ಕ್ಯಾಲಿಫೋರ್ನಿಯಾ : elon musk : ಸಾಮಾಜಿಕ ಮಾಧ್ಯಮದ ಬಹುದೊಡ್ಡ ವೇದಿಕೆ ಟ್ವಿಟರ್ನ್ನು ಖರೀದಿ ಮಾಡುತ್ತೇನೆಂದು ಹೇಳಿದ್ದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್ ಇದೀಗ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್ ಸೂಕ್ತವಾದ ಮಾಹಿತಿಯನ್ನು ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಟೆಸ್ಲಾ ಕಂಪನಿ ಮಾಲೀಕ ತನ್ನ ಈ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ (elon musk abandons deal ) ಎಂದು ಹೇಳಲಾಗುತ್ತಿದೆ.
ಹೂಡಿಕೆದಾರರ ಕಂಪನಿಯಾಗಿದ್ದ ಟ್ವಿಟರ್ನನ್ನು ಖರೀದಿ ಮಾಡಿ ಖಾಸಗಿ ಕಂಪನಿಯನ್ನಾಗಿ ಮಾಡಲು ಹೊರಟಿದ್ದ ಎಲಾನ್ ಮಸ್ಕ್ 3.52 ಲಕ್ಷ ಕೋಟಿ ರೂಪಾಯಿಗಳನ್ನು ನೀಡಿ ಟ್ವಿಟರ್ ಖರೀದಿ ಮಾಡುವವರಿದ್ದರು. ಆದರೆ ನಕಲಿ ಖಾತೆಗಳ ವಿಚಾರವಾಗಿಯೇ ತಮ್ಮ ನಿರ್ಧಾರವನ್ನು ತಡೆ ಹಿಡಿದಿದ್ದರು. ಆದರೆ ಇದೀಗ ತಾವು ಟ್ವಿಟರ್ ಕಂಪನಿಯನ್ನು ಖರೀದಿ ಮಾಡುತ್ತಿಲ್ಲ ಎಂಬ ನಿರ್ಧಾರವನ್ನು ಸ್ಪಷ್ಟವಾಗಿ ಘೋಷಣೆ ಮಾಡಿದ್ದಾರೆ. ಇತ್ತ ಟ್ವಿಟರ್ ಎಲಾನ್ ಮಸ್ಕ್ ವಿರುದ್ಧ ಬಹುದೊಡ್ಡ ಮಟ್ಟದಲ್ಲಿ ಕಾನೂನು ಹೋರಾಟಕ್ಕೆ ಅಣಿಯಾಗ್ತಿದೆ ಎಂದು ಹೇಳಲಾಗುತ್ತಿದೆ.
ಟ್ವಿಟರ್ ಖರೀದಿಯ ಮಾತುಕತೆಗೆ ಎಲಾನ್ ಮಸ್ಕ್ ಮುಂದಾಗಿದ್ದ ಸಂದರ್ಭದಲ್ಲಿ ಕಂಪನಿಯು ಒಂದು ವೇಳೆ ಮಸ್ಕ್ ಈ ಕಂಪನಿಯನ್ನು ಖರೀದಿ ಮಾಡುವ ನಿರ್ಧಾರವನ್ನು ರದ್ದುಗೊಳಿಸಿದಲ್ಲಿ 1 ಶತಕೋಟಿ ರೂಪಾಯಿಗಳನ್ನು ಬ್ರೇಕಪ್ ಫೀ ರೂಪದಲ್ಲಿ ನೀಡಬೇಕು ಎಂಬ ಒಪ್ಪಂದವಾಗಿತ್ತಯ. ಹೀಗಾಗಿ ಈ ಒಪ್ಪಂದದ ಅಡಿಯಲ್ಲಿ ಟ್ವಿಟರ್ ಇದೀಗ ಎಲಾನ್ ಮಸ್ಕ್ ವಿರುದ್ಧ ಕಾನೂನು ಸಮರ ನಡೆಸುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಅಥವಾ ಎಲಾನ್ ಮಸ್ಕ್ ಟ್ವಿಟರ್ ಖರೀದಿ ಮಾಡಲೇಬೇಕು ಎಂದು ಕಂಪನಿಯು ಪಟ್ಟು ಹಿಡಿಯುವ ಸಾಧ್ಯತೆ ಕೂಡ ಇದೆ.
ಟ್ವಿಟರ್ ಕಂಪನಿಗೆ ಎಲಾನ್ ಮಸ್ಕ್ ಪರ ವಕೀಲ ಮೈಕ್ ರಿಂಗ್ಲರ್ ಪತ್ರವನ್ನು ಬರೆದಿದ್ದು ನನ್ನ ಕಕ್ಷಿದಾರ ಸುಮಾರು 2 ತಿಂಗಳ ಹಿಂದೆಯೇ ಟ್ವಿಟರ್ ಕಂಪನಿ ಬಳಿ ನಕಲಿ ಖಾತೆಗಳ ಬಗ್ಗೆ ವಿವರಣೆ ನೀಡುವಂತೆ ಕೇಳಿದ್ದಾರೆ. ಆದರೆ ಈ ಮಾಹಿತಿಯನ್ನು ನೀಡಲು ಟ್ವಿಟರ್ ವಿಫಲವಾಗಿದೆ ಅಥವಾ ನಿರಾಕರಿಸಿದೆ. ಈ ಮೂಲಕ ಟ್ವಿಟರ್ ಎಲಾನ್ ಮಸ್ಕ್ರ ಕೋರಿಕೆಯನ್ನು ನಿರ್ಲಕ್ಷಿಸಿದಂತಾಗಿದೆ. ಹೀಗಾಗಿ ಈ ಶತಕೋಟಿ ಡಾಲರ್ ಮಾರಾಟದ ಒಪ್ಪಂದವನ್ನು ರದ್ದು ಮಾಡಲಾಗ್ತಿದೆ ಎಂದು ಬರೆದಿದ್ದಾರೆ.
ಇದನ್ನು ಓದಿ : Vikram Is Fine : ತಮಿಳು ನಟ ವಿಕ್ರಮ್ಗೆ ಹೃದಯಾಘಾತವಾಗಿಲ್ಲ : ವದಂತಿಗಳಿಗೆ ಕಿವಿಗೊಡಬೇಡಿ ಎಂದ ಮ್ಯಾನೇಜರ್
ಇದನ್ನೂ ಓದಿ : amarnath yatra : ಅಮರನಾಥ ಗುಹೆಯಲ್ಲಿ ಮೇಘಸ್ಫೋಟ : ಕನ್ನಡಿಗರ ರಕ್ಷಣೆಗೆ ಸಹಾಯವಾಣಿ ಆರಂಭ
twitter says it will sue tesla ceo to enforce usd 44 billion deal as elon musk abandons deal to buy twitter