Boris Johnson resigns : ಕನ್ಸರ್ವೇಟಿವ್ ಪಕ್ಷದಲ್ಲಿ ತೀವ್ರ ವಿರೋಧವನ್ನು ಎದುರಿಸುತ್ತಿದ್ದ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ. ದೇಶಕ್ಕೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಿನಿಂದಲೇ ಆರಂಭವಾಗಬೇಕು ಎಂದು ಬೋರಿಸ್ ಜಾನ್ಸನ್ ದೇಶವನ್ನುದ್ದೇಶಿಸಿ ಹೇಳಿದ್ದಾರೆ. ಸಂಸದೀಯ ಕನ್ಸರ್ವೇಟಿವ್ ಪಕ್ಷದ ಇಚ್ಛೆಯ ಅನುಸಾರ ದೇಶಕ್ಕೆ ಹೊಸ ನಾಯಕನ ಆಯ್ಕೆಯಾಗಬೇಕಿದೆ ಎಂದೂ ಇದೇ ವೇಳೆ ಅವರು ಹೇಳಿದರು.
ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಈಗಲೇ ಆರಂಭಗೊಳ್ಳಬೇಕು ಎಂದು ರಾಜೀನಾಮೆ ನೀಡಿದ ಬಳಿಕ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಸರಿ ಸುಮಾರು ಮೂರು ವರ್ಷಗಳ ಹಿಂದೆ ಬ್ರಿಟನ್ನ ಪ್ರಧಾನಿಯಾಗಿ ಆಯ್ಕೆಯಾದ ಬೋರಿಸ್ ಜಾನ್ಸನ್ ಇತ್ತೀಚಿನ ದಿನಗಳಲ್ಲಿ ಹಗರಣಗಳ ಸುರಿಮಳೆಯಲ್ಲಿಯೇ ಮುಳುಗಿದ್ದಾರೆ. ಇದರಿಂದಾಗಿ ಬೋರಿಸ್ ಜಾನ್ಸನ್ರ ಕಟ್ಟಾ ಬೆಂಬಲಿಗರೂ ಕೂಡ ಬೋರಿಸ್ ಜಾನ್ಸನ್ ಎಂದರೆ ಮೂಗು ಮುರಿಯುತ್ತಿದ್ದಾರೆ.
ಸಂಪುಟದ ಐವರು ಕ್ಯಾಬಿನೆಟ್ ಮಂತ್ರಿಗಳು ಸೇರಿದಂತೆ ಸರ್ಕಾರದ ಸುಮಾರು 60 ಮಂದಿ ಸದಸ್ಯರು ಮಂಗಳವಾರದಿಂದ ರಾಜೀನಾಮೆ ನೀಡುತ್ತಿದ್ದಾರೆ. ಅಲ್ಲದೇ ಬೋರಿಸ್ ಜಾನ್ಸನ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ಅನೇಕ ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಬೋರಿಸ್ ಜಾನ್ಸನ್ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಇರಾಕ್ ಮೂಲದ ನಾಧಿಮ್ ಜಹಾವಿ ಬೋರಿಸ್ ರಾಜೀನಾಮೆಗೆ ಬಹಿರಂಗವಾಗಿ ಆಗ್ರಹಿಸಿದ್ದರು. ಮುಂದಿನ ಅಕ್ಟೋಬರ್ಗೆ ನಿಗದಿಯಾಗಿರುವ ಕನ್ಸರ್ವೇಟಿವ್ ಪಕ್ಷದ ಸಮಾವೇಶದ ವೇಳೆಗೆ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಬ್ರಿಟನ್ನಲ್ಲಿ ಹೊಸ ನಾಯಕನ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬೋರಿಸ್ ಜಾನ್ಸನ್ ಪ್ರಧಾನಿಯಾಗಿ ಔಪಚಾರಿಕವಾಗಿ ಮುಂದುವರಿಯುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಇದನ್ನು ಓದಿ : section 144 imposed : ಕೆರೂರಿನಲ್ಲಿ ಅನ್ಯಕೋಮಿನ ಸಂಘರ್ಷದ ವೇಳೆ ಚಾಕು ಇರಿತ : ನಿಷೇಧಾಜ್ಞೆ ಜಾರಿ
ಇದನ್ನೂ ಓದಿ : MS Dhoni 41st birthday : ಎಂಎಸ್ ಧೋನಿಗೆ 41ನೇ ಹುಟ್ಟುಹಬ್ಬ: ವಿಶೇಷ ಗಿಫ್ಟ್ ಕೊಟ್ಟ ಪತ್ನಿ ಸಾಕ್ಷಿ, ರಿಷಬ್ ಪಂತ್
ಇದನ್ನೂ ಓದಿ : birth to three children : ಉಡುಪಿಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ
UK Prime Minister Boris Johnson resigns after mutiny in his party