ಸೋಮವಾರ, ಏಪ್ರಿಲ್ 28, 2025
HomeWorldRishi Sunak Next UK PM : ಇಂಗ್ಲೆಂಡ್ ಪ್ರಧಾನಿ ಆಗ್ತಾರಾ ಭಾರತೀಯ ರಿಷಿ ಸುನಕ್

Rishi Sunak Next UK PM : ಇಂಗ್ಲೆಂಡ್ ಪ್ರಧಾನಿ ಆಗ್ತಾರಾ ಭಾರತೀಯ ರಿಷಿ ಸುನಕ್

- Advertisement -

ಲಂಡನ್ : UK Leadership : ಬ್ರಿಟನ್ ಪ್ರಧಾನಿ ಲಿಜ್ ಟ್ರೆಸ್ ವಿರುದ್ದ ಇದೀಗ ಸ್ವಪಕ್ಷೀಯರೇ ತಿರುಗಿ ಬಿದ್ದಿದ್ದಾರೆ. ಹೀಗಾಗಿ ಇಂಗ್ಲೆಂಡ್ ಪ್ರಧಾನಿ ಲಿಜ್ ಟ್ರೆಸ್ ಅವರನ್ನು ಹುದ್ದೆಯಿಂದ ಕೆಳಗೆ ಇಳಿಸಲು ಸಿದ್ದತೆ ನಡೆದಿದೆ. ಈ ನಡುವಲ್ಲೇ ಭಾರತೀಯ ಮೂಲದ ರಿಷಿ ಸುನಕ್ (Rishi Sunak) ಮತ್ತೊಮ್ಮೆ ಇಂಗ್ಲೆಂಡ್ ಪ್ರಧಾನಿ (Next UK PM) ಆಗುವ ಸಾಧ್ಯತೆಯಿದೆ. ಬ್ರಿಟನ್ ಪ್ರಧಾನಿ ಅವರು ಕೆಲವೇ ದಿನಗಳು ಅಥವಾ ವಾರಗಳಲ್ಲಿ ಪದಚ್ಯುತಿಗೊಳ್ಳಲಿದ್ದಾರೆ. ಹೀಗಾಗಿ ಬ್ರಿಟನ್ ಮುಂದಿನ ಪ್ರಧಾನಿ ಲಿಸ್ಟ್ ನಲ್ಲಿ ಭಾರತೀಯ ಮೂಲ ರಿಷಿ ಸುನಕ್ ಅಥವಾ ಪೆನ್ನಿ ಮೊರ್ಡ್ಯುಂಟ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಅದ್ರಲ್ಲೂ ರಿಷಿ ಸುನಕ್ ಇಂಗ್ಲೆಂಡ್ ಪ್ರಧಾನಿ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ಪೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ ರಿಷಿ ಸುನಕ್ ಈ ಹಿಂದೆಯೇ ಇಂಗ್ಲೆಂಡ್ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದ್ರೆ ಕೊನೆಯ ಹಂತದಲ್ಲಿ ಲಿಜ್ ಟ್ರೆಸ್ ಅವರು ಇಂಗ್ಲೆಂಡ್ ಪ್ರಧಾನಿ ಆಗಿ ನೇಮಕವಾಗಿದ್ದರು. ಯೂಗೋವ್ ಸಮೀಕ್ಷೆಯ ವರದಿಯ ಪ್ರಕಾರ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾಗವಹಿಸಿದ ಶೇಕಡಾ 62 ರಷ್ಟು ಮತದಾರರು ಲಿಜ್ ಟ್ರಸ್ ಅವರನ್ನು ಬ್ರಿಟಿಷ್ ಪ್ರಧಾನಿಯಾಗಿ ಆಯ್ಕೆ ಮಾಡುವ ಮೂಲಕ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಆದರೆ ಶೇಕಡಾ 16 ರಷ್ಟು ಮತದಾರರು ಲಿಜ್ ಟ್ರಸ್ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡುವ ಮೂಲಕ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಕನ್ಸರ್ವೇಟಿವ್ ಪಕ್ಷದ ಸಂಸದರು ಈಗ 42 ವರ್ಷದ ಮಾಜಿ ಬ್ರಿಟಿಷ್-ಭಾರತೀಯ ಚಾನ್ಸೆಲರ್ ರಿಷಿ ಸುನಕ್ ಅವರನ್ನು ಯುಕೆ ಪ್ರಧಾನಿಯನ್ನಾಗಿ ಮಾಡಲು ಪರಿಗಣಿಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ನಡೆದ ಇಂಗ್ಲೆಂಡ್ ಅಧ್ಯಕ್ಷೀಯ ಚುನಾವಣೆಯಲ್ಲಿ ಲಿಜ್ ಟ್ರಸ್ ನಂತರ ಸುನಕ್ ಎರಡನೇ ಸ್ಥಾನ ಪಡೆದಿದ್ದರು. ಇದೀಗ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ಪಡೆದಿದ್ದ ಪೆನ್ನಿ ಮೊರ್ಡೆಂಟ್ ಅವರ ಹೆಸರೂ ಕೂಡ ಪ್ರಧಾನಿ ಹುದ್ದೆಯ ರೇಸ್ ನಲ್ಲಿದೆ. ಆದರೆಪಾರ್ಲಿಮೆಂಟರಿ ಪಾರ್ಟಿಯಲ್ಲಿ ಪೆನ್ನಿ ಹೆಚ್ಚಿನ ಮತಗಳನ್ನು ಪಡೆದುಕೊಂಡಿದ್ದರು.

ಯುಕೆ ಸರ್ಕಾರವು ಕಳೆದ ತಿಂಗಳ ಅಂತ್ಯದಿಂದಲೂ ವಿವಾದಾತ್ಮಕ ಮಿನಿ-ಬಜೆಟ್‌ನ ಗಂಭೀರ ಪರಿಣಾಮಗಳನ್ನು ಎದುರಿಸುತ್ತಿದೆ. ಅಲ್ಲದೇ ಬ್ರಿಟನ್ ಚಾನ್ಸೆಲರ್ ಕ್ವಾಸಿ ಕ್ವಾರ್ಟೆಂಗ್ ವಾಷಿಂಗ್ಟನ್ ನಲ್ಲಿ ನಡೆದ ಐಎಂಎಫ್ ಸಭೆಯಿಂದ ನಿರೀಕ್ಷೆಗಿಂತ ಒಂದು ದಿನ ಮುಂಚಿತವಾಗಿ ವಾಪಾಸಾಗಿದ್ದರು.ಲಿಜ್ ಟ್ರಸ್ ಅವರು ಹಣಕಾಸು ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರನ್ನು ವಜಾಗೊಳಿಸಿ, ದೇಶದ ಹಣಕಾಸು ಖಾತೆಯನ್ನು ನಿರ್ವಹಿಸಲು ಜೆರೆಮಿ ಹಂಟ್ ನೇಮಕ ಮಾಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ : Pak Horror: ಆಸ್ಪತ್ರೆಯೊಂದರ ಛಾವಣಿಯಲ್ಲಿ ಪತ್ತೆಯಾಯ್ತು 200ಕ್ಕೂ ಅಧಿಕ ನಗ್ನ ಕೊಳೆತ ಶವಗಳು : ತನಿಖೆಗೆ ಆದೇಶ

ಇದನ್ನೂ ಓದಿ : Harry Potter Actor Robbie Coltrane : ಹ್ಯಾರಿ ಪಾಟರ್ ಚಲನಚಿತ್ರ ನಟ ರಾಬಿ ಕೋಲ್ಟ್ರೇನ್ ಇನ್ನಿಲ್ಲ

UK Leadership : Rishi Sunak or penny mordaunt Next UK PM Liz Truss can be Removed

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular