ಬ್ರಿಟನ್: Britain PM: ಬ್ರಿಟನ್ ಪ್ರಧಾನಿ ಲಿಜ್ ಟ್ರುಸ್ ರಾಜೀನಾಮೆ ಬಳಿಕ ರಾಜಕೀಯ ಮತ್ತಷ್ಟು ಕುತೂಹಲ ಕೆರಳಿಸಿದೆ. ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಬ್ರಿಟನ್ ಪ್ರಧಾನಿ ಹುದ್ದೆ ರೇಸ್‍ನಲ್ಲಿದ್ದ ಬೋರಿಸ್ ಜಾನ್ಸನ್ ಕಣದಿಂದ ಹಿಂದೆ ಸರಿದಿದ್ದು, ಭಾರತೀಯ ಮೂಲದ ಬ್ರಿಟನ್‍ನ ಮಾಜಿ ವಿತ್ತ ಸಚಿವ ರಿಷಿ ಸುನಕ್ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ.
ಕಳೆದ ವಾರ ಲಿಜ್ ಟ್ರುಸ್ ರಾಜೀನಾಮೆಯಿಂದ ಬ್ರಿಟನ್ ಪ್ರಧಾನಿ ಹುದ್ದೆ ತೆರವಾಗಿತ್ತು. ರಿಷಿ ಸುನಕ್, ಬೋರಿಸ್ ಜಾನ್ಸನ್ ಹಾಗೂ ಸಾಮಾನ್ಯ ಸಭೆಯಲ್ಲಿ ಸಭಾ ನಾಯಕಿ ಆಗಿರುವ ಪೆನ್ನಿ ಮೋರ್ಡಾಂಟ್ ಪ್ರಧಾನಿ ರೇಸ್‍ನಲ್ಲಿ ಇದ್ದಾರೆ. ಈ ಪೈಕಿ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಈ ಬಾರಿಯ ಪ್ರಧಾನಿ ಹುದ್ದೆ ರೇಸ್‍ನಿಂದ ಹಿಂದೆ ಸರಿದಿದ್ದಾರೆ. ರಿಷಿ ಸುನಕ್‍ಗೆ ಸಂಸದರ ಬೆಂಬಲದ ಜೊತೆಗೆ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತರ ಬೆಂಬಲವೂ ಸಿಕ್ಕಿದ್ದು, ಅವರೇ ಪ್ರಧಾನಿ ಆಗುವುದು ಬಹುತೇಕ ಖಚಿತವಾಗಿದೆ. ಕನ್ಸರ್ವೇಟಿವ್ ಪಕ್ಷದ 146 ಸಂಸದರ ಬೆಂಬಲ ರಿಷಿಗೆ ಸಿಕ್ಕಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಬೆಂಬಲಗಳು ರಿಷಿ ಸುನಕ್‍ಗೆ ದೊರೆಯುತ್ತಿವೆ ಎನ್ನಲಾಗಿದೆ.
ಬೋರಿಸ್ ಹಿಂದೆ ಸರಿಯಲು ಕಾರಣವೇನು..?
ಹಲವು ಹಗರಣಗಳ ಆರೋಪದಲ್ಲಿ ಸಿಲುಕಿದ್ದ ಬೋರಿಸ್ ಜಾನ್ಸನ್ ಕಳೆದ 3 ತಿಂಗಳ ಹಿಂದಷ್ಟೇ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಬಳಿಕ ಮತ್ತೆ ಪಿಎಂ ರೇಸ್‍ನಲ್ಲಿ ಕಾಣಿಸಿಕೊಳ್ಳಲು ಇಚ್ಛಿಸಿದ್ದರು. ಆದರೆ ಈಗ ಮತ್ತೆ ಪ್ರಧಾನಿ ಹುದ್ದೆಯ ಆಕಾಂಕ್ಷಿ ತಾನಲ್ಲ ಎನ್ನುವ ಮೂಲಕ ಕಣದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ರಿಷಿ ಸುನಕ್‍ಗೆ ಹಾದಿ ಮತ್ತಷ್ಟು ಸುಗಮವಾಗಿದೆ.
ತನ್ನ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಬೋರಿಸ್ ಜಾನ್ಸನ್, ‘ಕೆಲ ದಿನಗಳಿಂದ ಬಹಳಷ್ಟು ಯೋಚನೆ ಮಾಡಿ ಈ ನಿರ್ಧಾರಕ್ಕೆ ಬಂದಿದ್ದೇನೆ. ಸಂಸತ್ತಿನಲ್ಲಿ ಪಕ್ಷದ ಒಗ್ಗಟ್ಟು ತುಂಬಾ ಮುಖ್ಯ. ಇದೇ ಕಾರಣಕ್ಕೆ ತಾನು ಪಿಎಂ ರೇಸ್‍ನಿಂದ ಹಿಂದೆ ಸರಿದಿದ್ದೇನೆ. ಈ ಸ್ಪರ್ಧೆಯಲ್ಲಿ ಯಾರೇ ಗೆದ್ದರೂ ತನ್ನ ಬೆಂಬಲ ಅವರಿಗೆ ಇರುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: Amazon Summoned : ಧಾರ್ಮಿಕ ಮತಾಂತರಕ್ಕೆ ಎನ್‌ಜಿಒ ಫಂಡಿಂಗ್ : ಅಮೆಜಾನ್ ವಿರುದ್ದ ಸಮನ್ಸ್ʼ ಜಾರಿ
UK PM race: Boris Johnson pulls out: clears the way for Rishi Sunak