ಘಾನಿಸ್ತಾನದಲ್ಲಿ ಸಿಖ್ ಸಮುದಾಯ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರು ಅಫ್ಘಾನಿಸ್ತಾನದಲ್ಲಿ ಹಿಂಸಾಚಾರಕ್ಕೆ ಗುರಿಯಾಗಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ 15 ರಿಂದ 20 ಭಯೋತ್ಪಾದಕರು ಕಾಬೂಲ್‌ನ ಕಾರ್ಟ್-ಎ-ಪರ್ವಾನ್ ಜಿಲ್ಲೆಯ ಗುರುದ್ವಾರಕ್ಕೆ ನುಗ್ಗಿ ಕಾವಲುಗಾರರನ್ನು ಕಟ್ಟಿಹಾಕಿದ್ದರು.ಮಾರ್ಚ್ 2020 ರಲ್ಲಿ, ಕಾಬೂಲ್‌ನ ಶಾರ್ಟ್ ಬಜಾರ್ ಪ್ರದೇಶದ ಶ್ರೀ ಗುರು ಹರ್ ರಾಯ್ ಸಾಹಿಬ್ ಗುರುದ್ವಾರದಲ್ಲಿ ಮಾರಣಾಂತಿಕ ದಾಳಿ ನಡೆಯಿತು, ಇದರಲ್ಲಿ 27 ಸಿಖ್ಖರು ಕೊಲ್ಲಲ್ಪಟ್ಟರು ಮತ್ತು ಹಲವರು ಗಾಯಗೊಂಡರು. ಇಸ್ಲಾಮಿಕ್ ಸ್ಟೇಟ್ ಉಗ್ರರು ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.
ಇದನ್ನು ಓದಿ : Most Consecutive ODI Series WIN : ಪಾಕ್ ವಿಶ್ವದಾಖಲೆ ಪೀಸ್ ಪೀಸ್, ವಿಂಡೀಸ್”ನಲ್ಲಿ ಅದ್ವಿತೀಯ ವಿಶ್ವದಾಖಲೆ ಬರೆದ ಯಂಗ್ ಇಂಡಿಯಾ
Taliban claims to solve security problems, urges Hindus, Sikhs to return to Afghanistan